--Ads--

ವಾಹನ ಸಂಚಾರದಿಂದ ಧೂಳು ಬದಲಿ ಮಾರ್ಗದಲ್ಲಿ ವಾಹನ ಸಂಚಾರ ಮಾಡಿಸಲು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ

On: May 27, 2026 2:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಾಹನ ಸಂಚಾರದಿಂದ ಧೂಳು ಬದಲಿ ಮಾರ್ಗದಲ್ಲಿ ವಾಹನ ಸಂಚಾರ ಮಾಡಿಸಲು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ

ತಾಂಡವಪುರ ಮೇ 27 ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಸಿರುವ ಚಿಕ್ಕಯ್ಯನ ಛತ್ರ ಬಂಚಳ್ಳಿ ಹುಂಡಿ ಮಧ್ಯದಲ್ಲಿ ಹಾದುಹೋಗಿರುವ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ಇದರಿಂದ ಅಕ್ಕಪಕ್ಕದ ಮನೆಗಳಿಗೆ ಬರುವುದರಿಂದ ಮಕ್ಕಳಿಗೆ ಮನುಷ್ಯರಿಗೆ ರೋಗರು ಜನಗಳು ಹರಡುವ ಭೀತಿ ಇದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲಿ ಸಂಚಾರ ಮಾಡುವ ವಾಹನಗಳನ್ನು ಬದಲಿ ಮಾರ್ಗವಾಗಿ ಸಂಚಾರ ಮಾಡುವಂತೆ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಸ್ಥಳಕ್ಕೆ  ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿಎಂ ರಾಮರವರು  ಈ ರಸ್ತೆ ಮಾರ್ಗವಾಗಿ ಇಲ್ಲಿನ ಕೈಗಾರಿಕೆಗಳಿಗೆ ವಾಹನಗಳು ಹೆಚ್ಚಾಗಿ ಸಂಚಾರ ಮಾಡುವುದರಿಂದ ಅಕ್ಕಪಕ್ಕದ ಮನೆಗಳಿಗೆ ದೂಳು ಹರಡುವ ಮೂಲಕ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿದ್ದು ಇಲ್ಲಿನ ಕೈಗಾರಿಕೆಗಳಿಗೆ ಬದಲಿ ಮಾರ್ಗವಾದ ಕಡಕೋಳ ಮಾರ್ಗವಾಗಿ ಅಡಕನಹಳ್ಳಿ ಮಾರ್ಗವಾಗಿ ಸಂಚಾರ ಮಾಡಿದರೆ ಇಲ್ಲಿನ ವಾಹನ ಸಂಚಾರ ದಟ್ಟಣೆ ಕಮ್ಮಿ ಆಗುತ್ತದೆ, ಗ್ರಾಮಸ್ಥರಿಗೆ ಆಗುವ ತೊಂದರೆ ಸಹ ತಪ್ಪುತ್ತದೆ ಎಂದು ಬಿಎಂ ರಾಮು  ವಿವರಿಸಿದ್ದರು

ಮೈಸೂರು ನಂಜನಗೂಡು ಊಟಿ ಮುಖ್ಯ ರಸ್ತೆಯಿಂದ ಚಿಕ್ಕಯ್ಯನ ಛತ್ರ ಬಂಚಹಳ್ಳಿ ಹುಂಡಿ ಮಧ್ಯದಲ್ಲಿ ಹಾದು ಹೋಗಿರುವ ಕೈಗಾರಿಕಾ ಮುಖ್ಯ ರಸ್ತೆಯಲ್ಲಿ ತಾಂಡವಪುರ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಹೆಚ್ಚಿನ ವಾಹನಗಳು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದು ಜೊತೆಗೆ ಇಲ್ಲೇ ಜಲ್ಲಿಕಲ್ಲು ಪುಡಿ ಮಾಡುವ ಕ್ಲಸ್ಟರ್ ಸಹ ಇದ್ದು ಇದರಿಂದ ಪ್ರತಿನಿತ್ಯ ವಾಹನ ಸಂಚಾರ ಹೆಚ್ಚಾಗಿದ್ದು ಪ್ರತಿನಿತ್ಯ ದೂಳು ನಮ್ಮ ಅಕ್ಕ ಪಕ್ಕದ ಮನೆಗಳಿಗೆ ಬರುವ ಮೂಲಕ ನಮಗೆ ಮತ್ತು ನಮ್ಮ ಮಕ್ಕಳಿಗೆ ಧೂಳು ನಮ್ಮ ದೇಹಕ್ಕೆ ಸೇರುವುದರಿಂದ ನಮ್ಮಗಳಿಗೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಗ್ರಾಮಸ್ಥರು ಮನವಿ ಮಾಡಿದರು

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕೈಗಾರಿಕಾ ಮುಖ್ಯಸ್ಥರ ಜೊತೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳಲು ನಾವು ಕೂಡ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹದೇವು ಮುಖಂಡರಾದ ಹುಚ್ಚೇಗೌಡ ಚಿಕ್ಕಯ್ಯನ ಛತ್ರ ಗ್ರಾಮದ ಅರ್ಕೇಶ್ ವಸಂತ್ ಕುಮಾರ್ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ಆನಂದ್ ಮಹಾದೇವ ಪ್ರಭುಸ್ವಾಮಿ ರಾಜೇಶ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು

 

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಡಾ. ಯತೀಂದ್ರ ಸಿದ್ದರಾಮಯ್ಯ ಶಾಸಕ ಕೆ ವೆಂಕಟೇಶ್ ರವರಿಂದ ಭೂಮಿ ಪೂಜೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ತಾಲ್ಲೂಕುಗಳು ತೀವ್ರ ಬರಪೀಡಿತ ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ 

ಜಿಲ್ಲೆಯ ನಂಜನಗೂಡು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಡಾ .ಜಿ. ಪರಮೇಶ್ವರ್  ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ

ವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದ  ಕಾರ್ಯಕರ್ತರಿಂದ ಶ್ರೀಕಂಠೇಶ್ವರ ಸ್ವಾಮೀಗೆ ಪೂಜಿ ಸಲ್ಲಿಸಿ ಸಿಹಿ ವಿತರಿಸಿ ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬ ಆಚರಣೆ

ನಗರಲೆ ಹಾಲು ಉತ್ಪಾದಕರ ಸಂಘದ 2025 -26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ

ಹಿರಿಯ ಕಾಂಗ್ರೆಸ್ ಮುಖಂಡ ಎಲ್ಐಸಿ ಪ್ರತಿನಿಧಿ ಬಿ ಎಂ ನಾಗರಾಜ್ ದಣಿ ಇನ್ನಿಲ್ಲ