--Ads--

ಧೈರ್ಯವಿದ್ದರೆ ಚರ್ಚೆಗೆ ಬನ್ನಿ ಸಂಸದ ಡಾ ಕೆ ಸುಧಾಕರ್ ವಿರುದ್ಧ ಶಾಸಕ ಬಿ ಎನ್  ರವಿಕುಮಾರ್ ವಾಗ್ದಾಳಿ

On: April 18, 2026 4:44 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಧೈರ್ಯವಿದ್ದರೆ ಚರ್ಚೆಗೆ ಬನ್ನಿ  ಡಾ ಕೆ ಸುಧಾಕರ್ ವಿರುದ್ಧ ಶಾಸಕ ಬಿ ಎನ್  ರವಿಕುಮಾರ್ ವಾಗ್ದಾಳಿ

ಶಿಡ್ಲಘಟ್ಟ : ಮೂರು ಬಾರಿ ಶಾಸಕ, ಒಮ್ಮೆ ಸಚಿವರಾಗಿದ್ದೀರಿ ನೀವು ಯಾರ ವಿರುದ್ಧ ಸೋತು ಹೋಗಿದ್ದೀರಿ ಎಂಬ ಪರಿಜ್ಞಾನ ಇದೆಯೇ ‘ಒಬ್ಬ ಸಾಧಾರಣ ವ್ಯಕ್ತಿ ವಿರುದ್ಧ ಗೆಲ್ಲಲು ಸಾಧ್ಯವಾಗಿಲ್ಲ’ ನಿಮಗೆ ನಾಚಿಕೆ ಆಗಲ್ಲವೇ..? ಎಂದು ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್ ಅವರ ವಿರುದ್ಧ ಶಾಸಕ ಬಿ.ಎನ್.ರವಿಕುಮಾರ್ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.

ಮೇಲೂರಿನ ಅವರ ಸ್ವ-ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುನಾವಣೆ ಗೆದ್ದ ಅಹಂಕಾರದಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂಬ ಪರಿಜ್ಞಾನ ಇದೆಯೇ, ನೀವು ಯಾರ ವಿರುದ್ಧ ಸೋತು ಹೋದಿರೊ ಅವರ ರೀತಿಯೇ ಹುಚ್ಚುಚ್ಚಾಗಿ ಮಾತನಾಡುತ್ತಿದ್ದೀರಿ ,ನಿಮಗೆ ಮಾನ ಮರ್ಯಾದೆ ಇದೆಯಾ ..? ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ವೇಳೆ ನಿಮ್ಮ ಮುಖ ನೋಡಿ ನಿಮಗೆ ಜನರು ಮತ ಹಾಕಿಲ್ಲ ಬದಲಿಗೆ, ಮಾಜಿ ಪ್ರಧಾನಿಗಳು, ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರಣಕ್ಕಾಗಿ ನೀವು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೀರಿ’ ಎಂದು ವಾಗ್ದಾಳಿ ನಡೆಸಿದರು.

ನೀವು ಅಧಿಕಾರಕ್ಕೆ ಬಂದ ಮೇಲೆ ಏನೇನು ಮಾಡಿದ್ದೀರಿ, ಯಾರನ್ನು ತುಳಿದಿರಿ ಪಕ್ಷವನ್ನು ಎಷ್ಟು ಗುಂಪುಗಳನ್ನಾಗಿ ಮಾಡಿದ್ದೀರಿ,ಎಷ್ಟೆಷ್ಟು ಪೋಲೀಸ್ ಪ್ರಕರಣಗಳನ್ನು ಹಾಕಿಸಿದ್ದೀರಿ ಎಂಬ ಲೆಕ್ಕ ನನ್ನ ಬಳಿ ಇದೆ ,ಮತದಾರರು ನಿಮಗೆ ಮತ ಹಾಕಿದ್ದರಿಂದಾಗಿ ನೀವು ಅಧಿಕಾರಕ್ಕೆ ಬಂದಿದ್ದೀರಿ ಈ ಭಯ ನಿಮಗೆ ಇರಬೇಕು ಜನರು ನಿಮ್ಮನ್ನು ಗಮನಿಸುತ್ತಿರುತ್ತಾರೆ ಎಂಬ ಅರಿವು ಇರಲಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕ‌ರ್ ಅವರನ್ನು ನೋಡಿ ಅಭಿವೃದ್ಧಿ ರಾಜಕಾರಣ ಕಲಿಯಿರಿ ,ಅವರ ಕಾಲ ಕೆಳಗೆ ಹತ್ತು ಸಲ ನುಗ್ಗಿ, ಆಗಲಾದರೂ ಬುದ್ದಿ ಬರುತ್ತದೆ’ ಎಂದು ಹೇಳಿದರು.

