--Ads--

ನಮ್ಮ ಮೇಲಿನ ಅಭಿಮಾನವನ್ನು ಸಾರ್ವಜನಿಕರ ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ : ಡಾ ಯತೀಂದ್ರ  ಸಿದ್ದರಾಮಯ್ಯ

On: June 15, 2026 4:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ನಮ್ಮ ಮೇಲಿನ ಅಭಿಮಾನವನ್ನು ಸಾರ್ವಜನಿಕರ ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ : ಡಾ ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಜೂನ್ 15: ನಮ್ಮ ಮೇಲಿನ ಪ್ರೀತಿ ಅಭಿಮಾನವನ್ನು ಸಾರ್ವಜನಿಕರ ಕೆಲಸಗಳಿಗೆ ಉಪಯೋಗಿಸುವ ಮೂಲಕ ಜನರ ಸೇವೆಯನ್ನು ಮಾಡಿ ಅದೇ ನೀವು ನಮಗೆ ತೋರುವ ಪ್ರೀತಿ ವಿಶ್ವಾಸ ಎಂದು  ಸಚಿವ ಡಾ ಯತೀಂದ್ರ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಅವರ ಅಭಿಮಾನಿ ಬಳಗದವರಿಗೆ ಕರೆ ನೀಡಿದರು.
ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿ ಗ್ರಾಮದ ಯುವ ಮುಖಂಡ ಕೆ ಆರ್ ರವಿಕುಮಾರ್ ಅವರು ಡಾ ಯತೀಂದ್ರ ಸಿದ್ದರಾಮಯ್ಯ ರವರ ಹೆಸರಿನ ಫೌಂಡೇಶನ್ ಸ್ಥಾಪಿಸಿ ಅಧ್ಯಕ್ಷರಾಗಿರುವ ರವಿಕುಮಾರ್ ರವರು ಡಾ ಯತೀಂದ್ರ ಸಿದ್ರಾಮಯ್ಯನವರ ಅಭಿಮಾನದಿಂದ ರವಿಕುಮಾರ್ ರವರು ತಮ್ಮ ಕೈಗೆ ಡಾ. ಯತೀಂದ್ರ ಸಿದ್ದರಾಮಯ್ಯನವರ ಭಾವಚಿತ್ರದ ಹಸಿರು ಅಚ್ಚೆಯನ್ನು ಕೈಯಲ್ಲಿ ಹಾಕಿಸಿಕೊಂಡು ತೋರಿಸುವ ಮೂಲಕ ತಮ್ಮ ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸಿದರು.
ರವಿಕುಮಾರ್ ಅವರ ಕೈಯನ್ನು  ಸಚಿವ ಡಾ ಯತೀಂದ್ರ ಸಿದ್ರಾಮಯ್ಯನವರು ನೋಡುವ ಮೂಲಕ ಸಂತಸ ವ್ಯಕ್ತಪಡಿಸಿ ನಮ್ಮ ಮೇಲಿನ ಅಭಿಮಾನ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಆಭಾರಿಯಾಗಿರುತ್ತವೆ, ಅದೇ ರೀತಿ ನಮ್ಮ ಮೇಲೆ ನಿಮಗೆ ಅಭಿಮಾನವಿದ್ದರೆ ಕ್ಷೇತ್ರದ ಸಾರ್ವಜನಿಕರಿಗೆ ಬಡವರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ತೋರಿಸಿ ಅದೇ ನಮಗೆ ನೀವು ನಮಗೆ ತೋರುವ ತುಂಬು ಹೃದಯದ ಅಭಿಮಾನ ಎಂದು ಅಭಿಮಾನಿಗಳಿಗೆ ಕಾರ್ಯಕರ್ತರಿಗೆ ತಿಳಿಸಿದರು
ಈ ಸಂದರ್ಭದಲ್ಲಿ ಡಾ ಯತೀಂದ್ರ ಸಿದ್ರಾಮಯ್ಯನವರ ಫೌಂಡೇಶನ್ ಅಧ್ಯಕ್ಷ ಕೆ ಆರ್ ರವಿಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು

WhatsApp

Join Now

Telegram

Join Now

Instagram

Join Now