ವಿಜಯ ದರ್ಪಣ ನ್ಯೂಸ್…..
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳು ಯುವ ಜನತೆಗೆ ಸ್ಪೂರ್ತಿ ಮೂಲವಾಗಲಿ: ಶ್ರೀಕಂಠ

ತಾಂಡವಪುರ ಜೂನ್ 4 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ ಶ್ರೀಕಂಠ ಅಧ್ಯಕ್ಷತೆಯಲ್ಲಿ ಮೈಸೂರು ನಂಜನಗೂಡು ಊಟಿ ರಸ್ತೆ ಕಬಿನಿ ಸೇತುವೆ ಬಳಿ ಇರುವಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು
ಪುಷ್ಪಾರ್ಚನೆ ಮಾಡಿ ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲ್ಲೂಕು ಅಧ್ಯಕ್ಷ ಶ್ರೀಕಂಠ ಅವರ ಕೊಡುಗೆಗಳನ್ನು ಸ್ಮರಿಸಿ ದೂರದೃಷ್ಟಿಯ ಆಡಳಿತಗಾರರು ಜನಪರ ರಾಜರು 24ನೆಯ ಮಹಾರಾಜರಾಗಿ ನಾಲ್ಕು ದಸಗಳ ಕಾಲ ಆಳ್ವಿಕೆ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲವನ್ನು ಮೈಸೂರು ಸಂಸ್ಥಾನದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ ಮಹಿಳಾ ಶಿಕ್ಷಣ ಮಹಿಳೆಯರ ಸಬಲೀಕರಣಕ್ಕೆ ಪ್ರೋತ್ಸಾಹ ಎಲ್ಲಾ ಜಾತಿ ಜನಾಂಗದವರ ಕಲ್ಯಾಣಕ್ಕೆ ಆದ್ಯತೆ ನೀಡಿದವರು ಅವರ ಜೀವನ ಮತ್ತು ಸಾಧನೆಗಳು ಯುವಜನತೆಗೆ ಸ್ಪೂರ್ತಿಯ ಮೂಲವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕುಮಾರ್ ಅರಸ್ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ಕೆಆರ್‌ಎಸ್ ಡ್ಯಾಮ್ ಸೇರಿದಂತೆ ಅವರ ಕೊಡುಗೆಗಳು ಅಪರವಾಗಿವೆ ಎಂದು ನೆನೆದರು ಕೃಷಿ ಕೈಗಾರಿಕೆ ಆರೋಗ್ಯ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು ಮೈಸೂರಿನ ಮೂಲೆ ಮೂಲೆಯಲ್ಲೂ ಕಾಣುತ್ತಿವೆ ಹಾಗೂ ಬೀದಿ ದೀಪಗಳನ್ನು ಮೊದಲ ಬಾರಿಗೆ ತಂದವರು ಕಣ್ಣಿನ ಆಸ್ಪತ್ರೆ ಪೇಪರ್ ಕಾರ್ಖಾನೆಗಳನ್ನು ಮತ್ತು ರೈಲ್ವೆ ಬ್ರಿಡ್ಜು ತಂದರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು ಇನ್ನು ಅಪಾರವಾಗಿದೆ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಪ್ರಸಾದ್ ದಿನೇಶ್ ಅರಸ್ ಮೋಹನ್ ಕಲ್ಲಹಳ್ಳಿ ಕುಮಾರ್ ಅರಸ್ ಮನೋಜ್ ಕುಮಾರ್ ಗಿರೀಶ್ ಅರಸ್ ಚಂದ್ರು ವಿಶ್ವಕರ್ಮ ಶಂಕ್ರಪ್ಪ ಪುಟ್ ಮಾದಪ್ಪ ಸಿದ್ದರಾಜು ಸುಧೀಂದ್ರ ವಿನಯ್ ಮಂಜು ದೀಪು ದೊಡ್ಡ ಬೋರೇಗೌಡ










