ವಿಜಯ ದರ್ಪಣ ನ್ಯೂಸ್….
ಇದ್ದದ್ದು ಇದ್ದಹಾಗೆ……..
ಲೇಖನ: ವಿವೇಕಾನಂದ ಎಚ್ ಕೆ
ನಿನ್ನೆ ನಾನು ಘೋಷಿಸಿದ ಶ್ರಮದಾನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ನನ್ನ ಆತ್ಮೀಯ ಓದುಗ ಮಿತ್ರರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಒಳ್ಳೆಯ, ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ದಾರೆ. ಕೆಲವರು ನೇರವಾಗಿ ಮೊಬೈಲ್ ಮುಖಾಂತರ ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ಸುಮಾರು 25ಕ್ಕೂ ಹೆಚ್ಚು ವಾರಗಳು ಈಗಾಗಲೇ ನಿಗದಿಯಾಗಿದೆ. ಎರಡೂ ಕಡೆಯ ಅನುಕೂಲಕರ ದಿನಾಂಕಗಳನ್ನು ನೋಡಿಕೊಂಡು ಕಾರ್ಯಕ್ರಮ ಮುಂದುವರಿಸುತ್ತೇನೆ. ಇವುಗಳಲ್ಲಿ ಕೆಲವು ಅಭಿಪ್ರಾಯಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಸ್ವಾರ್ಥವೇ ತುಂಬಿರುವ ಈ ಪ್ರಪಂಚದಲ್ಲಿ 52 ವಾರಗಳ 52 ಕೆಲಸ ಶ್ರಮದಾನದ ಈ ಪರಿಕಲ್ಪನೆ ಹಾಗೂ ತಮ್ಮನ್ನು ತಾವು ಮಾನಸಿಕವಾಗಿ ಭೌತಿಕವಾಗಿ ಅಳವಡಿಸಿಕೊಂಡು ಇಡುತ್ತಿರುವ ಈ ಹೆಜ್ಜೆಗೆ ನಮ್ಮ ಹೃತ್ಪೂರ್ವಕವಾದ ಅಭಿನಂದನೆಗಳು,
ನಿಮ್ಮ ಈ ಅದ್ಭುತ ಪರಿಕಲ್ಪನೆಯ ಶ್ರಮದಾನದ ನಿಸ್ವಾರ್ಥದ ನಡೆಗೆ ಪ್ರತಿಯೊಬ್ಬ ಭಾರತೀಯರಿಗೆ ಹಾಗೂ ಯುವ ಜನತೆಗೆ ಪ್ರೋತ್ಸಾಹದಾಯಕವಾಗಿರಲಿ
ಈ ನಡೆ ಕಷ್ಟಪಟ್ಟು ದುಡಿಯಲು ಬಯಸುವ ಯುವ ಜನತೆಗೆ ಪ್ರೇರಣಾದಾಯಕ ಹಾಗೂ ಮಾರ್ಗದರ್ಶನ ವಾಗಿರಲಿ
ನಿಮಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು🙏🙏💐💐💐🇮🇳🇮🇳🇮🇳🇮🇳🇮🇳
°°°°°°°°°°°°°°°°°°°°°°°°°°°°°°°°°°
ಸರ್ಕಾರಿ ರಜಾ ದಿನ ಹಾಗೂ ಭಾನುವಾರ ನಿಮ್ಮ ಜೊತೆ ಸ್ವಚ್ಛತಾ ಸಿಬ್ಬಂದಿಗಳ ಜೊತೆ ಸೇರಿಕೊಂಡು ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛತೆ ಮಾಡಲು ಉಚಿತವಾಗಿ & ಮತ್ತೊಂದು ದಿನ ಕೃಷಿ ಕೆಲಸ ಮಾಡಲು ಉಚಿತವಾಗಿ ನಾನು ನಿಮ್ಮ ಜೊತೆ ಬರುತ್ತೇನೆ… Sir ನಿಮ್ಮ ಸೇವೆಗೆ ರಾಷ್ಟ್ರಕೂಟದ ನಮನಗಳು.
