--Ads--

ರೈತರಿಂದ ‘ಬಲವಂತವಾಗಿ ಕೃಷಿ ಭೂಮಿ ಸ್ವಾಧೀನ: ರೈತರಿಂದ ಬೈರಮಂಗಲ ಚಲೋ’

On: June 20, 2026 6:46 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರೈತರಿಂದ ಬಲವಂತವಾಗಿ ಕೃಷಿ ಭೂಮಿ ಸ್ವಾಧೀನ : ರೈತರಿಂದ ಬೈರಮಂಗಲ ಚಲೋ 

ಕನಕಪುರ: ಕರ್ನಾಟಕ ರಾಜ್ಯ ರೈತ ಸಂಘದ ಬಲವಂತವಾಗಿ ಸರ್ಕಾರದ ನೇತೃತ್ವದಲ್ಲಿ “ಬಿಡದಿಟೌನ್ಶಿಪ್ “ಯೋಜನೆಗಾಗಿ ಯೋಜನೆಗಾಗಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬಿಡದಿ ಭೈರಮಂಗಲ ಹಾಗೂ ಸುತ್ತಮುತ್ತಲಿನ ಪಲವತ್ತಾದ, ಮೂರು ಬೆಳೆ ತೆಗೆಯುವ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ವಿರೋಧಿಸಿ “ಭೈರಮಂಗಲ ಚಲೋ” ಬೃಹತ್ ಪ್ರತಿಭಟನಾ ಸಭೆ ಹಾಗೂ ಹೋರಾಟವನ್ನು ಜೂ.22 ರ ಸೋಮವಾರ ದಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಜೂ. 22 ರ ಬೆಳಿಗ್ಗೆ 10:30 ಕ್ಕೆ ಬಿಡದಿಯ ಬಿಜಿಎಸ್ ವೃತ್ತ ದಿಂದ ಮಂಡ್ಯ ಮೈಸೂರು ,ಚಾಮರಾಜನಗರ, ಕೋಲಾರ ಬೆಂಗಳೂರು ದಕ್ಷಿಣ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಸೇರಿದಂತೆ 9 ಜಿಲ್ಲೆಗಳ ಸುಮಾರು 3,000 ರಿಂದ 4,000 ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರು ಬೈಕ್ ಜಾತಾ ಮೂಲಕ ಭೈರಮಂಗಲಕ್ಕೆ ತಲುಪಲಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯ ಬದಿಯಲ್ಲಿರುವ ಭೈರಮಂಗಲ, ಬಿಡದಿ, ಹಾರೋಹಳ್ಳಿ ಭಾಗದ ಸುಮಾರು 9,000 ಸಾವಿರ ಎಕರೆಗೂ ಹೆಚ್ಚು ಪಲವತ್ತಾದ ಕೃಷಿ ಭೂಮಿಯನ್ನು ಬಿಡದಿ ಸ್ಮಾರ್ಟ್ ಟೌನ್ಶಿಪ್ ಯೋಜನೆ ಗಾಗಿ ಕೆ ಐ ಡಿ ಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಭೂಮಿಯನ್ನು ನಂಬಿ 5,000 ಕ್ಕೂ ಹೆಚ್ಚು ರೈತ ಕುಟುಂಬಗಳು10,000ಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಬದುಕುತ್ತಿದ್ದು ಒಂದು ಎಕರೆ ಕೃಷಿ ಭೂಮಿ ನಾಶವಾದರೆ ಆಹಾರ ಭದ್ರತೆ ನಾಶವಾದಂತೆ, ಪಲವತ್ತಾದ ಭೂಮಿಯನ್ನ

ಕಾಂಕ್ರೀಟ್ ಕಾಡಾಗಿ ಮಾಡುವುದು ಒಂದು ಅವೈಜ್ಞಾನಿಕ, ರೈತ ವಿರೋಧಿ ಹಾಗೂ ಆಹಾರ ಭದ್ರತೆಗೆ ಮಾರಕವಾಗಿದ್ದು 2013 ರ ಭೂಸ್ವಾ ಧೀನ ಕಾಯ್ದೆಯ “ರೈತರ ಒಪ್ಪಿಗೆ” ನಿಯಮ ಪಾಲಿಸದೆ, ಏಕಪಕ್ಷೀಯವಾಗಿ ನೋಟಿಸ್ ನೀಡಿರುವ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ರಾಜ್ಯ ರೈತಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ ಭೂಮಿ ಕೊಟ್ಟ ರೈತರಿಗೆ ಬೇರೆಡೆ ಕೃಷಿಭೂಮಿ ಕೊಡುವ ಯೋಜನೆ ಇಲ್ಲದೆ ಕೇವಲ ಹಣ ಕೊಟ್ಟು ಕೈ ತೊಳೆದು ಕೊಳ್ಳುವ ಹುನ್ನಾರ ಇದರಲ್ಲಿದ್ದು ಈ ಭಾಗದ ಕೆರೆ, ಕಾಲುವೆ,ಹಸಿರು ವಲಯ ನಾಶವಾದರೆ ಬೆಂಗಳೂರು ಸುತ್ತಲಿನ ವಾತಾವರಣ ಮತ್ತಷ್ಟು ಹಾಳಾಗಲಿದ್ದು ಬಿಡದಿ ಟೌನ್ಸಿಪ್‌ ಯೋಜನೆಗಾಗಿ ಪಲವತ್ತಾದ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನ ಸಂಪೂರ್ಣವಾಗಿ ರದ್ದುಗೊಳಿಸ ಬೇಕು ಬಿಡದಿ ಟೌನ್ಸಿಪ್ ಬೇಡ ಅಂತಲ್ಲ, ಆದರೆ ಅದಕ್ಕೆ ನಮ್ಮ ಹೊಟ್ಟೆ ತುಂಬಿಸುವ ಭೂಮಿಯೇ ಬೇಕಾ? ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಿಲ್ಲಿಸಬೇಕು ಜೂ22 ನೇ ತಾರೀಖು ಭೈರಮಂಗಲದಲ್ಲಿ ರೈತರ ಶಕ್ತಿ ಏನೆಂದು ರಾಜ್ಯ ಸರ್ಕಾರಕ್ಕೆ ತಿಳಿಯಲಿದೆ ಎಂದರು.

ಸಂಘದ ಕರ್ನಾಟಕ ರಾಜ್ಯರೈತ ಮುಖಂಡರಾದ ರವಿ ಸೇರಿದಂತೆ ಹಲವು ರೈತ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now