--Ads--

ಸಂಗೊಳ್ಳಿ ರಾಯಣ್ಣ  ಪ್ರಶಸ್ತಿಗೆ ಭಾಜನರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕೆಯುಡಬ್ಲೂಜೆ ಯಿಂದ ಅಭಿನಂದನೆ 

On: April 24, 2026 1:48 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸಂಗೊಳ್ಳಿ ರಾಯಣ್ಣ  ಪ್ರಶಸ್ತಿಗೆ ಭಾಜನರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕೆಯುಡಬ್ಲೂಜೆ ಯಿಂದ ಅಭಿನಂದನೆ 

ಬೆಂಗಳೂರು: ರಾಜ್ಯ ಸರ್ಕಾರ ಕೊಡ ಮಾಡುವ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ, ಕೆಯುಡಬ್ಲೂಜೆ ಹಿರಿಯ ಸದಸ್ಯರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು…

ಕೆ.ಜಿ.ರಸ್ತೆ, ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕೆಯುಡಬ್ಲೂೃಜೆ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು

ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಕೇಸರಿ ಹರವೂ ಅವರು ಅಭಿನಂದನಾ ಭಾಷಣ ಮಾಡಿದರು… ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಉಪಾಧ್ಯಕ್ಷ ಎಸ್ ಬಿ ಮದನ್ ಗೌಡ , ಖಜಾಂಚಿ ವಾಸುದೇವ ಹೊಳ್ಳ ಎಂ, ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಬಿ ಯು ಡಬ್ಲ್ಯೂಜೆ ಅಧ್ಯಕ್ಷ ಎಸ್.ಸೋಮಶೇಖರ ಗಾಂಧಿ,  ಆರ್.ಜೈಕುಮಾರ್ ಗೌಡ್ರು, ಕೆ ಎಸ್ ಸ್ವಾಮಿ, ಎಚ್ ಕೆ ಬಸವರಾಜ್, ದೇವರಾಜ್, buwj ಕಾರ್ಯಕಾರಿ ಸಮಿತಿ ಸದಸ್ಯ ಎನ್. ಶಿವಾನಂದ ಹಾಗೂ ಹಿರಿಯ ಪತ್ರಕರ್ತೆ ಶಶಿಕಲ ಇತರೆ ಪದಾಧಿಕಾರಿಗಳು ಪತ್ರಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ ಬೀದರ್ ಸಮ್ಮೇಳನಕ್ಕೆ ಕಾರಣಾಂತರದಿಂದ ಬರಲು ಸಾಧ್ಯವಾಗದೆ ಇದ್ದ ಕೆಯುಡಬ್ಲೂೃಜೆ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು…

WhatsApp

Join Now

Telegram

Join Now

Instagram

Join Now