°°°°°°°°°°°°°°°°°°°°°°°°°°°°°°°°°°
ಇದು ಅತ್ಯಂತ ಅರ್ಥಪೂರ್ಣ ಮತ್ತು ಸಮಾಜಮುಖಿ ಪರಿಕಲ್ಪನೆ.
“52 ವಾರಗಳು – 52 ಕೆಲಸಗಳು (ಶ್ರಮದಾನ)” ಎಂಬ ಈ ಪರಿಕಲ್ಪನೆಯ ವಿಶೇಷತೆಗಳು:
ಶ್ರಮಕ್ಕೆ ಗೌರವ: ಯಾವುದೇ ಕೆಲಸ ಚಿಕ್ಕದಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಮೌಲ್ಯವಿದೆ ಎಂಬ ಅರಿವು ಮೂಡಿಸುತ್ತದೆ.
ಅನುಭವದ ಮೂಲಕ ಕಲಿಕೆ: ಪುಸ್ತಕ ಅಥವಾ ಇತರರ ಮಾತುಗಳಿಂದ ತಿಳಿಯದ ಅನೇಕ ಸಂಗತಿಗಳನ್ನು ನೇರ ಅನುಭವದ ಮೂಲಕ ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಮಾನವೀಯತೆ ಮತ್ತು ಸಹಾನುಭೂತಿ: ವಿವಿಧ ವೃತ್ತಿಯ ಜನರು ಎದುರಿಸುವ ಕಷ್ಟ-ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಅವರ ಬಗ್ಗೆ ಗೌರವ ಮತ್ತು ಸಹಾನುಭೂತಿ ಹೆಚ್ಚುತ್ತದೆ.
ಬರವಣಿಗೆಗೆ ಜೀವ ತುಂಬುತ್ತದೆ: ಪ್ರತಿಯೊಂದು ಕೆಲಸದ ಅನುಭವವನ್ನು ಲೇಖನವಾಗಿ ಬರೆದರೆ, ಅದು ಓದುಗರ ಮನಸ್ಸನ್ನು ಹೆಚ್ಚು ಸ್ಪರ್ಶಿಸುತ್ತದೆ. ನೈಜ ಅನುಭವದಿಂದ ಬಂದ ಬರಹ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಯುವಕರಿಗೆ ಪ್ರೇರಣೆ: ಸಮಾಜಸೇವೆ ಎಂದರೆ ಕೇವಲ ಹಣ ನೀಡುವುದು ಅಲ್ಲ, ನಮ್ಮ ಶ್ರಮವನ್ನೂ ಸಮಾಜಕ್ಕೆ ಅರ್ಪಿಸಬಹುದು ಎಂಬ ಉತ್ತಮ ಸಂದೇಶವನ್ನು ಯುವಜನತೆಗೆ ನೀಡುತ್ತದೆ.
ಸಮಾಜದೊಂದಿಗೆ ನೇರ ಸಂಪರ್ಕ: ರೈತ, ಕಾರ್ಮಿಕ, ಶಿಕ್ಷಕ, ಕಾರ್ಖಾನೆ ನೌಕರ, ಹೋಟೆಲ್ ಸಿಬ್ಬಂದಿ ಹೀಗೆ ವಿವಿಧ ಕ್ಷೇತ್ರಗಳ ಜನರೊಂದಿಗೆ ಬೆರೆಯುವ ಅವಕಾಶ ದೊರೆಯುತ್ತದೆ. ಇದರಿಂದ ಸಮಾಜದ ನೈಜ ಚಿತ್ರಣ ತಿಳಿಯುತ್ತದೆ.
