--Ads--

ಜುಲೈ 31 ರವರೆಗೆ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6ರಿಂದ ರಾತ್ರಿ 10.00 ಗಂಟೆಯವರೆಗೆ ಓಪನ್

On: July 29, 2026 3:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜುಲೈ 31 ರವರೆಗೆ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6ರಿಂದ ರಾತ್ರಿ 10.00 ಗಂಟೆಯವರೆಗೆ ಓಪನ್

ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜು.28:

ಜುಲೈ ತಿಂಗಳ ಅಂತ್ಯದೊಳಗೆ ಪಡಿತರ ಚೀಟಿದಾರರಿಗೆ ಪಡಿತರ ಅಕ್ಕಿ, ಧಾನ್ಯ ವಿತರಿಸಿ ವಿತರಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸ ಬೇಕಿರುವುದರಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಜುಲೈ 31 ರವರೆಗೆ ಪ್ರತಿ ದಿನ ಕಡ್ಡಾಯವಾಗಿ ಬೆಳಿಗ್ಗೆ 06.00 ಗಂಟೆಯಿಂದ ರಾತ್ರಿ 10.00 ತೆರೆದು ಪಡಿತರ ವಿತರಣೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚಿಸಿದೆ.

ನ್ಯಾಯಬೆಲೆ ಅಂಗಡಿಗಳು ಇಲಾಖೆ ಸೂಚನೆಯಂತೆ ಕಾರ್ಯ ನಿರ್ವಹಣಾ ಅವಧಿಯನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಲ್ಲಾ ಅರ್ಹ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ದಾನ್ಯವನ್ನು ಸಂಪೂರ್ಣವಾಗಿ ಹಾಗೂ ಕಡ್ಡಾಯವಾಗಿ ವಿತರಿಸುವುದನ್ನು ಖಚಿತ ಪಡಿಸಿಕೊಳ್ಳುವಂತೆ ತಮ್ಮ ವ್ಯಾಪ್ತಿಯ ಆಹಾರ ಶಿರಸ್ತೆದಾರರು/ ಆಹಾರ ನಿರೀಕ್ಷಕರಿಗೆ ಸೂಚಿಸಲಾಗಿದೆ.

ನ್ಯಾಯಬೆಲೆ ಅಂಗಡಿಗಳು ಸಮಯ ಪಾಲಿಸದೇ, ಪಡಿತರ ಪಡೆಯದೇ ಇರುವವವರು ತಾಲ್ಲೂಕಿನ ಆಹಾರ ಶಾಖೆಯ ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ: ದೇವನಹಳ್ಳಿ-9449269001, ದೊಡ್ಡಬಳ್ಳಾಪುರ-9980126359, ನೆಲಮಂಗಲ-9036434552, ಹೊಸಕೋಟೆ-9844029644 ಯನ್ನು ಸಂಪರ್ಕಿಸಬಹುದು.

ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶ-2016ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು, ಹಾಗೂ ಸಾರ್ವಜನಿಕರು ಪಡಿತರ ವಿತರಣೆ ವ್ಯವಸ್ಥೆಯು ಸುಗಮವಾಗಿ ನಡೆಯಲು ಸಹಕರಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

&&&&&&&&&&&&&&&&&&&&&&&&&&&

ಶ್ರೀ ಗುರುರಾಯರ ಲೇಖನಗಳಿಗೆ ಆಹ್ವಾನ

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು 2026ರ ಆಗಸ್ಟ್ 27 ರಿಂದ ಸೆಪ್ಟೆಂಬರ್ 2 ರವರೆಗೆ ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ಶ್ರೀ ರಾಯರ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಜರುಗಲಿದೆ.

ಸ್ವದೇಶೀ ಉದ್ಯಮವು ಕಳೆದ 20 ವರ್ಷಗಳಿಂದ ನಿರಂತರವಾಗಿ ಶ್ರೀ ಗುರುರಾಯರ ಹೆಸರಿನಲ್ಲಿ ಸ್ಮರಣ ಸಂಚಿಕೆ ಹೊರತರುತ್ತಿದ್ದು, ಪ್ರತೀ ವರ್ಷದಂತೆ, ಈ ವರ್ಷವೂ ಶ್ರೀ ಗುರುರಾಘವೇಂದ್ರ ಸ್ವಾಮಿಗಳವರ ಆರಾಧನಾ ನಿಮಿತ್ತ ಸ್ಮರಣ ಸಂಚಿಕೆಯನ್ನು ಹೊರತರುತ್ತಿದೆ. ಆಸಕ್ತ ಭಕ್ತರು ಲೇಖನಗಳನ್ನು ತಮಗಾದ ಪವಾಡದ ಅನುಭವವನ್ನು ಹಂಚಿಕೊಳ್ಳಲು ಅವಕಾಶವಿರುತ್ತದೆ. ಭಕ್ತಾದಿಗಳು ತಮ್ಮ ಲೇಖನ | ಕವನ / ರಾಯರ ಪವಾಡಗಳನ್ನು ವಾಟ್ಸ್ ಆಪ್, ಈ-ಮೇಲ್ ಅಥವಾ ಪತ್ರ ಮುಖೇನ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವುದು.

ಲೇಖನಗಳನ್ನು ಕಳುಹಿಸಲು ಅಂತಿಮ.                ದಿನಾಂಕ : 15-08-2026

ಪ್ರಕಾಶಕರು : ಸ್ವದೇಶೀ ಉದ್ಯಮ – ಶ್ರೀ ಗುರುಸಾರ್ವಭೌಮ – ಪ್ರಕಟಣಾ ವಿಭಾಗ ಬಿ.ಕೆ. ಪ್ರಸನ್ನ, ಸಂಪಾದಕ ಪ್ರಕಾಶಕ ವೀ ಕೇ ಪ್ರೋಸೆಸ್ # 554/2, 2ನೇ ಮಹಡಿ, ಉಡುಪಿ ಪಲಿಮಾರು ಮಠ ಸಮೀಪ, ಸಂಪಿಗೆ ರಸ್ತೆ, ಮಲ್ಲೇಶ್ವರ, ಬೆಂಗಳೂರು 560 003.

ಮೊಬೈಲ್ : 9448119247, 82177 54410.

ಇಮೇಲ್: veekayprocess@gmail.com

 

 

WhatsApp

Join Now

Telegram

Join Now

Instagram

Join Now