--Ads--

ವಿಶ್ವ ಪರಿಸರ ದಿನಾಚರಣೆ :  ಶಿವನಹಳ್ಳಿ ಸ್ಮಶಾನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

On: June 6, 2026 5:23 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ವಿಶ್ವ ಪರಿಸರ ದಿನಾಚರಣೆ :  ಶಿವನಹಳ್ಳಿ ಸ್ಮಶಾನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಕನಕಪುರ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಿವನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಶುಕ್ರವಾರ ಶಿವನಹಳ್ಳಿ ಸ್ಮಶಾನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಿಬ್ಬಂದಿ ಜೊತೆಗೂಡಿ ಕಾಂಪೌಂಡ್‌ ಸುತ್ತ ಸಸಿ ನೆಟ್ಟು ನೀರುಣಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಂ ಕೃಷ್ಣಮೂರ್ತಿ ಮಾತನಾಡಿ, ಕಳೆದ ವರ್ಷ ಇದೇ ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ ಪೋಷಣೆ ಮಾಡಿ ಬೆಳೆಸಲಾಗಿತ್ತು, ಸುಮಾರು ಶೇಖಡಾ 90% ರಷ್ಟು ಗಿಡಗಳು ಸಮೃದ್ಧಿಯಾಗಿ ಬೆಳೆದು ನಿಂತಿವೆ, ಈ ಭಾರಿಯೂ ನೂರು ಗಿಡಗಳನ್ನು ನೆಡಲಾಗಿದ್ದು, ಅವುಗಳನ್ನು ಪೋಷಣೆ ಮಾಡಲು ನಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸದಾ ಸಿದ್ಧರಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸುವ ಜವಾಬ್ದಾರಿ ಹೊಂದಬೇಕು’ ಎಂದ ಅವರು,
ಗ್ರಾಮ ಪಂಚಾಯತಿ ವತಿಯಿಂದ ನೆಡುವ ಸಸಿಗಳಿಗೆ ಸರಿಯಾಗಿ ನೀರುಣಿಸಿ ಬೆಳೆಸುವಲ್ಲಿ ಮುತುವರ್ಜಿ ವಹಿಸಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯತಿ ಕಾರ್ಯದರ್ಶಿ ಎನ್ ಯಶಸ್, ಸಾಮಾಜಿಕ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ರಾಜು, ಉಮೇಶ್, ಸಹಾಯಕ ತಾಂತ್ರಿಕ ಅಭಿಯಂತರರಾದ ಕಿಶೋರ್, ಕರ ವಸೂಲಿಗಾರರಾದ ಕುಮಾರ್, ಶಶಿಕುಮಾರ್, ಗಣಕಯಂತ್ರಗಾರ ಜಸ್ವಂತ್, ರಮೇಶ್ ನಾಯ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ನೀರುಗಂಟುಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

WhatsApp

Join Now

Telegram

Join Now

Instagram

Join Now