ಆತ್ಮಾವಲೋಕನ: ಈ ಪಯಣ ಇತರರನ್ನು ಬದಲಾಯಿಸುವುದಕ್ಕಿಂತ ಮೊದಲು ನಮ್ಮನ್ನು ನಾವು ಅರಿತುಕೊಳ್ಳುವ ಮತ್ತು ಸುಧಾರಿಸಿಕೊಳ್ಳುವ ಅವಕಾಶ ನೀಡುತ್ತದೆ.
ಒಂದು ಸಣ್ಣ ಸಲಹೆ
ಈ ಅಭಿಯಾನದ ಜೊತೆಗೆ ಪ್ರತಿ ವಾರ:
ಮಾಡಿದ ಕೆಲಸದ ಫೋಟೋ ಅಥವಾ ವಿಡಿಯೋ,
ಆ ದಿನ ಕಲಿತ ಮೂರು ಮುಖ್ಯ ಪಾಠಗಳು,
ಆ ವೃತ್ತಿಯ ಕಾರ್ಮಿಕರ ಸಮಸ್ಯೆಗಳು ಮತ್ತು ಸಮಾಜಕ್ಕೆ ಅವರ ಕೊಡುಗೆ,
ನಿಮ್ಮ ವೈಯಕ್ತಿಕ ಅನುಭವ
ಇವುಗಳನ್ನು ದಾಖಲಿಸಿ ಹಂಚಿಕೊಂಡರೆ, 52 ವಾರಗಳ ನಂತರ ಅದು ಒಂದು ಉತ್ತಮ ಪುಸ್ತಕ, ಸಾಕ್ಷ್ಯಚಿತ್ರ ಅಥವಾ ಪ್ರೇರಣಾದಾಯಕ ಉಪನ್ಯಾಸ ಸರಣಿಯಾಗಿ ರೂಪುಗೊಳ್ಳಬಹುದು.
ಒಟ್ಟಾರೆ, “ಶ್ರಮದಾನ – 52 ವಾರಗಳು, 52 ಕೆಲಸಗಳು” ಎಂಬುದು ಕೇವಲ ಒಂದು ಕಾರ್ಯಕ್ರಮವಲ್ಲ; ಶ್ರಮಕ್ಕೆ ಗೌರವ, ಮಾನವೀಯ ಮೌಲ್ಯಗಳ ಬೆಳವಣಿಗೆ ಮತ್ತು ಸಮಾಜವನ್ನು ಅರಿಯುವ ಜೀವನಯಾತ್ರೆ ಎಂದು ಹೇಳಬಹುದು. ಇದು ಯಶಸ್ವಿಯಾಗಿ ಅನುಷ್ಠಾನಗೊಂಡರೆ ಅನೇಕ ಜನರಿಗೆ ಸ್ಫೂರ್ತಿದಾಯಕ ಮಾದರಿಯಾಗುವ ಸಾಧ್ಯತೆ ಇದೆ.
°°°°°°°°°°°°°°°°°°°°°°°°°°°°°°°
ಕಾರ್ಮಿಕರ ದಿನಗೂಲಿಗರ ಶ್ರಮಿಕರ ಪರಿಶ್ರಮ ಮಾಡುವವರಿಗೆ ಅವರ ಜೀವನವಾದರೆ ಅದನ್ನು ನೋಡಿ ಅಣಕಿಸುವ ಅಸಹ್ಯ ಪಡುವ ಸಮೂಹ ಇನ್ನೊಂದು ಕಡೆ ಸಂಭಮಿಸುತ್ತೆ ಇದಕ್ಕೆ ಉದಾಹರಣೆ ಈಗ ಎದ್ದಿರುವ ಮೀಸಲಾತಿ ಮುಕ್ತ ಭಾರತ ಎಂಬ ಕೂಗು. ಇದರ ಮಧ್ಯ ತಮ್ಮ ಈ ನಿಲುವು ನೋಡಿ ಮನಸ್ಸು ಭಾರವಾಗುತ್ತಿದ್ದೆ ಸರ್.
