--Ads--

ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲು: ಇಂಡಿಯಾ ಒಕ್ಕೂಟದ ವಿರುದ್ಧ ಜೆಡಿಎಸ್ ಪ್ರತಿಭಟನೆ

On: April 22, 2026 2:36 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲು: ಇಂಡಿಯಾ ಒಕ್ಕೂಟದ ವಿರುದ್ಧ ಜೆಡಿಎಸ್ ಪ್ರತಿಭಟನೆ

ರಾಮನಗರ: ಮಹಿಳಾ ಮೀಸಲಾತಿ ಮಸೂದೆ ವಿಧೇಯಕಕ್ಕೆ ಬೆಂಬಲ ನೀಡದೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಕಸಿದಿದೆ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಕಿಡಿಕಾರಿದರು.

ನಗರದ ಐಜೂರು ವೃತ್ತದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲುಂಟು ಮಾಡಿರುವ ಕಾಂಗ್ರೆಸ್ ಪಕ್ಷ ಈ ದೇಶವನ್ನು 60 ವರ್ಷಗಳ ಕಾಲ ಆಳಿದೆ. ಆದರೆ ಎಂದಿಗೂ ಮಹಿಳಾ ಮೀಸಲಾತಿ ಬಗ್ಗೆ  ಧ್ವನಿ ಎತ್ತಲಿಲ್ಲ. ಈಗ ಕೇಂದ್ರದಲ್ಲಿ ಎನ್‌ ಡಿ ಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತ್ತು. ಆದರೆ ಕಾಂಗ್ರೆಸ್ ಅದನ್ನು ವಿಫಲ ಮಾಡುವ ಮೂಲಕ ಮಹಿಳೆಯರ ಹಕ್ಕು ಮತ್ತು ಅಧಿಕಾರಕ್ಕೆ ಬರುವುದನ್ನು ತಪ್ಪಿಸಿದೆ. ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ನಿಲ್ಲುವುದಿಲ್ಲ ಇಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದರು.

ಇಂದಿಗೂ ಜೆಡಿಎಸ್ ಪಕ್ಷ ಮಹಿಳೆಯರ ಪರ ನಿಂತಿದೆ ಎಚ್.ಡಿ.ದೇವೇಗೌಡರು 1994ರಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ಸಮಯದಲ್ಲಿ  ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದರಿಂದ ಇಂದು ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆ ಯರಿಗೆ ಅಧಿಕಾರ ಮತ್ತು ರಾಜಕೀಯ ಪ್ರಾತಿನಿಧ್ಯ ಲಭ್ಯವಾಗುತ್ತಿದೆ. 1996ರಲ್ಲಿ ದೇವೇಗೌಡರು ಪ್ರಧಾನಿ ಗಳಾಗಿದ್ದ ವೇಳೆಯೂ ಸಹ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಬಗ್ಗೆ ಪ್ರತಿಪಾದಿಸಿದ್ದರು ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಮುತ್ತು ಮಾತನಾಡಿ, ಮಹಿಳೆಯರಿಗೆ ರಾಜಕೀಯದಾಗಿ  ಮೀಸಲಾತಿ ಒದಗಿಸಬೇಕು ಎಂಬುದು ಎನ್‌ಡಿಎ ಸರ್ಕಾರದ ಉದ್ದೇಶ ಅದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು, ಮಹಿಳೆಯರನ್ನು ರಾಜಕೀಯದಿಂದ ದೂರವಿಟ್ಟಿದೆ ಎಂದು ದೂರಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ವಿಫಲಗೊಳಿಸಿದ ಕಾಂಗ್ರೆಸ್ ದೇಶದ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮೀಸಲಾತಿ ಮಸೂದೆಯನ್ನು  ವಿಫಲಗೊಳಿಸಿರುವ ಕಾಂಗ್ರೆಸ್ ಪಕ್ಷ ದೇಶದ ಮಹಿಳೆಯರನ್ನು ಅವಮಾನಿಸಿದೆ. ರಾಜಕೀಯದಲ್ಲಿ ಮಹಿಳಾ ಸಬಲೀಕರಣಕ್ಕೆ ಈ ಮಸೂದೆ ಬಹಳ ಉಪಯುಕ್ತ ವಾಗಿತ್ತು. ಆದರೆ ಕಾಂಗ್ರೆಸ್ ಅದನ್ನು ವಿರೋಧಿಸಿದೆ. ಆ ಪಕ್ಷದ ಮಹಿಳೆಯರಿಗೂ ಅನ್ಯಾಯವಾಗಿದೆ.                                                       __  ತಾರದಗೌಡ, ಮಾಜಿ ಅಧ್ಯಕ್ಷರು. ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ

ಪ್ರತಿಭಟನೆಯಲ್ಲಿ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷ ಕೊಳ್ಳಿಗನಹಳ್ಳಿ ರಾಮಣ್ಣ, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ, ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಸದಸ್ಯ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಕನಕಪುರ ನಗರಸಭೆ ಸದಸ್ಯ ಚಂದ್ರು (ಸ್ಟುಡಿಯೋ), ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ತಾಪಂ ಮಾಜಿ ಸದಸ್ಯ ಲಕ್ಷಿ ಕಾಂತ, ಜೆಡಿಎಸ್ ವಕ್ತಾರರಾದ ಪ್ರಶಾಂತಿ, ದಿಶಾ ಸಮಿತಿ ಸದಸ್ಯರುಗಳಾದ ನರಸಿಂಹಮೂರ್ತಿ, ಶೋಭಾ, ರೇಖಾ ಜೆಡಿಎಸ್ ಪ್ರಮುಖರಾದ ಬಿ.ಉಮೇಶ್, ಕುಮಾರ್, ವಕ್ತಾರ ಹೋಟೆಲ್ ಉಮೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಜಿ.ಟಿ.ಕೃಷ್ಣ, ನರಸಿಂಹಯ್ಯ, ಇಟ್ಟಮಡು ಪುಟ್ಟು, ಯಕ್ಷರಾಜು, ಸರಸ್ವತಮ್ಯ, ಶೋಭಾ.ಆರ್.ಗೌಡ, ಪೂರ್ಣಿಮಾ, ಪವಿತ್ರ, ಚಿತ್ರ, ಮಮತಾ, ಸತ್ಯವತಿ ಭಾಗವಹಿಸಿದ್ದರು.

 

WhatsApp

Join Now

Telegram

Join Now

Instagram

Join Now