ವಿಜಯ ದರ್ಪಣ ನ್ಯೂಸ್…..
ಬಿಜೆಪಿ ಮುಖಂಡ ಕೆ.ಉಮೇಶ್ ಶೆಟ್ಟಿರವರ ಹುಟ್ಟುಹಬ್ಬದ ಅಚರಣೆ
ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕ್ಯಾನ್ಸರ್, ಕಿಡ್ನಿ ಸಮಸ್ಯೆಯಿಂದ ಬಳತ್ತಿರುವವರಿಗೆ ಆರ್ಥಿಕ ಸಹಾಯ, ವಿಕಲಚೇತನರಿಗೆ ವೀಲ್ ಚೇರ್ ವಿತರಣೆ, ಮಹಿಳೆಯರಿಗೆ ಸೀರೆ ವಿತರಣೆ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ : ಬಿಜೆಪಿ ಜನಸಂಪರ್ಕ ಕಛೇರಿಯಲ್ಲಿ ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿರವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಅರ್ಥಪೂರ್ಣ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಆಯೋಜನೆ ಹಾಗೂ ಕ್ಯಾನ್ಸರ್ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವರಿಗೆ ಆರ್ಥಿಕ ಸಹಾಯಹಸ್ತ ಹಾಗೂ ವಿಕಲಚೇತನರಿಗೆ ವಿಲ್ ಚೇರ್ ಮತ್ತು ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ಶಾಸಕರ ಸಿ.ಕೆ.ರಾಮಮೂರ್ತಿ, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿರವರು, ಅಟ್ಟಿಕಾ ಗೋಲ್ಡ್ ಮಾಲೀಕ ಬೊಮ್ಮನಹಳ್ಳಿ ಬಾಬುರವರು ವಿತರಿಸಿದರು.
ಸಿ.ಕೆ.ರಾಮಮೂರ್ತಿರವರು ಮಾತನಾಡಿ ಅಧಿಕಾರ ಇರಲಿ ಇಲ್ಲದಿರಲಿ ಜನ ಸೇವೆ ನಿರಂತರವಾಗಿ ಕೆ.ಉಮೇಶ್ ಶೆಟ್ಟಿರವರು ಮಾಡುತ್ತಿದ್ದಾರೆ. ಕಳೆದ ಬಾರಿ ಅಲ್ಪ ಮತಗಳಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿದೆ 2028ರಲ್ಲಿ ಕೆ.ಉಮೇಶ್ ಶೆಟ್ಟಿರವರು ಶಾಸಕರಾಗಿ ಆಯ್ಕೆಯಾಗುವುದು ಖಚಿತ.
ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಮುಳುತ್ತಿರುವ ಹಡಗು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ನಾರಿಶಕ್ತಿ ವಂದನ ಮಸೂದೆ ವಿರೋಧಿಸಿ ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷವಾಗಿದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸ್ವಯಂ ಸೇವಕನಾಗಿ ಸೇವೆ ಮತ್ತು ದೇಶ ಮೊದಲು, ನಂತರ ಪಕ್ಷ ಎಂಬ ದೇಶ ಪ್ರೇಮದ ಪಾಠ ಕಲಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಹೆಮ್ಮೆಯಿಂದ ಹೇಳುತ್ತೇನೆ.
ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರ 12ವರ್ಷಗಳ ಆಡಳಿತದಿಂದ ದೇಶ ಆರ್ಥಿಕವಾಗಿ ಸುಭದ್ರವಾಗಿದೆ. ಕೊರೋನ ಮಹಾಕಾಲ, ಇರಾನ್, ಇಸ್ರೇಲ್ ಯುದ್ದ ಸಂಕಷ್ಟ ಸಮಯವನ್ನು ದಿಟ್ಟತನದಿಂದ ದೇಶದ ಜನರನ್ನು ಕಾಪಾಡಿದರು.
ಹುಟ್ಟಿದ ಮೇಲೆ ಸಾಧನೆ ಮಾಡಬೇಕು. ಜನರ ಜೊತೆಯಲ್ಲಿ ನಿಲ್ಲಬೇಕು ಧ್ವನಿ ಇಲ್ಲದ ಜನರು, ನೊಂದು ಬೆಂದವರ ಜೊತೆಯಲ್ಲಿ ಆಸರೆಯಾಗಿ ನಿಲ್ಲಬೇಕು ಎಂದು ಸಾಮಾಜಿಕ ಸೇವಾ ಕಾರ್ಯಗಳು ಹಮ್ಮಿಕೊಳ್ಳಲಾಗಿದೆ.
ಜನರ ಸೇವೆ ಮಾಡಿದರೆ, ಭಗವಂತನ ಸೇವೆ ಮಾಡದಂತೆ. ನಿಮ್ಮ ಕಷ್ಟ, ನೋವುಗಳಿಗೆ ನನ್ನ ನೆನಪಿನಲ್ಲಿ ನಿಮ್ಮ ಮನೆ ಮಗನಾಗಿ ಸೇವೆ ಮಾಡುತ್ತೇನೆ. ಅಧಿಕಾರಿ ಇರಲಿ, ಇಲ್ಲದಿರಲಿ ನಿಮ್ಮ ಸೇವೆಗೆ ಸದಾ ಸಿದ್ದ .

ಮುಂಬರುವ ಜಿಬಿಎ ಪಂಚ ಪಾಲಿಕೆ ಚುನಾವಣೆ ಮತ್ತು 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.
ಮಂಡಲದ ಅಧ್ಯಕ್ಷ ಮಂಜುನಾಥ್ , ಮಾಜಿ ಪಾಲಿಕೆ ಸದಸ್ಯರುಗಳಾದ ರಾಮಪ್ಪ, ರಾಜೇಶ್ವರಿ, ಜಯರತ್ನ ಮತ್ತು ಬಿಜೆಪಿ ಮುಖಂಡರುಗಳಾದ ಕ್ರಾಂತಿರಾಜು, ಡೊಡ್ಡವೀರಯ್ಯ ನಾಗರಭಾವಿ ಎಸ್.ರಾಜು ರವರು, ಬಿಜೆಪಿ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು.