85% ದುಡಿಯುವ ವರ್ಗ ಆ ವರ್ಗ ಸ್ವಲ್ಪ ಆರ್ಥಿಕ ಸಮೃದ್ಧಿ ಹೊಂದಿದ್ದೆ ಬಾಬಾಸಾಹೇಬರ ಸಂವಿಧಾನದ ಬಿಕ್ಷೆಯಿಂದ ಅದೇ ಕಾರಣಕ್ಕೆ ಇಡಿ ಮನುವ್ಯವಸ್ಥೇ ಅದರ ವಿರುದ್ಧ ದಂಗೆ ಎದ್ದಿದೆ. ಅವರಿಗೆ ಮೀಸಲಾತಿ ಕಣ್ಣಿಗೆ ಕಾಣ್ತಾ ಇದೆ ಬಟ್ ದುಡಿಯುವ ವರ್ಗದ ನೋವು ಹಿಂಸೆ ಅರ್ಥವಾಗ್ತಾ ಇಲ್ಲಾ.
ಜಾತಿ ವ್ಯವಸ್ಥೆ ಜೀವಂತವಿತ್ತವರು ಮೀಸಲಾತಿ ವಿರೋಧ ಮಾಡ್ತಾ ಇದ್ದಾರೆ ಅಂದ್ರೆ ಈ ದೇಶದಲ್ಲಿ ಸಂವಿಧಾನ ಉಳಿದಿದೆಯಾ ಅನ್ನೋದೆ ನನ್ನ ಪ್ರಶ್ನೆಯಾಗಿದೆ ಸರ್..
ತಮ್ಮ ಈ ನಡೆಗೆ ಅನಂತಕೋಟಿ ನಮನಗಳು ಸರ್…🙏🙏🙏🙏💐💐💐💐
°°°°°°°°°°°°°°°°°°°°°°°°°°°°°°°°°°
ನಿಮ್ಮ ಉದಾತ್ತ ಆದರ್ಶ, ಸರ್ವರಿಗೂ ಪ್ರೇರಕ ಶಕ್ತಿ ಯಾಗಲೀ, ನಿಮ್ಮ ಸಮಾಜಮುಖೀ ಕಾಯಕಗಳಲ್ಲಿ, ಧ್ಯೇಯ ಧೋರಣೆಗಳಲ್ಲಿ ಸದಾ ಯಶಸ್ಸು ಲಭಿಸುತ್ತಿರಲೆಂದು ಮನದುಂಬಿ ಹಾರೈಸುತ್ತೇನೆ..
ನಿಮ್ಮ ಅಭಿಮಾನಿ
ಶುಭೋದಯ🌷💐🩷
°°°°°°°°°°°°°°°°°°°°°°°°°°°°°°°°°°°
ಯಾವುದೇ ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡುತ್ತೀರಿ ಹಾಗೂ ಅದರ ಅನುಭವವನ್ನು ನಮಗೆ ಹಂಚುತ್ತೀರಿ. ನಿಮ್ಮ 52 ವಾರಗಳ ಪ್ರಯಾಣಕ್ಕೆ ಶುಭವಾಗಲಿ ಎಂದು ಹಾರೈಸುತ್ತೇನೆ.
