--Ads--

ಪರಿಸರವನ್ನು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ

On: May 24, 2026 4:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪರಿಸರವನ್ನು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ

ವಿಜಯಪುರ, ದೇವನಹಳ್ಳಿ ತಾಲ್ಲೂಕು.ಮೇ24: ನಾವು ಪರಿಸರವನ್ನು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ ಎಂದು ಪಟ್ಟಣದ ಶ್ರೀ ಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಮಂಜುನಾಥ್‌ ತಿಳಿಸಿದರು.

ಇವರು ಪಟ್ಟಣದ ಮೇಲೂರು ರಸ್ತೆಯ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಈ ಭೂಮಿಯು ಕೇವಲ ನಮಗೊಬ್ಬರಿಗೆ ಮಾತ್ರವಲ್ಲದೇಮುಂದಿನ ಪೀಳಿಗೆಗೂ ಸೇರಿದೆ ಆದ್ದರಿಂದ ನಮ್ಮ ಈ ಪರಿಸರದ ಸಂರಕ್ಷಣೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಿ ಸ್ವಚ್ಛ ಪರಿಸರ ಉಳಿಸೋಣ ಎಂದು ತಿಳಿಸಿದರು.

ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್. ಎಸ್. ಪ್ರದೀಪ ಮಾತನಾಡಿ ನಾವು ವಾಸಿಸುತ್ತಿರುವ ನಮ್ಮಸುತ್ತಮುತ್ತಲಿನ ಗಾಳಿ, ನೀರು, ಮಣ್ಣು, ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನೊಳಗೊಂಡ ವಾತಾವರಣವೇ ಪರಿಸರ ವಾಗಿದೆ ಆದ್ದರಿಂದ ಪರಿಸರ ಮತ್ತು ಮಾನವನ ನಡುವಿನ ಈಭೂಮಿಯ ಸಂಬಂಧವು ಅವಿನಾ ಭಾವವಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರ ತಂಡ ಕಾಲೇಜಿನ ಕೈ ತೋಟದ ಆವರಣಗಳ ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ ಯೊಂದಿಗೆ ವಿವಿಧ ರೀತಿಯ ಹೂ ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮದ ಉಪಸ್ಥಿತಿಯಲ್ಲಿ ನಾರಾಯಣಪುರದ ಶ್ರೀ ಸಾಯಿ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಕೆ. ಬೆಂಗಳೂರು ನಾರಾಯಣಸ್ವಾಮಿ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಗ್ರಾಮಾಂತರ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಎನ್. ಪ್ರಸನ್ನ ಕುಮಾ‌ರ್, ಉಪನ್ಯಾಸಕರಾದ ಮುರಳಿ ಮೋಹನ್, ಮುಬಾರಕ್, ಕೆ.ಅರ್ಚನ, ಹೆಮ್. ಎಂ.ಜಿ. ಎಂ.ಅಂಬಿಕಾ,ಡಿ.ಎನ್.ನಾಗೇಶ್, ಹರೀಶ್, ಲಕ್ಷ್ಮಿದೇವಮ್ಮ, ಕೆ.ಎಂ.ನಾಗರಾಜ್, ಬಿ.ಎಸ್.ಶರತ್ ಹಾಗೂ ಎಂ.ಚೈತ್ರ ಹಾಜರಿದ್ದರು.

WhatsApp

Join Now

Telegram

Join Now

Instagram

Join Now