ವಿಜಯ ದರ್ಪಣ ನ್ಯೂಸ್…
ಶಿಡ್ಲಘಟ್ಟದಲ್ಲಿ ಜೂನ್.7 ರಂದು ಶ್ರೀರಾಮ ಶೋಭಾಯಾತ್ರೆ ಪ್ರಚಾರ ವಾಹನಕ್ಕೆ ಚಾಲನೆ

ಶಿಡ್ಲಘಟ್ಟ : ಯುವ ಪೀಳಿಗೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಹಾಗು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು
ಜೂನ್.7ರಂದು ಶ್ರೀರಾಮ ಶೋಭಾಯಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಶ್ರೀರಾಮ ಶೋಭಾಯಾತ್ರೆ ಆಚರಣಾ ಸಮಿತಿ ಅಧ್ಯಕ್ಷ ಬಿ. ವೆಂಕಟೇಶ್ ತಿಳಿಸಿದರು.
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಸಲ್ಲಾಪುರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ “ಶೋಭಾಯಾತ್ರೆಯ ಪ್ರಚಾರ ವಾಹನ” ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೂ-7ರಂದು ನಗರ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್‌ನ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಬೆಳಿಗ್ಗೆ-11 ಗಂಟೆಗೆ ಶೋಭಾಯಾತ್ರೆ ಆರಂಭವಾಗಲಿದೆ ಎಲ್ಲರೂ ಜಾತ್ಯತೀತವಾಗಿ, ಪಕ್ಷಾತೀತವಾಗಿ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಶ್ರೀರಾಮಚಂದ್ರರ ಕೃಪೆಗೆ ಪಾತ್ರವಾಗಬೇಕೆಂದು ಮನವಿ ಮಾಡಿದರು.
ಶ್ರೀರಾಮ ಶೋಭಾಯಾತ್ರೆ ದಿನದಂದು ಎಲ್ಲರೂ ಮನೆಯ ಮುಂದೆ ರಂಗೋಲಿ ಹಾಗೂ ಹೂವಿನಿಂದ ಅಲಂಕರಿಸಿ, ಮಾವು, ಬಾಳೆ ದಿಂಡಿನ ತೋರಣ ಕಟ್ಟಿ ಮನೆ ಮೇಲೆ ಭಗವಧ್ವಜ ಹಾರಿಸಿ ಶೋಭಾಯಾತ್ರೆ ಸ್ವಾಗತಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಶ್ರೀರಾಮ ಶೋಭಾಯಾತ್ರೆ ಸಮಿತಿಯ ಉಪಾಧ್ಯಕ್ಷ ಪ್ರಕಾಶ್, ಸಮಿತಿ ಸದಸ್ಯರಾದ ಗುಡಿಹಳ್ಳಿ ಮಂಜುನಾಥ್, ಅನಿಲ್‌ಕುಮಾರ್,ಕೊತ್ತನೂರು ರವಿಚಂದ್ರ, ಭರತ್, ನಾಗೇಶ್ ಮತ್ತಿತರರು ಪಾಲ್ಗೊಂಡಿದ್ದರು.