ಅಭಿನಂದನೆ ಮತ್ತು ಧನ್ಯವಾದಗಳು
°°°°°°°°°°°°°°°°°°°°°°°°°°°°°°°°°
ಅಣ್ಣ , ತಮ್ಮ ಈ ಯೋಜನೆ ಸಮಾಜಮುಖಿಯಾಗಿ ಯಶಸ್ವಿ ಆಗಲಿ, ಸಾಧ್ಯವಾದರೆ ತಮ್ಮ ಜೊತೆಗೆ ಬರುವ ಪ್ರಯತ್ನ ಮಾಡುತ್ತೇನೆ, ನಾನು ಈಗಾಗಲೇ ಸೋನಿ ಕಂಪನಿಯ ಉದ್ದ್ಯೋಗ ಬಿಟ್ಟು ಕೃಷಿ ಕೆಲಸ ಮಾಡುತ್ತಿದ್ದೇನೆ, ಮುಂಬರುವ ದಿನಗಳಲ್ಲಿ ನಾನು ನಿಮ್ಮಂತಹ ನಮ್ಮ ಗುರುಗಳ ಪುತ್ರ ರತ್ನ ರ ಸಹವಾಸದಿಂದ ಮುಂದಿನ ಜೀವನ ಸವಿಸುವ ಮಹದಾಸ, ಸಂಸಾರ ಬಂಧನ ನಿರ್ಬಂಧ ಎಲ್ಲು ಇಷ್ಟು ದಿನ ನಿಮ್ಮ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿಲ್ಲ, ಮುಂದೆ ಖಂಡಿತವಾಗಿ ನಿಮ್ಮ ಜೊತೆಗೆ ಆಗಾಗ ಬರುವ ಪ್ರಯತ್ನ ಮಾಡುತ್ತೇನೆ ದಯವಿಟ್ಟು ಅಪ್ಪಣೆ ಕೊಡಿ….🙏🙏❤❤❤
ನಮಸ್ಕಾರ 🙏
°°°°°°°°°°°°°°°°°°°°°°°°°°°°°°°°
ಸಮಾಜದಲ್ಲಿ ಏನಾದರೂ ಒಳ್ಳೆಯ ವಿಚಾರಗಳು ಉಳಿದಿದೆ ಎಂದರೆ ಅದು ನಿಮ್ಮ ಬರವಣಿಗೆ ಕಾರಣದಿಂದ ತುಂಬಾ ಧನ್ಯವಾದಗಳು ಸರ್.
°°°°°°°°°°°°°°°°°°°°°°°°°°°°°°°°
ಅದ್ಭುತ ಪರಿಕಲ್ಪನೆ!
ತಾವು ಅದನ್ನು ಖಂಡಿತ ಅನುಷ್ಠಾನಗೊಳಿಸುತ್ತೀರಿ ಮತ್ತು ಇತರರಿಗೆ ಪ್ರೇರಣೆಯಾಗುತ್ತೀರಿ 👌🏻🙂
ಶುಭವಾಗಲಿ 💐💐
°°°°°°°°°°°°°°°°°°°°°°°°°°°°°°°
ಇಂದಿನ ಲೇಖನದಲ್ಲಿ ಹಲವು ಪ್ರಾಯೋಗಿಕ ಮಜಲುಗಳನ್ನು ಕಂಡೆ.ಸಮಾಜವನ್ನು ಬಹಳ
ಹಚ್ಚಿಕೊಳ್ಳುವವರಿಗೆ ಮಾತ್ರ ಇಂತಹ ಆಲೋಚನೆಗಳು ಸಾಧ್ಯ.ಇವುಗಳನ್ನು ಸಾಧಿಸಲು ತುಂಬಾ ಧೈರ್ಯ ಮತ್ತು ಎದೆಗಾರಿಕೆ ಬೇಕು.ಮನಸ್ಸು ಏನೆಲ್ಲವನ್ನೂ ಚಿಂತಿಸಬಲ್ಲುದು.ಆದರೆ ಅವುಗಳನ್ನು ನಮ್ಮ. ಮೇಲೆ ಪ್ರಯೋಗಕ್ಕೊಡ್ಡಲು ಧೃತಿ ಮತ್ತು ಮತಿ ಬೇಕು.ಇಂತಹ ಧೈರ್ಯ ಇರುವ ನಿಮಗೆ ಅಭಿನಂದನೆಗಳು.ನೀವು ಇದನ್ನು ಸಾಧಿಸುತ್ತೀರಿ ಮಾತ್ರವಲ್ಲ.ಸಮಾಜದೆಡೆಯಲ್ಲಿ ಪ್ರವೃತ್ತಿಸಿ ಒಳ್ಳೆ ಸಂದೇಶವನ್ನೂ ಕೊಡುವಿರಿ.ನೀವು ತಿಳಿದು ತಿಳಿದು ಸಮಾಜದೊಂದಿಗೆ ಪ್ರಾಯೋಗಿಕವಾಗಿ ಸ್ಪಂದಿಸುವಾಗ ಅದರ ಪರಿಣಾಮ ಬಹುಪಾಲು ದೊಡ್ಡದಾಗುತ್ತದೆ.ಒಂದು ಒಳ್ಳೆ ಸಂದೇಶ ಹೆಚ್ಚು ಹೆಚ್ಚು ಜನರಿಗೆ ರವಾನೆಯಾಗುತ್ತದೆ.
