--Ads--

ಕೆಜೆವಿಎಸ್ ಬೆಂಗಳೂರು ಜಿಲ್ಲೆಯ ವಿಶ್ವ ಪರಿಸರ ದಿನ ಕುರಿತ ಬೃಹತ್ ಜನ ಜಾಗೃತಿ ಅಭಿಯಾನ ಯಶಸ್ವಿ

On: June 7, 2026 9:32 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕೆಜೆವಿಎಸ್ ಬೆಂಗಳೂರು ಜಿಲ್ಲೆಯ ವಿಶ್ವ ಪರಿಸರ ದಿನ ಕುರಿತ ಬೃಹತ್ ಜನ ಜಾಗೃತಿ ಅಭಿಯಾನ ಯಶಸ್ವಿ
*************************

ಬೆಂಗಳೂರು : ಇಂದು ಬೆಳಗ್ಗೆ ಬೆಂಗಳೂರು ನಗರದ 15 ವಿವಿಧ ಸ್ಥಳಗಳಲ್ಲಿ ಬೆಂಗಳೂರು ನಗರ ಜಿಲ್ಲೆ ,ಜ್ಞಾನವಿಜ್ಞಾನ ಸಮಿತಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಯ ಬೃಹತ್ ಜನ ಜಾಗೃತಿ ಅಭಿಯಾನವನ್ನು ಯಶಸ್ವಿ ಗೊಳಿಸಿದ ಪದಾಧಿಕಾರಿಗಳು ಹಾಗೂ ವಿವಿಧ ವಿಧಾನಸಭಾಧ್ಯಕ್ಷರುಗಳು, ಕನ್ನಡದ ಕಾರ್ಯಕರ್ತರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಜಿಲ್ಲಾ ಅಧ್ಯಕ್ಷ ನಾ.ಶ್ರೀಧರ್ ಅವರು ಅರ್ಪಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕವಿ, ಚಿಂತಕ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ) ಅವರು ಪರಿಸರ ಪ್ರಕೃತಿ ಇಂದು ಹಾಳಾಗಲು ನಮ್ಮ ಆಧುನಿಕ ಜೀವನಶೈಲಿಯೇ ಕಾರಣ, ಒಳ್ಳೆಯ ಪರಿಶುದ್ಧ ಗಾಳಿ, ಬೆಳಕು, ನೀರು, ಅಗ್ನಿ, ಭೂಮಿ ಹಾಳಾಗಲು ಕಾರಣವಾಗಿದೆ. ನಮ್ಮ ಕುಟುಂಬ, ಪರಿಸರ ಚೆನ್ನಾಗಿ ಇರಲು ಜನರಲ್ಲಿ ಕಾಳಜಿಯ ಇರುವಂತೆ ಮಾಡಲು ಜಾಗೃತಿ ಮೂಡಿಸುವ ಕೆಲಸ ಆಗಬೇಕು, ಗ್ರಾಮೀಣ ಪ್ರದೇಶದ ಕಡೆಗೆ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬೇಕು, ಮೂರು,ಗಿಡ, ಕಾಡು,ಮೇಡು, ಹೊಲ, ಗದ್ದೆ, ಪ್ರಾಣಿ, ಪಕ್ಷಿ ಸಂಕುಲಗಳನ್ನು ಪರಿಚಯಿಸುವ ಕಾರ್ಯ ಆಗಬೇಕಾಗು, ನಮ್ಮ ನಮ್ಮ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವವು ಸಸಿ ನೆಡುವ ಮೂಲಕ ಆಚರಿಸಿಕೊಳ್ಳೋಣ ಎಂದು ಡಾ.ಸಿಸಿರಾ ಅವರು ಒತ್ತಾಯಿಸಿದರು.

ಗಾಂಧಿ ನಗರದ ಸಮಾಜ ಸೇವಕರು,ಕಾಂಗ್ರೆಸ್ ಮುಖಂಡರಾದ ಶ್ರೀ ಶರವಣ ಅವರು ಮಾತನಾಡಿ ಸಾಹಿತ್ಯ, ಸಂಸ್ಕೃತಿ, ಪರಿಸರ ನಮ್ಮ ಮೊದಲ ಆದ್ಯತೆ ಆಗಲಿ, ನಗರದಲ್ಲಿ ಉದ್ಯಾನವನ, ಗಿಡಮರ ಬೆಳೆಸಲು ಸಾರ್ವಜನಿಕರು ಮುಂದಾಗಬೇಕು ಎಂದರು.

ಇಂದು ನಡೆದ ಪರಿಸರ ಕುರಿತ ಬೃಹತ್ ಜನಜಾಗೃತಿ ಅಭಿಯಾನದಲ್ಲಿ 500ಕ್ಕೂ ಹೆಚ್ಚು ಆಸಕ್ತ ಬಂಧು – ಭಗನಿಯರು ಭಾಗವಹಿಸಿದ್ದರು ಹೇಳಿ

ಮುಂದಿನ ದಿನಗಳಲ್ಲಿಯೂ ನಮ್ಮ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಚಟುವಟಿಕೆಗಳು ಜನ ವಿಜ್ಞಾನ ಚಳುವಳಿಯನ್ನು ಕಟ್ಟುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಗಾಂಧಿ ನಗರ ಘಟಕದ ಅಧ್ಯಕ್ಷ , ಶಿಕ್ಷಕ ಮಂಜುನಾಥ್, ಬಿಇಎಲ್ ಎಂ.ಪ್ರಭು, ಹೋರಾಟಗಾರ ಶಿವರಾಮ್, ಬಿಹೆಚ್ಇಎಲ್ ಕಾರ್ಮಿಕ ಮುಖಂಡ ಹನುಮಂತರಾಜು ಮುಂತಾದವರಿದ್ದು ಕಾರ್ಯಕ್ರಮ ಯಶಸ್ವಿಯಾಗಿಸಿದರು..ಗಾಯಕಿ ಅಂಬುಜಾ ಬೀರೇಶ್ ಪರಿಸರ ಗೀತೆ ಹಾಡಿಸರಂಜಿಸಿದರು.

WhatsApp

Join Now

Telegram

Join Now

Instagram

Join Now