ದಿಬ್ಬೂರಹಳ್ಳಿ ಬಳಿಯ ಪರಭೈರನಹಳ್ಳಿ ಬಂಡೆಯ ವ್ಯವಹಾರದಲ್ಲಿ ಎಷ್ಟು ಲೂಟಿ ಹೊಡೆದಿದ್ದೀರಿ ,ಅಲ್ಲಿನ
ಕಲ್ಲು ಕುಟುಕರ ಸಂಸಾರಗಳನ್ನು ಬೀದಿಗೆ ತಂದಿದ್ದೀರಿ ನೀವು ,ರೈತ ಸಂಘದವರಿಗೆ ಈ ಬಗ್ಗೆ ಹೋರಾಟ ಮಾಡಲು ಇಚ್ಛಾಶಕ್ತಿ ಇಲ್ಲಾ , ಈ ವಿಚಾರದಲ್ಲಿ ಸದನದಲ್ಲಿ ನಾನು ಮಾತನಾಡಿದ್ದೇನೆ ಎಂದರು.

ನೀವು ಆರೋಗ್ಯ ಸಚಿವರಾಗಿದ್ದಾಗ ಕೋವಿಡ್ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣ ಮಾಡಿದ್ದೀರಿ ಅದು ಇಡೀ ದೇಶಕ್ಕೆ ಗೊತ್ತು ,ನಿಮ್ಮ ಮಾತು ಕೇಳಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ ,ವರದಿ ಬಹಿರಂಗಗೊಂಡರೆ ಅನೇಕ ಐಎಎಸ್, ಕೆಎಎಸ್ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ,ಅವರ ಮುಖ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖಾ ವರದಿ ಬಹಿರಂಗಪಡಿಸದೆ ಪೆಂಡಿಂಗ್ ಇಟ್ಟಿದ್ದಾರೆ ಇದು ನೂರಕ್ಕೂ ನೂರು ಸತ್ಯ’ ಎಂದರು.

ಮುಂದಿನ ಸಲ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ,ಆಗ ನಾನೇ ಕೊವಿಡ್ ಹಗರಣವನ್ನು ತನಿಖೆ ನಡೆಸಲು ಅವರಲ್ಲಿ ಮನವಿ ಮಾಡುತ್ತೇನೆ ನಿಮಗೆ ಶಿಕ್ಷೆ ಆಗಬೇಕೆಂದು ಕೂಡ ಒತ್ತಾಯಿಸುತ್ತೇನೆ ಎಂದರು.

ನಾನು ರೈತನ ಮಗ ಈಗಲೂ ಕೃಷಿ ಮಾಡುತ್ತೇನೆ, ವ್ಯವಹಾರ ಮಾಡುತ್ತೇನೆ ,ನಾನೇನಾದರೂ ತಪ್ಪು ಮಾಡಿದರೆ ಕೇಳಿ ನಿಮ್ಮಬಗ್ಗೆ ನಾನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ,ಆದರೆ ನನ್ನ ಬಗ್ಗೆ ಯಾಕೆ ನೀವು ನಾಲಿಗೆ ಹರಿ ಬಿಡ್ತಿರೋದು, ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುವುದಕ್ಕೂ ಮುನ್ನ ಹತ್ತಲ್ಲ ನೂರು ಬಾರಿ ಆಲೋಚನೆ ಮಾಡಿ’ ಎಂದು ಶಾಸಕ ರವಿಕುಮಾರ್ ಎಚ್ಚರಿಕೆ ನೀಡಿದರು.

ನೀವು ಎಲ್ಲೆಲ್ಲಿ ಆಸ್ತಿ ಮಾಡಿದ್ದೀರಿ, ಯಾರ ಬಳಿ ಕಮಿಷನ್ ಹಣ ಪಡೆದಿದ್ದೀರಿ ಎಂಬ ಎಲ್ಲ ಮಾಹಿತಿಯೂ ದಾಖಲೆಗಳ ಸಮೇತ ನನ್ನ ಬಳಿ ಇದೇ, ಬನ್ನಿ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತೇನೆ ಚರ್ಚೆ ಮಾಡೋಣ ನಿಮ್ಮ ಎಲ್ಲ ಹಗರಣಗಳನ್ನು ಬಯಲು ಮಾಡುತ್ತೇನೆ ಎಂದು ನೇರವಾಗಿ ಸವಾಲ್ ಹಾಕಿ ಪಂಥಾಹ್ವಾನ ನೀಡಿದರು.

WhatsApp

Join Now

Telegram

Join Now

Instagram

Join Now