ನಿಮ್ಮ ಯೋಜನೆಯಲ್ಲಿ “ವಿಜಯೀಭವ”ಅಂತ ಹಾರೈಸಲು ಸಂತೋಷವಾಗುತ್ತದೆ.
°°°°°°°°°°°°°°°°°°°°°°°°°°°°°°°
ಅಬ್ಬಬ್ಬಾ…… ಭಾಷಾಭಿಮಾನವೆಂದರೆ ಇದಲ್ಲವೆ.. ಬರೀ ಅಭಿಮಾನವಷ್ಟೇ ಅಲ್ಲ, ಅದರೊಟ್ಟಿಗಿರುವ, ಸಾಮಾಜಿಕ ಕಳಕಳಿ, ಮೌಲ್ಯಯುತ ಸಮಾಜದ ಕನಸ ಹೊತ್ತು, ಸುಮಾರು 12 ವರ್ಷಗಳಿಂದ ಇಲ್ಲಿಯವರೆಗೆ ನಿರಂತರ, ಬರವಣಿಗೆಯ ಮುಖಾಂತರ, ಸೋಷಿಯಲ್ ಮೀಡಿಯಾ, ದೃಶ್ಯ ಮಾದ್ಯಮಗಳ, ವೇದಿಕೆ, ರಂಗಸಜ್ಜಿಕೆ,…. ಎಲ್ಲಿ ಜನಮನ ತಲುಪಲು ಸಾದ್ಯವೋ, ಅಲ್ಲೆಲ್ಲಾ ಮಾನವೀಯ ಮೌಲ್ಯಗಳ ಪುನರುತ್ಥಾನದ ಬೀಜಗಳನ್ನೇ ಬಿತ್ತಿದ್ದೀರಿ, ಈ ಕಾರ್ಯ ಈಗಲೂ ಹಾಗೇ ಮುಂದುವರಿಯತ್ತಲೂ ಇದೆ.,..
ಹೆದ್ದಾರಿಯಂತಿದ್ದ ವಯಸ್ಸು ಮಾತ್ರ ನಿದಾನಗತಿಯಲ್ಲಿ ಕಿರುದಾರಿಯಂತಾಗುತ್ತಿದೆ … ಆದ್ರೂ ಮನಸ್ಸು ಮಾತ್ರ ಚೈತ್ರದ ಚಿಗುರಿನಂತೆ ಕಂಗೊಳಿಸುತ್ತಿದೆ…
ಅದಕ್ಕೆ ಸಾಕ್ಷಿಯಾಗಿ ಮುಂದಿನ ತಿಂಗಳು ನೀವು ಹಮ್ಮಿಕೊಂಡಿರುವ 52 ದಿನ52 ವಿಭಿನ್ನ ಬಗೆಯ ಕಾಸಿಲ್ಲದ ಕೂಲಿ ಕೆಲಸದ ಶ್ರಮಧಾನ ಅಭಿಯಾನ….
