ವಿಜಯ ದರ್ಪಣ ನ್ಯೂಸ್….
ಬಸವಣ್ಣನ ಆದರ್ಶ ಮೈಗೂಡಿಸಿಕೊಳ್ಳಿ:
ನಂಜನಗೂಡಿನಲ್ಲಿ ಅದ್ದೂರಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸುತ್ತೂರುಶ್ರೀಗಳ ಕರೆ

ತಾಂಡವಪುರ ಮೇ 13 ಬಸವಣ್ಣನ ಆದರ್ಶ ಮೈಗೂಡಿಸಿಕೊಳ್ಳಿ ಎಂದು ನಂಜನಗೂಡಿನಲ್ಲಿ ಅದ್ದೂರಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸುತ್ತೂರುಶ್ರೀಗಳ ಕರೆ ನೀಡಿದರು
ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ
ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಬಸವಣ್ಣರವರನ್ನ ಸ್ಮರಣೆ ಮಾಡುವ ಜೊತೆಗೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ ಎಂದು ಜಗದ್ಗುರು ಶ್ರೀ ಶಿವರಾತ್ರಿಶ್ವರ ದೇಶಿ ಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ದಕ್ಷಿಣ ಕಾಶಿ ನಂಜನಗೂಡಿನ ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳಿಂದ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಬಸವಣ್ಣನವರು ನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಮನಸ್ಸು ಮನಸ್ಸುಗಳ ಮನುಷ್ಯನ ಬಾಂಧವ್ಯ ಬೆಸೆಯಲು ಹೃದಯವಂತಿಕೆ ಅನುಭವ ಮಂಟಪವಾಗಿದೆ. ಮೇಲು-ಕೀಳು ಎಂಬ ಭೇದಭಾವವಿಲ್ಲದೆ ತಮ್ಮ ತಮ್ಮ ಅನುಭವಗಳನ್ನು ಶರಣರು ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.
ಯಾರನ್ನು ಓಲೈಸುವ ಅಥವಾ ತೃಪ್ತಿಪಡಿಸುವ ಉದ್ದೇಶವಿರಲಿಲ್ಲ. ಧಾರ್ಮಿಕ ಆಚರಣೆ ಮತ್ತು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿತ್ತು. ಸತ್ಯದ ಪರಾಮರ್ಶೆ ಪರಸ್ಪರ ವಿಚಾರ ವಿನಿಮಯ ನಡೆಯುತ್ತಿದ್ದವು. ಆದರೆ 21ನೇ ಶತಮಾನದಲ್ಲಿ ಇಂದು ಆಚರಣೆ ಎಷ್ಟು ಮುಖ್ಯ ಅದೇ ರೀತಿ ಅವರ ಆದರ್ಶಗಳನ್ನ ಅಳವಡಿಸಿಕೊಳ್ಳುವುದು ಮುಖ್ಯ. ಕೇವಲ ಸ್ಮರಣೆಯಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜತೆಗೆ ಅವರನ್ನು ಅನುಸರಿಸಿದರೆ ಮಾತ್ರ ಸಾಧ್ಯ. ಬಸವಣ್ಣನವರ ವಚನಗಳಲ್ಲಿ ತಿಳಿಸಿರುವಂತೆ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, ನನ್ನ ಎರಡು ವರ್ಷಗಳ ಅವಧಿಯಲ್ಲಿ ಕಳೆದ ವರ್ಷ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗಿತ್ತು. ಸಮಾಜದ ಈಶ್ವರ ಕಂಡ್ರೆ, ಬಿ.ವೈ ವಿಜಯೇಂದ್ರ, ಗಣೇಶ್ ಪ್ರಸಾದ್ ಸೇರಿದಂತೆ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸುಮಾರು ಒಂದು ಸಾವಿರ ಸದಸ್ಯತ್ವವನ್ನು ಕೊಡುಗೆಯಾಗಿ ನೀಡಿದ್ದೇನೆ.
