ವಿಜಯ ದರ್ಪಣ ನ್ಯೂಸ್….
ಮಾವಿನ ಸೀಜನ್‌ನಲ್ಲೂ ದ್ರಾಕ್ಷಿಗೆ ಉತ್ತಮ ಬೇಡಿಕೆ, ರೈತರ ಮುಖದಲ್ಲಿ ಮೂಡಿದ ಮಂದಹಾಸ

ಶಿಡ್ಲಘಟ್ಟ ಗ್ರಾಮಾಂತರ: ರಾಜ್ಯಾದ್ಯಂತ ಹಣ್ಣಿನ ತರಹವಾರಿ ಸಹಜವಾಗಿ, ಮಾರುಕಟ್ಟೆಯಲ್ಲಿ ಮಾವಿನ ಫಸಲು ಕಾಲಿಟ್ಟಿದೆ. ಮಾರುಕಟ್ಟೆಗಳಲ್ಲಿ ಮಾವು ವಿಜೃಂಭಿಸುತ್ತಿರುವುದರ ಪೈಪೋಟಿಯ ನಡುವೆಯೂ, ಗ್ರಾಮೀಣ ಭಾಗದಲ್ಲಿ, ರೈತರು ಬೆಳೆದಿರುವ ವಿವಿಧ ತಳಿಯ ದ್ರಾಕ್ಷಿ ಬೆಳೆಯ ಬೆಲೆ ಸುಧಾರಣೆಯಲ್ಲಿರುವುದು ರೈತಾಪಿ ವರ್ಗದಲ್ಲಿ ನಿರಾಳತೆ ಮೂಡಿಸಿದೆ. ಬೇಸಿಗೆಯಲ್ಲಿ ಆರಂಭವಾಗುವ ಮಾವಿನ ಸೀಜನ್ ನಲ್ಲಿ, ದ್ರಾಕ್ಷಿಗೆ ಬೇಡಿಕೆ ಕುಸಿಯುತ್ತಿತ್ತು. ಇದರಿಂದ ದ್ರಾಕ್ಷಿ ಬೆಳೆಗಾರರು ವ್ಯಾಪಾರಿಗಳ ಬಳಿಗೆ ಹೋಗಿ, ಅಂಗಲಾಚಿಕೊಂಡು, ಬೆಳೆ ಖರೀದಿಸುವಂತೆ ದುಂಬಾಲು ಬೀಳಬೇಕಾಗಿತ್ತು. ಆದರೆ, ಈ ಬಾರಿ, ದ್ರಾಕ್ಷಿ ಬೆಳೆಗಾರರಿಗೆ ಅಂತಹ ಹೊಡೆತ ಬಿದ್ದಿಲ್ಲವೆಂಬುದು ಕೊಂಚ ಸಮಾಧಾನ ತರಿಸಿದೆ.
ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಉತ್ತಮ ಗುಣಮಟ್ಟದಲ್ಲಿ ಬೆಳೆಯಾಗಿರುವುದು. ರೋಗಗಳು ನಿಯಂತ್ರಣ ದಲ್ಲಿರುವುದು, ಮತ್ತು ಬೇಸಿಗೆಯಲ್ಲಿ ಬಿಸಿಲಿನ ತಾಪಮಾನದಿಂದಾಗಿ ತೋಟಗಳಲ್ಲಿ ಬೆಳೆ ಕಚ್ಚದಿದ್ದ ಕಾರಣದಿಂದಲೂ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವಂತಹ ಬೆಂಗಳೂರು ಬ್ಲೂ ದ್ರಾಕ್ಷಿ ಕೆ.ಜಿ.45 ರೂಪಾಯಿ, ದಿಲ್ ಕುಶ್ 50, ರೆಡ್ ಗ್ಲೋಬ್ 120, ಶರತ್ 80 ರೂಪಾಯಿಗೆ ಮಾರಾಟವಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೇಸಿಗೆಯ ತಾಪಮಾನ ಹೆಚ್ಚಾಗಿರುವ ಕಾರಣ, ಕೊಳವೆಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿರುವ ಕಾರಣ, ಟ್ಯಾಂಕರುಗಳ ಮೂಲಕ ತೋಟಗಳಿಗೆ ನೀರು ಹಾಯಿಸಿ, ಕಷ್ಟಪಟ್ಟು ಬೆಳೆದಿರುವ ದ್ರಾಕ್ಷಿ ಬೆಳೆಗೆ ಈ ಬಾರಿ ಸಮಾಧಾನಕರವಾದ ಬೆಲೆಯಿರುವುದರಿಂದ ರೈತರು, ಹೂಡಿಕೆ ಮಾಡಿರುವ ಬಂಡವಾಳವನ್ನು ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಸಾಲಗಾರರಾಗದಷ್ಟರ ಮಟ್ಟಿಗೆ ಸುಧಾರಣೆಯಲ್ಲಿದೆ ಎಂದು ಕೆಲ ರೈತರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
ಕಾರಣ, ಈಗ ಮಳೆಗಾಲ ಆರಂಭವಾಗುವ ಬೇಸಿಗೆಯಲ್ಲಿ నిeరిగాగి ಪಟ್ಟಂತಹಶ್ರಮಪಡದಿದ್ದರೂ,ಲಭ್ಯವಿರುವ ನೀರಿನಲ್ಲಿ ಬೆಳೆ ಬೆಳೆಯಬಹುದು. ಆದರೆ, ಮಳೆಗಾಲದಲ್ಲಿ ರೋಗಗಳನ್ನು ನಿಯಂತಣ ಮಾಡಿಕೊಂಡು, ಬೆಳೆ ಬೆಳೆಯುವುದು ಸ್ವಲ್ಪ ದುಬಾರಿಯಾಗುತ್ತದೆ ಎಂದು ರೈತರು ಹೇಳುತ್ತಾರೆ.
ತಾಲೂಕಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ, ವಿವಿಧ ತಳಿಯ ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದು, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅಗತ್ಯವಾಗಿರುವ ಮಾಹಿತಿಗಳನ್ನು ಒದಗಿಸಿಕೊಡಲಾಗುತ್ತಿದೆ.









