--Ads--

ಹಸಿರು ಶಾಲು ಹಾಕಿಕೊಂಡು ಜನಪ್ರತಿನಿಧಿಗಳ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ರೈತರಿಗೆ ತರವಲ್ಲ : ಶಾಸಕ ಬಿ.ಎನ್.ರವಿಕುಮಾ‌ರ್

On: April 24, 2026 2:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಹಸಿರು ಶಾಲು ಹಾಕಿಕೊಂಡು ಜನಪ್ರತಿನಿಧಿಗಳ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ರೈತರಿಗೆ ತರವಲ್ಲ : ಶಾಸಕ ಬಿ.ಎನ್.ರವಿಕುಮಾ‌ರ್

ಶಿಡ್ಲಘಟ್ಟ : ರೈತರ ಸೋಗಿನಲ್ಲಿ ಹಸಿರು ಶಾಲು ಹಾಕಿಕೊಂಡು ಜನಪ್ರತಿನಿಧಿಗಳು ಅಥವಾ ಇನ್ನ್ಯಾರ ಬಗ್ಗೆಯೇ ಆಗಲಿ ವೈಯಕ್ತಿಕ ಟೀಕೆ ಮಾಡುವುದು ರೈತರಿಗೆ ತರವಲ್ಲ ಎಂದು ಶಾಸಕರಾದ ಬಿ.ಎನ್.ರವಿಕುಮಾ‌ರ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಶಾಸಕರ ಸ್ವಗೃಹದಲ್ಲಿ ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತರ ಪರ ಹೋರಾಟ ಸಮಿತಿಯ ಪದಾಧಿಕಾರಿಗಳು 13 ಹಳ್ಳಿಗಳ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಯಿಂದ ನಿಗದಿ ಪಡಿಸಿರುವ ದರ ಕಡಿಮೆಯಾಗಿದ್ದು ಹೆಚ್ಚಿನ ದರ ಕೊಡಿಸಬೇಕೆಂದು ಒತ್ತಾಯಿಸಿ ನೀಡಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಲ್ಲರೂ ಉಪ್ಪು-ಖಾರ ತಿನ್ನುವವರೆ, ನಮಗೂ ಕೋಪ ಬರುತ್ತದೆ, ಆದರೆ ನಾನು ಯಾವುದೇ ದ್ವೇಷ ರಾಜಕಾರಣ ಮಾಡಲ್ಲ, ನಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಘರ್ಷಣೆಗಳಾಗಬಾರದು ಎನ್ನುವುದು ನಮ್ಮ ಉದ್ದೇಶ ಆಗಿದೆ ಎಂದರು.

ಸಂವಿಧಾನದಡಿಯಲ್ಲಿ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ, ಹೋರಾಟ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.

ಕಳೆದ ಒಂದೂವರೆ ತಿಂಗಳಿಂದ ಜಂಗಮಕೋಟೆ ಹೋಬಳಿಯ ಕೆಐಎಡಿಬಿ ಭೂಸ್ವಾಧೀನ ಪರ ಕೆಲವರು, ವಿರೋಧವಾಗಿ ಕೆಲವರು ಪ್ರತಿಭಟನೆ ಮಾಡುತ್ತಿದ್ದೀರಿ ತಪ್ಪೇನಿಲ್ಲ ಹಾಗಂತ ಹೋರಾಟದ ಹೆಸರಲ್ಲಿ ಜನಪ್ರತಿನಿಧಿಗಳನ್ನು ವೈಯಕ್ತಿಕ ವಾಗಿ ಟೀಕಿಸುವುದು ತರವಲ್ಲ ಎಂದರು.

ನಾನು ಸಹ ರೈತನ ಮಗ ,ರೈತ ಕುಟುಂಬದವನೇ ರೈತ ಎದುರಿಸುತ್ತಿರುವ ಎಲ್ಲಾ ಕಷ್ಟ, ನಷ್ಟಗಳ ಸಂಪೂರ್ಣ ಅರಿವು ನನಗಿದೆ ರೈತರ ಸೋಗಿನಲ್ಲಿ ಹಸಿರು ಶಾಲು ಹಾಕಿಕೊಂಡವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ ಎಂದರು.