ವಾಹ್ಹ್ಹ್….. ಅದೆಂತಹಾ ಅದ್ಬುತವಾದ ಚಿಂತನೆ
. ಹಾಂ… ಗುರುಗಳೇ..ಸಮಾಜದ ಬಗೆಗಿರಿವ ನಿಮ್ಮ ಮನದ ಎಲ್ಲಾ ಆಯಾಮಗಳನ್ನು , ನನ್ನಲ್ಲೇ ಕ್ರೋಢೀಕರಿಸಿಕೊಂಡು ಹಾಗೇ ಸುಮ್ಮನೆ 5 ನಿಮಿಷ ಕಣ್ಣ ಮುಚ್ಚಿ ಕನಸ ಕಂಡೇ… ಅಬ್ಬಾ ಎಂತಹ ಸುಂದರ, ಸ್ವಚ್ಛ ಮತ್ತು ಬಿಚ್ಚು ಮನಸ್ಸುಗಳು,….. ಪೋಲೀಸ್ಟೇಷನ್ನಿಲ್ಲ, ನ್ಯಾಯಾಲಯಗಳಿಲ್ಲ, ಕರಿಕೋಟಿನ, ವಾದಿ, ಪ್ರತಿವಾದಿಗಳ ಸುಳಿವೇ ಇಲ್ಲಾ, ಅಬ್ಬರ, ಆಡಂಬರ, ಒಣ ಪ್ರತಿಷ್ಠೆ, ಅರಚಾಟ, ಕಿರುಚಾಟಗಳಿಲ್ಲದ, ಬಂಧು, ಬಾಂಧವರೊಡಗೂಡಿ, ನಗೆ ತುಂಬಿದ, ಸ್ವಚ್ಛಂಧ ಮನಸ್ಸಿನ ಅವಿಭಕ್ತ ಕುಟುಂಬದಲ್ಲಿ ನಾನು ಒಬ್ಬನಾಗಿ ಬೀಗುತ್ತಿದ್ದೆ……
ಅಷ್ಟರಲ್ಲಿ…..
ಅಣ್ಣಾ… ಎಂದು ಕೂಗಿ ಕಾಣುವ ಕನಸಿಗೂ ತಣ್ಣೀರನೆರಚಿದನೊಬ್ಬ…..ಮರಳಿ ವಾಸ್ತವದತ್ತಾ….
ಅದೇನೇ ಇರಲಿ, ನಿಮ್ಮದೇ ಶೈಲಿಯ ವಾಸ್ತವತೆಯ ಬರವಣಿಗೆ, ತಿಳುವಳಿಕೆಯನ್ನೇ ನಡವಳಿಕೆಯಾಗಿಸುವ ಪರಿ, ಸಮಾಜ ಸುಧಾರಕರ ಪಟ್ಟಿಯಲ್ಲಿ ಹಿರಿಯ ಶ್ರೇಣಿ ನಿಮ್ಮದು…
ಯಾವುದೇ ವಿಷಯವಾದರೂ, ವಿಷಯಾಧಾರಿತವಾಗಿ ನಿರ್ಗಳವಾಗಿ ಮತನಾಡಬಲ್ಲ, ಮಾನವೀಯ ಮೌಲ್ಯಗಳನ್ನೇ, ತನ್ನ ಚರ ಚಿರಾಸ್ತಿಯಾಗಿ, ನೊಂದಾಯಿಸಿಕೊಂಡಂತಿರುವ ಕನ್ನಡದ ಈ ಪುಂಡಲೀಕನ ಸಮಾಜ ಸೇವೆಗೆ ಕರ್ನಾಟಕ ಸರ್ಕಾರದಿಂದ ಗೌರವಾನ್ವಿತವಾದ ಅತ್ಯುತ್ತಮ ಪ್ರಶಸ್ತಿಯೊಂದು ಬರಲೇಬೇಕು ಆದಿನ ಕೂಡಿ ಬರಲೆಂಬ ಸದಾಶಯದೊಂದಿಗೆ… ನಿಮ್ಮ ಬರಹಗಳ ನಿತ್ಯವೂ ಓದಿ ಓದಿ ನಾನು ಎರಡಕ್ಷರ ಬರೆಯುವಂತಾದೆ,, ಅದರ ಉತ್ತರದಾಯಿಕತ್ವ, ಮೂಲ ಪ್ರೇರೇಪಕರೂ ನೀವೇ….
