--Ads--

ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿ ಮುತ್ತೂರು ಎಂ.ಜಿ.ಸುರೇಶ್ ಅವಿರೋಧ ಆಯ್ಕೆ.

On: June 6, 2026 3:25 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾಗಿ ಮುತ್ತೂರು ಎಂ.ಜಿ.ಸುರೇಶ್ ಅವಿರೋಧ ಆಯ್ಕೆ.

ಶಿಡ್ಲಘಟ್ಟ : ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಬಂಕ್ ಮುನಿಯಪ್ಪ ಚಿಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಕಾರಣ ತೆರವಾದ ಸ್ಥಾನಕ್ಕೆ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಮುತ್ತೂರು ಎಂ.ಜಿ.ಸುರೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷರಾಗಿ ಮುತ್ತೂರು ಎಂ.ಜಿ.ಸುರೇಶ್ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ್ ಅವರನ್ನು ಬ್ಯಾಂಕಿನ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ಮುತ್ತೂರು ಎಂ.ವಿ.ಸುರೇಶ್‌ ಮಾತನಾಡಿ, ಬ್ಯಾಂಕಿನ ಮೂಲಕ ಹಲವರಿಗೆ ಸಾಲ ಸೌಲಭ್ಯ ನೀಡಿದ್ದು, ಸಾಲ ಪಡೆದವರು ಮರುಪಾವತಿಸಿದರೆ ಇತರೆ ರೈತರಿಗೂ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ರೈತ ಕುಟುಂಬದ ಅನುಭವ ಇರುವುದರಿಂದ ಆ ಕಷ್ಟ ನಷ್ಟಗಳ ಅರಿವಿದ್ದು ರೈತರ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಪಿ.ಎಲ್.ಡಿ. ಬ್ಯಾಂಕ್‌ನ ನಿಕಟಪೂರ್ವ ಅಧ್ಯಕ್ಷ ಬಂಕ್‌ ಮುನಿಯಪ್ಪ ಮಾತನಾಡಿದರು. ಚುನಾವಣಾಧಿಕಾರಿಯಾಗಿ ಬ್ಯಾಂಕ್ ವ್ಯವಸ್ಥಾಪಕ ವೇಣುಗೋಪಾಲ್‌ ಚುನಾವಣಾ ಪ್ರಕ್ರಿಯೆಯ ಕಾರ್ಯ ನಿರ್ವಹಿಸಿದರು. ಇದೇ ವೇಳೆ ನೂತನ ಅಧ್ಯಕ್ಷರನ್ನು ಬೆಂಬಲಿಗರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪಿ.ಎಲ್.ಡಿ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗು ಕೋಚಿಮುಲ್ ನಿರ್ದೇಶಕ ಬಂಕ್‌ ಮುನಿಯಪ್ಪ, ಚಿಮುಲ್‌ ನಿರ್ದೇಶಕ ಹುಜಗೂರು ರಾಮಯ್ಯ, ಬ್ಯಾಂಕ್ ಉಪಾಧ್ಯಕ್ಷ ಡಿ.ಎನ್. ರಾಮಚಂದ್ರ, ನಿರ್ದೇಶಕರಾದ ಕಾಳನಾಯಕನಹಳ್ಳಿ ಎಂ.ಭೀಮೇಶ್, ಗುಡಿಹಳ್ಳಿ ಚಂದ್ರು ರವಿ,ನರಸಿಂಹಪ್ಪ ಮುರಳಿ, ಭಾಗ್ಯಮ್ಮ, ಸುನಂದಮ್ಮ ,
ಕಿಶೋರ್, ಮಂಜುನಾಥ್, ಶ್ರೀನಿವಾಸ್‌ ,ಬಚ್ಚರೆಡ್ಡಿ, ಮೇಲೂರು ಆರ್.ಎ.ಉಮೇಶ್ ,ಎಂ.ಜಿ.ರಮೇಶ್ ಇನ್ನೀತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now