ವಿಜಯ ದರ್ಪಣ ನ್ಯೂಸ್…..
ಶಿರಡಿ ಶ್ರೀ ಸಾಯಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 16ನೇ ವರ್ಷದ ಗುರುಪೂರ್ಣಿಮ ಸಮಾರಂಭ

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಕಲ್ಯಾಣನಗರ ರಮ್ಯ ಪಾರ್ಕ್ ವೊ ಅಪಾರ್ಟ್ ಮೆಂಟ್ ನಲ್ಲಿ ಶಿರಡಿ ಶ್ರೀ ಸಾಯಿ ಸಂಸ್ಥಾನ ಟ್ರಸ್ಟ್ ಮತ್ತು ಎನ್.ಆರ್.ಐ.ಆಂಡ್ ಯು.ಆರ್.ಐ.ಗ್ರೂಪ್ ಡೆವಲಪರ್ಸ್ ಸಹಯೋಗ ಜುಲೈ 16ನೇ ವರ್ಷದ ಗುರುಪೂರ್ಣಿಮ ಸಮಾರಂಭ ಮತ್ತು ಶೋಭಯಾತ್ರೆ.
ಗೋವಿಂದರಾಜನಗರ, ಕಲ್ಯಾಣನಗರ ಶಿರಡಿ ಶ್ರೀ ಸಾಯಿ ಸಂಸ್ಥಾನ ಟ್ರಸ್ಟ್ ವತಿಯಿಂದ 16ನೇ ವರ್ಷದ ಗುರುಪೂರ್ಣಿಮ ಸಮಾರಂಭ ಮತ್ತು ಭವ್ಯ ಶೋಭಯಾತ್ರೆ.ಟ್ರಸ್ಟ್ ಅಧ್ಯಕ್ಷ ಗೋಕುಲ್ ಕೃಷ್ಣಸಿಂಗ್, ಶೋಭಾ ಸಿಂಗ್ ಶಂಕರಕುಮಾರ್ ಸಿಂಗ್
ಪ್ರೀತಿ ಸಿಂಗ್,ನಿರ್ಮಲಾ ದಿನೇಶ್ ಪ್ರಧಾನ ಕಾರ್ಯದರ್ಶಿ ನಿರ್ದೇಶಕ ವೇಣುಗೋಪಾಲ್, ಮಧುಗೋಪಾಲ್ ರವರು ನೂರಾರು ಸಾಯಿ ಭಕ್ತಾಧಿಗಳು ಭಾಗವಹಿಸಿದ್ದರು.
ಶ್ರೀ ಶಿರಡಿ ಸಾಯಿ ಸಂಸ್ಥಾನ ವತಿಯಿಂದ 16ನೇ ವರ್ಷದ ಗುರುಪೂರ್ಣಿಮ ಸಮಾರಂಭ ಹಮ್ಮಿಕೊಳ್ಳಲಾಗಿದ್ದು. ಶಿರಡಿ ಸಾಯಿಬಾಬ ಅಭಿಷೇಕ, ವಿಶೇಷ ಪೂಜೆ, ಬೆಳ್ಳಿರಥದಲ್ಲಿ ಭವ್ಯ ಮೆರವಣಿಗೆ, ಭಜನೆ, ಸಂಗೀತ ಕಾರ್ಯಕ್ರಮ ಪ್ರಸಾದ ವಿನಿಯೋಗ.
ಶಿರಡಿ ಶ್ರೀ ಸಾಯಿ ಚಾರಿಟೇಬಲ್ ಟ್ರಸ್ಟ್ ಪ್ರತಿಯೊಬ್ಬ ಮನುಷ್ಯ, ಪ್ರಾಣಿಗಳಿಗೆ ಜೀವಿಸುವ ಹಕ್ಕು ಇದೆ. ಬಡವರಿಗೆ ಸಹಾಯ ಮಾಡಿದಾಗ ಜೀವನದಲ್ಲಿ ಅರ್ಥ ಸಿಗುತ್ತದೆ. ನಮ್ಮ ಸಂಸ್ಥೆಯ ವತಿಯಿಂದ ಪ್ರತಿ ಗುರುವಾರ ಆನಾಥಶ್ರಮ, ವೃದ್ದಾಶ್ರಮ ಆಹಾರ ವಿತರಣೆ ಮತ್ತು ಬಡವರಿಗೆ ಔಷಧಿ, ಬಟ್ಟೆ ಹಾಗೂ ದಿನಸಿ ಕಿಟ್ ವಿತರಿಸಾಗುತ್ತಿದೆ.

ಅನ್ನ, ಆಶ್ರಯ, ಶಿಕ್ಷಣ, ಬಟ್ಠೆ ನಾಲ್ಕು ಅಂಶಗಳು ಕುರಿತು ಯೋಜನೆ ರೂಪಿಸಿ ಬಡವರಿಗೆ ನಾಲ್ಕು ಯೋಜನೆಗಳು ತಲುಪಬೇಕು ಎಂದು ರಾಮನಗರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ತಲಕಾಡು, ನೆಲಮಂಗಲದಲ್ಲಿ ಜಾಗ ನಿಗದಿ ಮಾಡಿ ಅಲ್ಲಿ ಮಕ್ಕಳು ಶಿಕ್ಷಣಕ್ಕೆ ಶಾಲೆ, ವೃದ್ದಾಶ್ರಮ, ಅನಾಥಶ್ರಮ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಮನುಷ್ಯ ದೇವರ ಮುಂದೆ ಸಮಾನರು, ನಮಗೆ ಕೊಟ್ಟ ಜೀವನವನ್ನು ಸಮಾಜದ ಅಭಿವೃದ್ದಿಗಾಗಿ ದುಡಿಯಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಗುರುಪೂರ್ಣಿಮ ಸಮಾರಂಭದಲ್ಲಿ ಶಿರಿಡಿ ಸಾಯಿಬಾಬ ಜೊತೆಯಲ್ಲಿ ಮಂತ್ರಾಲಯ ಗುರುಗಳಾದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಪೂಜೆ ಸಹ ನೇರವೆರಲಿದೆ ಎಂದು ಗೋಕುಲ್ ಕೃಷ್ಣಸಿಂಗ್ ರವರು ಹೇಳಿದರು.