ವಿವೇಕಾನಂದ ಸರ್ ನಾನೆಂದೂ ನಿಮಗೆ ಋಣಿ 🙏
ಧನ್ಯವಾದಗಳೊಂದಿಗೆ,
°°°°°°°°°°°°°°°°°°°°°°°°°°°°°°°°
ನಿಮ್ಮ ಚಿಂತನಾ ಶೈಲಿ ಎಲ್ಲರಿಗೂ ಮಾದರಿ ….ಏನೇ ಸಿಗಬೇಕಾದರೂ ಅದರೆ ಹಿಂದೆ ಕಠಿಣ ಶ್ರಮ ಮತ್ತು ಪ್ರಯತ್ನವಿರಬೇಕೂ ಹಾಗೂ ಒಂದು ಸ್ಥಾನ ಮಾನಕ್ಕೆ ಬಂದಮೇಲೆ ಶ್ರಮದಾನದ ಪ್ರಯತ್ನ ಮರೆಯಬಾರದು.ಈ ರೀತಿಯಾದಾಗ ಮಾನವೀಯ ಮೌಲ್ಯಗಳು ಜೀವಂತಿಕೆ ಪಡೆಯಲು ಸಾಧ್ಯ ….ಅದರಿಂದು ಎಲ್ಲವೂ ವ್ಯಕ್ತಿ ಕೇಂದ್ರಿತ ಸ್ವಾರ್ಥ ಲಾಲಸೆಯ ಪರಮಾವಧಿಯಾಗಿ ಮನುಷ್ಯತ್ವ ಮಾನವೀಯತೆ ಮರೆಯಾಗಿ ಸರ್ವಾಧಿಕಾರಿ ಮನೋಭಾವ ಕೆಲವೂ ಸಂಧರ್ಭದಲ್ಲಿ ಕಂಡುಬರುತ್ತಿದೆ ….ಇದು ಬದಲಾಗಲೆಬೇಕೂ…
°°°°°°°°°°°°°°°°°°°°°°°°°°°°°°°°°°
ನಿಮ್ಮಂತ ಸರಳ ದಿಟ್ಟ ನೇರ ವ್ಯಕ್ತಿಗಳು ಇವತ್ತಿನ ಸಮಾಜಕ್ಕೆ ತುಂಬಾ ಅವಶ್ಯ ಧನ್ಯವಾದಗಳು ಸರ್ ನಿಮ್ಮ್ ಸತ್ಕಾರ್ಯಗಳು ಹೀಗೆ ಮುಂದುವರಿಯಲಿ 🙏
°°°°°°°°°°°°°°°°°°°°°°°°°°°°°°°
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ, ಐ, ಡಿ, ಹಳ್ಳಿ ಹೋಬಳಿ, ತಿಪ್ಪಾಪುರ ಗ್ರಾಮದಲ್ಲಿ ಒಂದು ದಿನ ಒಂದು ಕೆಲಸ ಮಾಡಿ ಒಂದು ರಾತ್ರಿ ಕಳೆಯಲು ಕೋರುತಿದ್ದು, ತಿಪ್ಪಾಪುರ ಗ್ರಾಮದ ಹೆಸರು ನಿಮ್ಮ ಸಾದನೆಯ ಸಾಲಿನ ಇತಿಹಾಸ ದ ಪುಟಗಳಲ್ಲಿ ಸೇರಲು ಬಯಸುತ್ತಿದ್ದೇವೆ, ದಯವಿಟ್ಟು ತಾವು ಅವಕಾಶ ಮಾಡಿಕೊಡಲು ತಮ್ಮಲ್ಲಿ ಮನವಿ,,
🌹🌹🌹🌹🌹🌹
°°°°°°°°°°°°°°°°°°°°°°°°°°°°°°°°
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….










