ವಿಜಯ ದರ್ಪಣ ನ್ಯೂಸ್..
ರೇಷ್ಮೆ ಹುಳು ಸಾವನ್ನಪ್ಪಿ ನಷ್ಟ ಅನುಭವಿಸಿದ ಕನ್ನಮಂಗಲದ ರೈತನಿಗೆ ಸಾಂತ್ವನ

ಶಿಡ್ಲಘಟ್ಟ : ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳಾರೋ ರಾಸಾಯನಿಕ ಸಿಂಪಡಣೆ ಮಾಡಿದ್ದು, ರೇಷ್ಮೆ ಹುಳು ಸಾವನ್ನಪ್ಪಿರುವ ಕನ್ನಮಂಗಲದ ರೈತ ಗಂಗರಾಜು ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ ರೈತ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಳುವನಹಳ್ಳಿ ಲೊಕೇಶ್‌ಗೌಡ ಸಾಂತ್ವಾನ ಹೇಳಿದರು.
ಆನಂತರ ರೇಷ್ಮೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ,ರೈತನಿಗೆ ನಷ್ಟ ಪರಿಹಾರ ನೀಡುವಂತೆ ಚರ್ಚಿಸಿ,
ಹಿಪ್ಪುನೇರಳೆ ಸೊಪ್ಪಿಗೆ ರಾಸಾಯನಿಕ ಸಿಂಪಡಣೆಯಾಗಿ ರೇಷ್ಮೆ ಹುಳು ಸಾವನ್ನಪ್ಪಿ ರೈತನಿಗೆ ನಷ್ಟವಾಗಿದ್ದು, ಸರ್ಕಾರ ನಷ್ಟ ಭರಿಸಿ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಹಿಪ್ಪುನೇರಳೆ ಸೊಪ್ಪಿಗೆ ರಾಸಾಯನಿಕ ಸಿಂಪಡಣೆಯಾಗಿ ಅಥವಾ ಬೇರೆ ಯಾವುದೇ ರೂಪದಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆ ಹಾಳಾದರೆ ಮತ್ತು ರೇಷ್ಮೆ ಬೆಳೆ ಹಾಳಾದರೆ ಪರಿಹಾರ ನೀಡುವ ಮತ್ತು ನಷ್ಟ ಭರಿಸುವ ಯೋಜನೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅತಿವೃಷ್ಟಿ ಅಥವಾ ಅನಾವೃಷ್ಟಿ ಆದಾಗ ರೈತರಿಗೆ ನೀಡುವ ಪರಿಹಾರದಂತೆ ಹಿಪ್ಪು ನೇರಳೆ ಮತ್ತು ರೇಷ್ಮೆ ಹುಳುಗಳು ಸಾವನ್ನಪ್ಪಿ ದಾಗ ರೈತರಿಗೆ ಆಗುವ ನಷ್ಟ ಭರಿಸಿ ಕೊಡಬೇಕೆಂದು ಒತ್ತಾಯಿಸಿದರು.
ರೈತ ಗಂಗರಾಜು ಅವರ ಹಿಪ್ಪುನೇರಳೆ ಸೊಪ್ಪಿಗೆ ರಾಸಾಯನಿಕ ಸಿಂಪಡಣೆ ಮಾಡುತ್ತಿರುವುದು ಇದು ಮೊದಲೇನಲ್ಲ ,ಈ ಹಿಂದೆಯೂ 2-3 ಬಾರಿ ಹೀಗೇ ರೀತಿ ಆಗಿತ್ತು ಆಗ ಪೊಲೀಸರು ಅವರನ್ನು ಕರೆದು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದರು ಮತ್ತೆ ಘಟನೆ ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.