ಕಳೆದ ಒಂದೂವರೆ ತಿಂಗಳಿಂದ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ಕೆಐಎಡಿಬಿ ಯಿಂದ ಭೂ ಸ್ವಾದೀನ ಪ್ರಕ್ರಿಯೆಯ ಪರವಾಗಿ ಕೆಲವರು, ವಿರೋಧವಾಗಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಹಾಗಂತ ಹೋರಾಟದ ಹೆಸರಲ್ಲಿ ಜನಪ್ರತಿನಿಧಿಗಳನ್ನು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ನಾನೂ ಒಬ್ಬ ರೈತ ಕುಟುಂಬದವನಾಗಿದ್ದು ನಿಜವಾದ ರೈತನ ನೋವೇನೂ ಎನ್ನುವ ಅರಿವಿದೆ. ರೈತನ ಸೋಗಿನಲ್ಲಿ ಹಸಿರುಶಾಲು ಹಾಕಿಕೊಂಡು ಕುಳಿತವರಿಂದ ಕಲಿಯುವ ಅಗತ್ಯವಿಲ್ಲ. ಎಲ್ಲರೂ ಉಪ್ಪು ಖಾರ ತಿನ್ನುವವರೆ, ನಮಗೂ ಕೋಪ ಬರುತ್ತದೆ, ಆದರೆ ನಾನು ಯಾವುದೇ ದ್ವೇಷ ರಾಜಕಾರಣ ಮಾಡಲ್ಲ, ನಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಘರ್ಷಣೆಗಳಾಗಬಾರದು ಎನ್ನುವುದು ನಮ್ಮ ಉದ್ದೇಶ ಆಗಿದೆ ಎಂದರು.

ಕ್ಷೇತ್ರದ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರ ಜಮೀನುಗಳಿಗೆ ಕೆಐಎಡಿಬಿ ವತಿಯಿಂದ ನಿಗದಿಪಡಿಸಿದ ದರ ಕಡಿಮೆಯಾಗಿದ್ದು, ಹೆಚ್ಚಿಸಬೇಕೆಂಬ ನಿಮ್ಮ ಮನವಿ ಬಗ್ಗೆ ಕೈಗಾರಿಕಾ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಬಳಿ ಚರ್ಚಿಸಿದ ನಂತರ ಮತ್ತೊಂದು ದಿನಾಂಕ ನಿಗದಿಪಡಿಸಿ ಅಧಿಕಾರಿಗಳು ಹಾಗೂ ಕೆಐಎಡಿಬಿ ಗೆ ಜಮೀನು ನೀಡಲು ಸಿದ್ಧರಿರುವ ರೈತರ ಸಮ್ಮುಖದಲ್ಲಿ ಸಭೆ ನಡೆಸಿ ಮತ್ತೊಮ್ಮೆ ದರ ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜತೆಗೆ ಜಮೀನು ನೀಡುವ ಪ್ರತಿ ಕುಟುಂಬಕ್ಕೂ ಕೆಲಸ ಕೊಡಿಸುವ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೆಐಎಡಿಬಿಗೆ ಜಮೀನು ನೀಡಲು ಸಿದ್ದರಿರುವ ರೈತರ ಪರ ಮುಖಂಡರಾದ ಬೆಳ್ಳೂಟಿ ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ನಲ್ಲೇನಹಳ್ಳಿ ಸುಬ್ರಮಣಿ,ಚಂದ್ರಶೇಖರ್, ಡಿ.ವಿ.ನಾರಾಯಣಸ್ವಾಮಿ, ರಾಧಮ್ಮ,ನವೀನ್, ಮುನೇಗೌಡ, ಮುನಿಆಂಜಿನಪ್ಪ ,ರವಿಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

 

WhatsApp

Join Now

Telegram

Join Now

Instagram

Join Now