--Ads--

ಜಂಗಮಕೋಟೆ ಬಳಿ KIADB ಕೈ ಬಿಡಬೇಕು ಎಂದು ರೈತಸಂಘ ಜೂನ್-5 ರಂದು ವಿದಾನಸೌಧ ಚಲೋ 

On: May 30, 2026 4:54 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜಂಗಮಕೋಟೆ ಬಳಿ KIADB ಕೈ ಬಿಡಬೇಕು ಎಂದು ರೈತಸಂಘ ಜೂನ್-5 ರಂದು ವಿದಾನಸೌಧ ಚಲೋ 

ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಭಾಗದಲ್ಲಿ KIADB ಯು ಕೈಗಾರಿಕೆ ಪ್ರದೇಶ ಅಭಿವೃದ್ದಿಗೆ ಮುಂದಾಗಿದ್ದು ಈ ಯೋಜನೆಯನ್ನು ಕೈ ಬಿಡುವಂತೆ ಹಸಿರು ಸೇನೆ ರೈತ ಸಂಘವು ಕಳೆದ ದಿನಗಳಿಂದಲೂ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದು ಸರಕಾರದಿಂದ ಯಾವುದೆ ಪ್ರತಿಕ್ರಿಯೆ ಸಿಗದ ಹಿನ್ನಲೆ ತಾರ್ಕಿಕ ಅಂತ್ಯಕ್ಕಾಗಿ ಜೂನ್-5 ರಂದು ವಿಧಾನಸೌಧ ಚಲೋ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್ ತಿಳಿಸಿದರು.

ಜಂಗಮಕೋಟೆಯ ಕೆಐಎಡಿಬಿ ಯೋಜನೆಯನ್ನು ಕೈ ಬಿಡುವಂತೆ ಮುಂದಿನ ತಿಂಗಳು ಜೂನ್- 5ನೇ ತಾರೀಕು ವಿಧಾನಸೌಧಕ್ಕೆ ಚಲೋ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.

ಈ ಹಿನ್ನಲೆಯಲ್ಲಿ ಇಡೀ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ರೈತ ಸಂಘದ ಪದಾಧಿಕಾರಿಗಳು ಕರ ಪತ್ರ ಹಂಚಿ ಬೈಕ್ ಮೂಲಕ ವಿಧಾನಸೌಧ ಚಲೋಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ ,ಜಿಲ್ಲಾಡಳಿತ ಭವನದ ಆವರಣದಲ್ಲಿ ಕಳೆದ 72 ದಿನಗಳಿಂದಲೂ ಅನಿರ್ಧಿಷ್ಟ ಕಾಲದ ಧರಣಿ ನಡೆಸುತ್ತಿದ್ದರೂ ಸರಕಾರವು ಯಾವುದೆ ರೀತಿಯಲ್ಲಿ ಸ್ಪಂಧಿಸಿಲ್ಲ ಎಂದು ದೂರಿದರು.

ಹಾಗಾಗಿ ಸರಕಾರದ ಮೇಲೆ ಒತ್ತಡ ತಂದು ಜಂಗಮಕೋಟೆ ಭಾಗದ ಕೆಐಎಡಿಬಿ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ಧಿಷ್ಟ ಧರಣಿಯ 81ನೇ ದಿನ ಜೂನ್-5 ರಂದು ಧರಣಿ ಸ್ಥಳದಿಂದ ಬೆಂಗಳೂರು ವಿಧಾನಸೌಧಕ್ಕೆ ಬೈಕ್‌ಗಳ ಮೂಲಕ ಚಲೋ ನಡೆಯಲಿದೆ ಎಂದರು.

5 ಸಾವಿರ ಬೈಕ್ ಗಳಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು ವಿಧಾನಸೌಧ ಚಲೋ ನಡೆಸಿ ಜಂಗಮಕೋಟೆ ಕೆಐಎಡಿಬಿ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದರು ,ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೈಕ್‌ ಗ್ಯಾಲಿಯಲ್ಲಿ ಭಾಗವಹಿಸಿ ರೈತರ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳ ರೈತರು, ದಸಂಸ, ಮಾನವ ಹಕ್ಕುಗಳ ಕಮಿಟಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಾಮಾಜಿಕ ಕಾರ್ಯಕರ್ತರ ವೇದಿಕೆ, ರಕ್ಷಣಾ ವೇದಿಕೆ ಸೇರಿ ಹಲವು ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿವೆ.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ ಮಾತನಾಡಿ, ಜಂಗಮಕೋಟೆ ಭಾಗದಲ್ಲಿ ಫಲವತ್ತಾದ ಭೂಮಿ ಹೆಚ್ಚಿನ ಪ್ರಮಾಣದಲ್ಲಿದ ಹಾಗಾಗಿ ಅಲ್ಲಿ ಕೆಐಎಡಿಬಿ ಯೋಜನೆಯನ್ನ ಕೈ ಬಿಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಕಳೆದ 72 ದಿನಗಳಿಂದಲೂ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದೇವೆ. ಜಂಗಮಕೋಟೆ ಭಾಗದ ಕೈ ಕೆಐಎಡಿಬಿ ಯೋಜನೆಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟವನ್ನು ಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಗುಡಿಹಳ್ಳಿ ಕೆಂಪಣ್ಣ ,ಮಂಜುನಾಥ್, ಬೂದಾಳ ಶ್ರೀನಿವಾಸ್ ,ರಾಮಕೃಷ್ಣ, ಆರ್.ಮೋಹನ್, ಕೃಷ್ಣಪ್ಪ ಮತ್ತೀತರರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now