--Ads--

ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ 100ರೂ ಸರ್ಕಾರ ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ತಕ್ಷಣ ಬಿಡುಗಡೆಗೊಳಿಸಲು ತಹಸೀಲ್ದಾರ್ ಗೆ ಮನವಿ

On: June 6, 2026 3:19 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ  100ರೂ ಸರ್ಕಾರ ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ತಕ್ಷಣ ಬಿಡುಗಡೆಗೊಳಿಸಲು ತಹಸೀಲ್ದಾರ್ ಗೆ ಮನವಿ

ತಾಂಡವಪುರ ಜೂನ್ 06: ಸರ್ಕಾರಿ ಆದೇಶದಂತೆ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ ಲಾಭಾಂಶ 100ರೂ ಸರ್ಕಾರ ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ತಕ್ಷಣ ಬಿಡುಗಡೆಗೊಳಿಸಲು ಒತ್ತಾಯಿಸಿ ತಹಸೀಲ್ದಾರ್ ಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭಾಗ್ಯರಾಜು ಮನವಿ ಸಲ್ಲಿಸಿದರು

ತಾಲೂಕು ಕಚೇರಿಯ ಮುಂದೆ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಕಬ್ಬು ಬೆಳೆಗಾರರು ಕಬ್ಬಿನ ಲಾಭಾಂಶದ ಹಣ 50ರು ಬಣ್ಣಾರಿ ಸಕ್ಕರೆ ಕಾರ್ಖಾನೆ ಹಾಗೂ ರೂ.50 ಸರ್ಕಾರ ತಕ್ಷಣ ಬಿಡುಗಡೆ ಮಾಡಲಿ . ಕಳೆದ ವರ್ಷ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರಾಜ್ಯ ಸರ್ಕಾರ ರೈತರಿಗೆ ಕೊಡಲು ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ ಕಬ್ಬಿಗೆ 50. ರಾಜ್ಯ ಸರ್ಕಾರದಿಂದ 50ರು ನೀಡುವ ಆದೇಶ ಮಾಡಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು ಸಭೆ ಮಾಡಿ ಒಂದು ವಾರ ಕಾಲಾವಕಾಶ ನೀಡಿ ಅದೇಶ ಮಾಡಿದರು ಸಹ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಬಣ್ಣಾರಿ ಸಕ್ಕರೆ ಕಾರ್ಖಾನೆ ಈ ಹಣ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ . ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಬೇಕು.

ಬಣ್ಣಾರಿ ಕಾರ್ಖಾನೆ 16 ಕೋಟಿಗು ಹೆಚ್ಚು ಹಣ ರೈತರಿಗೆ ನೀಡಬೇಕು. ಅದನ್ನು ತಕ್ಷಣ ರೈತರಿಗೆ ಅಕೌಂಟ್ಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಹಾಕುವಲ್ಲಿ ವಿಳಂಬ ಸರ್ಕಾರದ ಆದೇಶ ಮಾಡಿ ಮೂರು ವರ್ಷ ಕಳೆದಿದ್ದರು ಸಹ ಒಂದು ಸಕ್ಕರೆ ಕಾರ್ಖಾನೆ ಒಂದು ಸಹ ತೂಕದ ಯಂತ್ರವನ್ನು ಹಾಕುವಲ್ಲಿ ಸರ್ಕಾರ ವಿಫಲವಾಗಿವೆ .

ದ್ವಿಪಕ್ಷ ಒಪ್ಪಂದ ಪತ್ರ ಜಾರಿಗೆ ತರಬೇಕು. ಕಬ್ಬು ಕಟಾವಿನ ವಿಳಂಬ ನೀತಿಯನ್ನು ತಪ್ಪಿಸಬಹುದು ಇಳುವರಿಯಲ್ಲಿನ ಮೋಸ ತಪ್ಪಿಸಲು ಸ್ಥಳೀಯವಾಗಿ ತಜ್ಞರ ಸಮಿತಿ ನೇಮಕ ಮಾಡಬೇಕು. ಸಕ್ಕರೆ ಕಾರ್ಖಾನೆ ಮುಂದೆ ಇಳುವರಿ ಪರಿಶೀಲನೆ ಮಾಡುವ ಲ್ಯಾಬ್ ಸ್ಥಾಪಿಸಬೇಕು.

ಕಬ್ಬು ದರ ನಿಗದಿಯಲ್ಲಿ ಉತ್ತರ ದಕ್ಷಿಣ ಎಂಬ ವ್ಯತ್ಯಾಸವಿಲ್ಲದೆ ರಾಜ್ಯಕ್ಕೆ ಏಕರೀತಿಯ ದರ ನಿಗದಿ ಆಗಬೇಕು ಈ ಉತ್ತರ ದಕ್ಷಿಣ ಎಂಬ ತಾರತಮ್ಯದಿಂದ ಪ್ರತಿ ಟನ್ ಕಬ್ಬಿಗೆ 800 ವ್ಯತ್ಯಾಸ ಬರುತ್ತದೆ ಇದನ್ನು ತಪ್ಪಿಸಲು ಮುಖ್ಯಮಂತ್ರಿಗಳು ಸ್ವಕ್ಷೇತ್ರದ ರೈತರ ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಎಂದರು.