ತಾಲ್ಲೂಕಿನಲ್ಲಿ ಸಮಾಜಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಶ್ರೀಗಳು ಈ ಬಗ್ಗೆ ಹೆಚ್ಚಿನ ಸಹಕಾರವನ್ನು ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಮಲ್ಲನ ಮೂಲೆ ಮಠ ಅಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮಿಗಳವರು, ದೇವನೂರಿನ ಶ್ರೀ ಮಹಾಂತ ಸ್ವಾಮಿಗಳವರು, ಕುಂದೂರು ಮಠದ ಶ್ರೀ ಶರತ್ ಚಂದ್ರ ಸ್ವಾಮಿಗಳವರು ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ಮಂಗಳ ಮಂಟಪದವರೆಗೆ ಸಾಗುವ ಮೆರವಣಿಗೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಹಾಗೂ ಕಳಲೆ ಕೇಶವಮೂರ್ತಿ, ನವಿಲೂರು ಮತ್ತು ಚುಂಚನಹಳ್ಳಿ ಕಡಕಲಕಟ್ಟೆ ಮಠಾಧೀಶರಾದ ಶ್ರೀ ಚನ್ನಬಸವ ಸ್ವಾಮೀಜಿಗಳವರು, ಹಾಗೂ ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮಿಗಳವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮತ್ತಷ್ಟು ಮೆರಗು ತಂದವು.
ವೇದಿಕೆ ಕಾರ್ಯಕ್ರಮದಲ್ಲಿ ಹುಲ್ಲಹಳ್ಳಿ ಮಠದ ಶ್ರೀ ಇಮ್ಮಡಿ ದೇಶಿ ಕೇಂದ್ರ ಸ್ವಾಮೀಜಿ, ಕಂತೆ ಮಹದೇಶ್ವರ ಬೆಟ್ಟದ ಶ್ರೀ ಮಹಾಂತ ದೇಶಿ ಕೇಂದ್ರ ಸ್ವಾಮೀಜಿ, ಶಿರಮಳ್ಳಿ ಮಠದ ಶ್ರೀ ಇಮ್ಮಡಿ ಮುರಗಿ ಸ್ವಾಮಿಜಿ, ಸೂರಹಳ್ಳಿ ಮಠದ ಕೆಂಡಗಣ್ಣ ಸ್ವಾಮೀಜಿ, ಹಲ್ಲರೆ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಒನ್ನಲಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಂಗಮ ಮಠದ ಶ್ರೀ ಮಹದೇಶ್ವರ ಸ್ವಾಮೀಜಿ, ಕಸುವಿನಹಳ್ಳಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಮಹಾಸಭಾ ಉಪಾಧ್ಯಕ್ಷೆ ಸುಧಾ ಚಿಕ್ಕಮಾದಪ್ಪ, ಮಾಜಿ ಶಾಸಕ ಬಿ.ಹರ್ಷವರ್ಧನ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಬಿ.ಎಸ್ ಮಹದೇವಪ್ಪ, ಮಂಗಳ ಸೋಮಶೇಖರ್, ಹೆಚ್.ಎಂ ಶಿವಕುಮಾರ್, ಎಚ್.ಎಂ ಶಂಕರ್, ಶಿವಪ್ಪ ದೇವರು, ನಗರ ಅಧ್ಯಕ್ಷ ಎನ್ ಮಹೇಶ್, ವೀರಶೈವ ಕ್ರೆಡಿಟ್ ಬ್ಯಾಂಕ್ ನ ಬಸವಣ್ಣ, ರಾಜೇಂದ್ರ ಪ್ರಸಾದ್, ಶಶಿಕಲಾ ಗಿರೀಶ್, ಮಹದೇವಸ್ವಾಮಿ ಮಡಹಳ್ಳಿ ನಟರಾಜು, ಹೆಗ್ಗಡಹಳ್ಳಿ ರೇವಣ್ಣ, ನಂಜಮಣಿ ಗುರುಮಲ್ಲಪ್ಪ, ವಿನಯ್, ನಂದಿನಿ ಮಹೇಶ್, ಮಂಜುಳಾ ಮಧು, ದಳಪತಿ ಮಹದೇವಪ್ಪ, ಬದನವಾಳು ಮಂಜುನಾಥ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವೀರಶೈವ ಮಹಾಸಭಾ ನಿರ್ದೇಶಕರು, ತಾಲ್ಲೂಕಿನ ಮಠ ಮಾನ್ಯಗಳ ಹರ ಗುರು ಚರಮೂರ್ತಿಗಳು ಹಾಗೂ ತಾಲ್ಲೂಕಿನ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.








