ವಿಜಯ ದರ್ಪಣ ನ್ಯೂಸ್….
ಜಪಾನಿನ ಮಿಯಾವಾಕಿ ಪದ್ದತಿಯಲ್ಲಿ
ಗಿಡ ನೆಡಿ ಪರಿಸರ ಉಳಿಸಿ

ಶಿಡ್ಲಘಟ್ಟ : ಕಾಲೇಜಿನ ಆವರಣದಲ್ಲಿ ಸ್ಥಳೀಯ ಗಿಡಗಳನ್ನು ದಟ್ಟವಾಗಿ ನೆಡುವುದರಿಂದ ತ್ವರಿತ ಬೆಳವಣಿಗೆ ಮತ್ತು ದಟ್ಟತೆ ಸಾಧ್ಯವಾಗುತ್ತದೆ ಜಪಾನಿನ ಮಿಯಾವಾಕಿ ಪದ್ದತಿ ಜೈವಿಕ ವೈವಿಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ತಾಲ್ಲೂಕಿನ ಗೊರ್ಲಗುಮ್ಮನಹಳ್ಳಿ 11 ಮೈಲಿಯ ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಧರೆ ಫೌಂಡೇಶನ್ ಸಹಕಾರದೊಂದಿಗೆ ಜಪಾನಿನ ಮಿಯಾವಾಕಿ ಪದ್ಧತಿಯಲ್ಲಿಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲೇಜಿನ ಆವರಣದಲ್ಲಿ ಮಣ್ಣು ಅಷ್ಟು ಚೆನ್ನಾಗಿರದ ಕಾರಣ ನೆಟ್ಟ ಗಿಡಗಳು ಬೆಳೆಯುತ್ತಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದರು ಅದಕ್ಕಾಗಿ ಆಳವಾಗಿ ಗುಂಡಿ ತೆಗೆದು ಸೂಕ್ತ ಗೊಬ್ಬರ ಹಾಕಿ, ಮಿಯಾವಾಕಿ ಪದ್ಧತಿಯಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ ಎಂದು ಹೇಳಿದರು.
ಮರ ,ಗಿಡ ಬೆಳೆಸುವುದರಿಂದ ಪಕ್ಷಿ, ದುಂಬಿ, ಚಿಟ್ಟೆ, ಇರುವೆಗಳಂತಹ ಸಾವಿರಾರು ಜೀವಿಗಳಿಗೆ ಆಶ್ರಯ ಮತ್ತು ಆಹಾರ ನೀಡುತ್ತದೆ ಇಲ್ಲಿರುವ ಹಾಗು ವಿದ್ಯಾರ್ಥಿಗಳಿಗೂ ಉತ್ತಮ ಹಸಿರು ಪರಿಸರ ಸಿಗಲಿದೆ ಎಂದರು.
3 ಸಾವಿರ ಗಿಡ ನೆಡಲು ಉದ್ದೇಶಿ ನೆಟ್ಟ ಗಿಡಗಳನ್ನು 2 ವರ್ಷದವರಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪೋಷಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ
ಎಂದರು.
ಪ್ರಾಂಶುಪಾಲ ನಾರಾಯಣಸ್ವಾಮಿ ಮಾತನಾಡಿ, ಗ್ರಾಮ ಪಂಚಾಯತಿ ನೆರವುನೊಂದಿಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜತೆಗೂಡಿ ಗಿಡಗಳಿಗೆ ನೀರು ಹಾಕಿ ಪೋಷಿಸಿ ಕಾಪಾಡಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ತಿಮ್ಮನಾಯಕನಹಳ್ಳಿ ಅರುಣ್‌ಕುಮಾರ್, ಧರೆ ಫೌಂಡೇಶನ್‌ನ ಪ್ರಸನ್ನ, ವಕೀಲರಾದ ಶ್ರೀನಿವಾಸ್, ಲಕ್ಷ್ಮೀನರಸಿಂಹ, ಉಪನ್ಯಾಸಕರಾದ ಸೌಭಾಗ್ಯ, ಪ್ರಮೀಳಾ, ಸ್ವಪ್ನಾ, ಪ್ರಮೀಳಾ,ವಭೂಲಕ್ಷ್ಮಿದೇವಿ ,ಕುಮಾರ್, ರವಿ, ಅಶೋಕ್, ಮತ್ತಿತರರು ಹಾಜರಿದ್ದರು.