ಚುನಾಯಿತ ಪ್ರತಿನಿಧಿಗಳು ಕಬ್ಬಿನ ದರ ಮತ್ತು ಹಣ ಪಾವತಿಯಲ್ಲಿ ಸಕ್ಕರೆ ಕಾರ್ಖಾನೆಗಳ ದತ್ತು ಪುತ್ರರಂತೆ ವರ್ತಿಸುತ್ತಿದ್ದಾರೆ. ಕಬ್ಬು ಖರೀದಿ ಮಂಡಳಿಯನ್ನು ಪುನರ್ ಪರಿಶೀಲನೆ ಮಾಡಬೇಕು ಕಬ್ಬು ಖರೀದಿ ಮಂಡಳಿಯಲ್ಲಿ ಕಾರ್ಖಾನೆಯ ಕೈಗೊಂಬೆಗಳಾಗಿ ನಿರ್ಣಯಗಳಾಗುತ್ತಿವೆ

ತಕ್ಷಣ ಕಬ್ಬು ಖರೀದಿ ಮಂಡಳಿಯನ್ನು ಪುನರ್ ರಚನೆಮಾಡಬೇಕು. ಕಬ್ಬು ಬೆಳೆಗಾರರಿಗೆ ಅನುಕೂಲವಾಗಲು ಹಾಲು ಉತ್ಪಾದಕರ ಸಹಕಾರ ಸಂಘದ ರೀತಿ ಗ್ರಾಮೀಣ ಭಾಗದಲ್ಲಿ ಯಥನಾಲ್ ಉತ್ಪಾದನೆಗೆ ಅವಕಾಶ ನೀಡಬೇಕು ಇದರಿಂದ ವಿದೇಶಿ ವಿನಿಮಯವೂ ಕಡಿಮೆಯಾಗುತ್ತದೆ.

ಸ್ಥಳೀಯ ಕಬ್ಬು ಬೆಳೆಗಾರರಿಗೆ ಹೆಚ್ಚಿನ ದರ ಸಿಗಲು ಅವಕಾಶವಾಗುತ್ತದೆ ಎಂದರು ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಬಿಪಿಎಲ್ ಕಾರ್ಡುಗಳ ಪರಿಷ್ಕರಣೆಯನ್ನು ಸಮರ್ಪಕವಾಗಿ ಮಾಡಬೇಕು. ಭೂ ಮಾಪಕರ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕ ಸೇವೆಗೆ ಅವಕಾಶ ಮಾಡಿಕೊಡಬೇಕು. ಕೃಷಿ ಪಂಪ್ಸೆಟ್ಗಳಿಗೆ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು .

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಖುಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಸಣ್ಣ ಅತಿ ಸಣ್ಣ ಎಂಬ ತಾರತಮ್ಯ ಇರಬಾರದು ಕೃಷಿ ಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ಪ್ರತಿ ಎಕರೆಗೆ 1 ಲಕ್ಷ ರೂ. ನಂತೆ 10 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ನೀಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ಎಚ್ಚರಿಕೆ ನೀಡಿದರು.

ಇಂದಿನ ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ ಅಂಡುವಿನಹಳ್ಳಿ ರಾಜು ಒಳಗೆರೆ ಗಣೇಶ್ ಮುದ್ದಹಳ್ಳಿ ಮಧು ದೇವನೂರು ನಾಗೇಂದ್ರ ಎಚ್ ಗುಂಡ್ಲ ಚಿದಂಬರ ಸಿದ್ದರಾಮಪ್ಪ ದೇವಣ್ಣ ಮಹೇಶ್ ಡಿಎಲ್ ಶಿವಣ್ಣ ಟೌನ್ ಕೃಷ್ಣಪ್ಪ ದೇವಿರಮ್ಮನಹಳ್ಳಿ ಹುಂಡಿ ಸಿದ್ದ ಬಸಪ್ಪ. ಪರಮೇಶ್ ಸಿದ್ದಲಿಂಗ ಸ್ವಾಮಿ. ಪ್ರಭು ಸ್ವಾಮಿ. ಹುಂಡಿ ರೇವಣ್ಣ ಕೆಂಪರಾಜ್ ಮುಂತಾದ ನೂರಕ್ಕೂ ಹೆಚ್ಚು ಹಾಜರಿದರು

WhatsApp

Join Now

Telegram

Join Now

Instagram

Join Now