ವಿಜಯ ದರ್ಪಣ ನ್ಯೂಸ್….
ವಿಶ್ವ ಮೆಚ್ಚುವಂತಹ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ : ಶ್ರೀಕಂಠ

ತಾಂಡವಪುರ ಏಪ್ರಿಲ್ 15 ಕ್ರಾಂತಿವೀರಸಂಗೊಳ್ಳಿ ರಾಯಣ್ಣ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೆ ಜಯಂತಿಯನ್ನು ಮೈಸೂರು ನಂಜನಗೂಡು ಊಟಿ ರಸ್ತೆ ಕತ್ವಡಿಪುರ ಗ್ರಾಮದ ಬಳಿ ಇರುವ ಕಪಿಲ ನದಿಯ ಪಕ್ಕದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಗೌರವಪೂರ್ವಕವಾಗಿ ಆಚರಿಸಲಾಯಿತು.
ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಸಕ ದರ್ಶನ್ ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ ಶ್ರೀಕಂಠ ಇತರರು ಸೇರಿದಂತೆ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ ಶ್ರೀಕಂಠ ಮಾತನಾಡಿ ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿಯಾಗಿ, ಸಮಾಜದ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕರೆಂದು ಸ್ಮರಿಸಿದರು. ಅವರ ಆದರ್ಶಗಳು ಇಂದಿಗೂ ಯುವಜನತೆಗೆ ಮಾರ್ಗದರ್ಶನವಾಗಿವೆ.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಮಹತ್ವವಾದ ಸಂವಿಧಾನ ನೀಡಿರುವ ಡಾ. ಬಿಆರ್ ಅಂಬೇಡ್ಕರ್ ಅವರ ಜ್ಞಾನ ಅತಿ ಶಕ್ತಿಯುತವಾದದ್ದು ಎಂದು ತಿಳಿಸಿದರು
ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಮಾತನಾಡಿ ಡಾಕ್ಟರ್ ಅಂಬೇಡ್ಕರ್ ರವರು ದೇಶ ಕಂಡಂತಹ ಅದ್ಭುತವಾದಂತಹ ಮಹಾ ನಾಯಕ ಅವರು ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ನಾವು ನಡೆದಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಿಗಮ ಮಂಡಳಿ, ಮಾಜಿ ಅಧ್ಯಕ್ಷರುಗಳಾದ ಎಸ್ ಮಾದೇವಯ್ಯ ಕೃಷ್ಣಪ್ಪಗೌಡ ಕೆಂಪಣ್ಣ ಚಿಕ್ಕ ರಂಗನಾಯಕ ಮಾರುತಿ ಎಂ ಸಿ ಬಸವಣ್ಣ ಮಹೇಶ್ ಮನೋಜ್ ಪ್ರದೀಪ್ ಡಿಎಸ್ಎಸ್ ಸುರೇಶ್ ನಂಜಪ್ಪ ಬಸವಯೋಗಿ ಜಗದೀಶ್ ಕೆಂಪರಾಜು ಚಂದ್ರು ವಿಶ್ವಕರ್ಮ ರಾಜು ಮರಾಠಿ ಬಸವರಾಜು ಸ್ವಾಮಿ ಕರಿಯ ಶಿವಪ್ಪ ಶಂಕರ ಕುಮಾರ್ ವಿಷ್ಣು ಮನೋಜ್ ಕೆಡಿ ಮಂಜು ಸೇರಿದಂತೆ ಮುಂತಾದವರು ಹಾಜರಿದ್ದರು











