ವಿಜಯ ದರ್ಪಣ ನ್ಯೂಸ್…
ಕನ್ನಡ, ನೆಲ, ಜಲ, ಭಾಷೆ ಬಗ್ಗೆ ಶಾಲಾ , ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಕನ್ನಡ, ನೆಲ, ಜಲ, ಭಾಷೆ, ಸಾಹಿತ್ಯದ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಶಾಲಾ ,ಕಾಲೇಜು ಹಾಗು ಸಾರ್ವಜನಿಕ ಸ್ಥಳಗಳಲ್ಲಿ ಮಾಡಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಪದಾಧಿಕಾರಿಗಳಿಗೆ
ಶಾಸಕರಾದ ಬಿ.ಎನ್.ರವಿಕುಮಾರ್ ಮನವಿ ಮಾಡಿದರು.
ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ’ ಉದ್ಘಾಟನೆ ಹಾಗು ಬಸವ ಜಯಂತಿ ಆಚರಣೆಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಪ್ರಾರಂಭಗೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಅವರು
ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನ ಸಿಂಧು, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ,ಆರಕ್ಷಕ ವೃತ ನಿರೀಕ್ಷಕ ಆನಂದ್ ಕುಮಾರ್ ,ಟಿಹೆಚ್ಒ ವೆಂಕಟೇಶ್ ಮೂರ್ತಿ ,ಕಸಾಪ ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ,ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ,ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ತಾದೂರು ರಘು ,ಮೇಲೂರು ಮಂಜುನಾಥ್,ಎಸ್.ವಿ.ನಾಗರಾಜ ರಾವ್,ರೂಪಸಿ ರಮೇಶ್ ,ಮೊಹಮ್ಮದ್ ಖಾಸಿಂ, ಎನ್.ಸುಂದರ್ ,ಹಾಗು
ಪದಾಧಿಕಾರಿಗಳಾದ ಮುನಿನಾರಾಯಣಪ್ಪ, ಡಿ.ಎಸ್. ಸತ್ಯನಾರಾಯಣರಾವ್,ಸುಂದರಾಚಾರಿ, ದೇವರಾಜ್, ಹಿತ್ತಲಹಳ್ಳಿ ಸುರೇಶ್,ಟಿ.ಟಿ.ನರಸಿಂಹಪ್ಪ, ಈ ಧರೆ ಪ್ರಕಾಶ್, ಅಂಬಾರಿ ಮಂಜುನಾಥ್ ಮುಂತಾದವರು
ಹಾಜರಿದ್ದರು.










