ವಿಜಯ ದರ್ಪಣ ನ್ಯೂಸ್….
ಧಾರ್ಮಿಕ ಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತ

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ಮಹಾನ್ ದಾರ್ಶನಿಕ ಶಂಕರಾಚಾ ರ್ಯರು ಹೇಳಿದ ಧಾರ್ಮಿಕ ತತ್ವ ವಿಚಾರಗಳು ಏಕತೆ ಸಾರುವ ಅದೈತ ತತ್ವಜ್ಞಾನ ಇಂದಿಗೂ ಪ್ರಸ್ತುತ ವಾಗಿವೆ ಎಂದು ರಾಮಕೃಷ್ಣ ಹೆಗಡೆ ತಿಳಿಸಿದರು.
ಇವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಪಲ್ಲಕಿಯೊಂದಿಗೆ ಶಂಕರಾಚಾರ್ಯರ ಭಾವ ಚಿತ್ರ ಮೆರವಣಿಗೆ ಮಾಡಿ ಮಾತನಾಡಿದರು.
ಶಂಕರರು ಅಂದು ನೀಡಿದ ಮಾರ್ಗದರ್ಶನ ಇಂದಿ ಗೂ ಉಪಯುಕ್ತ ಕೊಡುಗೆ ನೀಡುತ್ತಿದೆ. ಕೇವಲ ಶಂಕರ ಜಯಂತಿ ಆಚರಣೆ ಮಾಡಿದರಷ್ಟೆ ಸಾಲದು ಅವರ ಆದ ರ್ಶವನ್ನು ಪಾಲಿಸುವ ಮೂಲಕ ಅವರಿಗೆ ಗೌರವಿಸುವ ಕಾರ್ಯ ಮಾಡಬೇಕಿದೆ ಎಂದು ನುಡಿದರು.
ಕೆ.ರಘನಾಥ್ ಮಾತನಾಡಿ, ಮಹಾನ್ ದಾರ್ಶ ನಿಕ ತತ್ವಜ್ಞಾನಿ ಶ್ರೇಷ್ಠ ಆದಿ ಜಗದ್ಗುರು ಶಂಕರಾಚಾ ರ್ಯರು 8ನೇ ಶತಮಾನದಲ್ಲಿಯೇ ಹೇಳಿದ ಧಾರ್ಮಿಕ ತತ್ವ ವಿಚಾರಗಳು ಏಕತೆಯನ್ನು ಸಾರುವ ಅದೈತ ತತ್ವಜ್ಞಾನ ಇಂದಿನ 21ನೇ ಶತಮಾ ನದಲ್ಲಿಯೂ ಅತ್ಯಂತ ಪ್ರಸ್ತುತವಾಗಿವೆ ಎಂದರು.
ಈ ಸಂದರ್ಭದಲ್ಲಿ ಗಾಯಿತ್ರಿ ಜಗದೀಶ್, ಸುಜಾತ, ನಳಿನಿ ಶೇಷಗಿರಿರಾವ್, ವಾಣಿ ಚಂದ್ರಶೇ ಖರ್, ಸುವರ್ಣಮ್ಮ ಚೇತನ್, ಸುಮಿತ್ರ ವಿಜಯ ಕುಮಾರ್, ಅಶೋಕ ಕುಮಾರ್, ನಾಗೇಂದ್ರ ಪ್ರಸಾದ್, ನಾಗೇಶ್, ಚಂದ್ರು, ರಕ್ಷಿತ್, ಡಿ.ಎಸ್.ರವಿಕುಮಾರ್, ಬಾಲಾಜಿ ರಾವ್ ಸಂಸ್ಥೆ.









