--Ads--

ನಮ್ಮ ಕುಲ ಶಿಲ್ಪಿಗಳು ಉಪನ್ಯಾಸ ಮಾಲೆ

On: June 11, 2026 3:45 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ನಮ್ಮ ಕುಲ ಶಿಲ್ಪಿಗಳು ಉಪನ್ಯಾಸ ಮಾಲೆ

ಬೆಂಗಳೂರು : ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಇದೇ ಭಾನುವಾರ 14 ನೇ ತಾರೀಖು ಬೆಳಗ್ಗೆ 11 ಗಂಟೆಗೆ ಗೌಡತಿಯರ ಸೇನೆ ವತಿಯಿಂದ ನಮ್ಮ ಕುಲ ಶಿಲ್ಪಿಗಳು ಉಪನ್ಯಾಸದ ಮೂರನೇ ಮಾಲಿಕೆಯಲ್ಲಿ ಗಂಗ ಅರಸರು ಮತ್ತು ಗಜಶಾಸ್ತ್ರ ಪ್ರಾವೀಣ್ಯತೆ ವಿಷಯ ಕುರಿತು ಇತಿಹಾಸ ಹಾಗೂ ಶಾಸನ ತಜ್ಞೆ, ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯ ಇಲಾಖೆಯ ನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ ಅವರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು, ಖ್ಯಾತ ಅನುವಾದಕಿ ಡಾ .ಕೆ.ಆರ್.ಸಂಧ್ಯಾರೆಡ್ಡಿ ವಹಿಸುವರು . ಮುಖ್ಯ ಅತಿಥಿಗಳಾಗಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಡಬ್ಲ್ಯೂ.ಡಿ.ಅಶೋಕ್ , ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಅನಿಕೇತನ ಮಾಯಣ್ಣ, ವಿಶೇಷ ಆಹ್ವಾನಿತರಾಗಿ ಲೇಖಕಿ ಡಾ.ಎಂ.ಎಸ್. ಶಶಿಕಲಾಗೌಡ, ಗೌಡತಿಯರ ಸೇನೆಯ ಅಧ್ಯಕ್ಷೆ ಶ್ರೀಮತಿ ಕೆಂಪಾಜಮ್ಮ, ಕಾರ್ಯದರ್ಶಿ ಶ್ರೀಮತಿ ರೂಪಾಗೌಡ, ಸಂಸ್ಥಾಪಕ ಗರ್ಕಳ್ಳಿ ಕೃಷ್ಣೇಗೌಡ, ಸಾಹಿತಿ ಡಾ.ಸಿಸಿರಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ ,
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬೊಮ್ಮನಾಯಕನಹಳ್ಳಿ ಲಾಲ್ ಬಾಗ್ ಮಹೇಶ್, ದೇಶಮುಖ ಪತ್ರಿಕೆ ಸಂಪಾದಕ ಹೆಚ್.ಕೆ.ಬೊಮ್ಮೇಗೌಡ, ಖ್ಯಾತ ಗಾಯಕಿ ಭಾಗ್ಯಶ್ರೀ, ಸಮಾಜ ಸೇವಕಿ ಹೆಚ್.ಡಿ.ಪುಷ್ಪಾ ಅವರಿಗೆ ಗೌರವಿಸಿ ಅಭಿನಂದಿಸಲಾಗುತ್ತದೆ,
ಭುವನೇಶ್ವರಿ ಕಲಾ ಬಳಗದ ಎಲ್ .ಬಸವಲಿಂಗ ಮತ್ತು ತಂಡದಿಂದ ಕನ್ನಡ ನಾಡು ನುಡಿ ಗೀತೆಗಳ ಗಾಯನ ಮತ್ತು ಕು.ಶ್ರೇಯಾಶ್ರೀ ನೃತ್ಯ ಪ್ರದರ್ಶನ ಇರುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

WhatsApp

Join Now

Telegram

Join Now

Instagram

Join Now