ವಿಜಯ ದರ್ಪಣ ನ್ಯೂಸ್….
ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮಾವು ,ಹೂವು ಹಾಗೂ ದ್ರಾಕ್ಷಿ ಬೆಳೆ ಅಪಾರ ನಷ್ಟ

ಶಿಡ್ಲಘಟ್ಟ : ಇತ್ತೀಚೆಗೆ ಸಂಜೆ ಸುರಿದ ಭಾರಿ ಬಿರುಗಾಳಿ
ಸಹಿತ ಆಲಿಕಲ್ಲು ಮಳೆಗೆ ಮಾವು ,ಹೂವು ಹಾಗೂ ದ್ರಾಕ್ಷಿ ಬೆಳೆ ನೆಲಕಚ್ಚಿದ್ದು ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತನ ಸ್ಥಿತಿ.
ತಾಲ್ಲೂಕಿನ ಕೆ.ಮತ್ತುಕದಹಳ್ಳಿ, ಚಿಂತಡಪಿ, ಕನ್ನಮಂಗಲ, ಅಲಸೂರು ದಿನ್ನೆ, ಜಂಗಮಶೀಗೆಹಳ್ಳಿ, ಗೊರಮಡುಗು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ.
ಮಾವಿನ ತೋಪುಗಳಲ್ಲಿ ಮರ ತುಂಬಿಕೊಂಡಿದ್ದ ಕಾಯಿಗಳು ಬಿರುಗಾಳಿಯ ಹೊಡೆತಕ್ಕೆ ನೆಲಕ್ಕುರುಳಿದ್ದು, ದ್ರಾಕ್ಷಿ ತೋಟಗಳಲ್ಲೂ ಗೊಂಚಲುಗಳು ಹಾಳಾಗಿದ್ದು ಹೂವಿನ ತೋಟಗಳಲ್ಲಿ ಹೂಗಳು ಬಾಡಿವೆ,ಮಾವು ಬೆಳೆಗಾಗಿ ಈಗಾಗಲೇ ರಾಸಾಯನಿಕ ಸಿಂಪಡಣೆ, ನೀರಾವರಿ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದ ರೈತರಿಗೆ ಬರ ಸಿಡಿಲು ಬಡಿದಂತಾಗಿದೆ.

ಈ ಬಾರಿ ಉತ್ತಮ ಇಳುವರಿ ಹಾಗು ಧರ ನಿರೀಕ್ಷಿಸಿದ್ದ ರೈತರು ಬೆಳೆದ ಉತ್ತಮ ಬೇಳೆ ನೆಲ ಪಾಲಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಮರು ಮೌಲ್ಯಮಾಪನದಲ್ಲಿ 5 ಅಂಕ ಪಡೆದ ಚೈತ್ರಶ್ರೀ ಜಿಲ್ಲೆ ಹಾಗು ತಾಲ್ಲೂಕಿಗೆ ಪ್ರಥಮ

ಶಿಡ್ಲಘಟ್ಟ : ದ್ವಿತೀಯ ಪಿಯು ಪರೀಕ್ಷೆ ಮರುಮೌಲ್ಯಮಾಪನದಲ್ಲಿ ನಗರದ ಅಕ್ಷರ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಜೆ.ಚೈತ್ರಶ್ರೀ 600ಕ್ಕೆ 598 ಅಂಕ ಪಡೆದಿದ್ದಾಳೆ.
ಏ.10ರಂದು ಪ್ರಕಟವಾದ ಪಿಯು ಫಲಿತಾಂಶದಲ್ಲಿ ಜೆ.ಚೈತ್ರಶ್ರೀ, 600ಕ್ಕೆ 593 ಅಂಕ ಪಡೆದು ತಾಲ್ಲೂಕಿಗೆ ಮೊದಲು, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಳು.
ಮರು ಮೌಲ್ಯಮಾಪನದ ಫಲಿತಾಂಶದಲ್ಲಿ 5 ಅಂಕ ಪಡೆದು 600ಕ್ಕೆ 598 ಅಂಕ ಪಡೆದು ತಾಲ್ಲೂಕು , ಜಿಲ್ಲೆಗೆ ಮೊದಲ ಸ್ಥಾನ, ರಾಜ್ಯಕ್ಕೆ 3ನೇ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ.










