ವಿಜಯ ದರ್ಪಣ ನ್ಯೂಸ್….
ಸ್ವಪ್ನ ಬುಕ್ ಹೌಸ್ ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಕನ್ನಡದ 6 ಪುಸ್ತಕಗಳ ಬಿಡುಗಡೆ

ಬೆಂಗಳೂರು: ಗಾಂಧಿನಗರ ಸಪ್ನ ಬುಕ್ ಹೌಸ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕನ್ನಡದ 6 ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.
ಕನ್ನಡಪರ ಹೋರಾಟಗಾರರು, ಲೇಖಕರಾದ ರಾ.ನಂ.ಚಂದ್ರಶೇಖರ್, ಕವಿಗಳಾದ ಎಚ್.ದುಂಡಿರಾಜ್, ಲೇಖಕರಾದ ಶಶಿಧರ್ ಹಾಲಾಡಿ, ಸಪ್ನ ಬುಕ್ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ, ದೊಡ್ಡೆಗೌಡರವರು ರಾಷ್ಟ್ರಪಿತ ಮಹಾತ್ಮಗಾಂಧಿ ಭಾವಚಿತ್ರ ಮತ್ತು ಪುಸ್ತಕಗಳಿಗೆ ಪುಷ್ಪನಮನ ಸಲ್ಲಿಸಿ , 6 ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ರಾ.ನಂ.ಚಂದ್ರಶೇಖರ್ ರವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಪ್ನ ಬುಕ್ ಹೌಸ್ ಕನ್ನಡ ಪುಸ್ತಕಗಳ ಬಿಡುಗಡೆ ಮಾಡುವ ದಿನಾಚರಣೆ ಮಾಡುತ್ತಿದೆ. ಕನ್ನಡದ ದೊಡ್ಡ ಕೆಲಸವನ್ನು ಸಪ್ನ ಬುಕ್ ಹೌಸ್ ಮಾಡುತ್ತಿದೆ.
ಕರ್ನಾಟಕ ಸರ್ಕಾರ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗುವ ಪುಸ್ತಕಗಳನ್ನು ಕಳೆದ ಮೂರು ವರ್ಷಗಳಿಂದ ಖರೀದಿ ಮಾಡುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ, ಶಿಕ್ಷಣ, ಜ್ಞಾನ ಭಾಗ್ಯವನ್ನು ಸಾರ್ವಜನಿಕರಿಗೆ ಸರ್ಕಾರ ಕೊಡಬೇಕು. ಕನ್ನಡದ ವಾತವರಣ ನಿರ್ಮಾಣ ಮಾಡಬೇಕು. ಎಲ್ಲ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು.
ಎಚ್.ದುಂಡಿರಾಜ್ ರವರು ಮಾತನಾಡಿ ಸ್ವಾತಂತ್ರ್ಯ ದಿನದಂದು ಕನ್ನಡದ ಪುಸ್ತಕಗಳು ಲೋಕರ್ಪಣೆಯಾಗುತ್ತಿರುವುದು ಸಂತೋಷದಾಯಕ ಸಂಗತಿ. ಅಂದು ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು ನನ್ನಿಂದ ಇಂದು ಆರು ಪುಸ್ತಕಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ.
ಓದುಗರು ತುಂಬಾ ಜಾಣರಾಗಿದ್ದಾರೆ ಅವರು ಲೇಖಕರ ಹೆಸರು ನೋಡಿ ಪುಸ್ತಕ ತೆಗೆದುಕೊಳ್ಳುತ್ತಾರೆ. ಯುವ ಸಾಹಿತಿಯ ಮೊದಲ ಪುಸ್ತಕ ಪ್ರಕಟನೆಗೊಂಡರೆ ಬಹಳ ಋಷಿಯಾಗುತ್ತಾರೆ. ಪುಸ್ತಕಗಳನ್ನು ಸರ್ಕಾರ ಖರೀದಿಸಿ ಲೇಖಕರು, ಮುದ್ರಕರಿಗೆ ಪ್ರೋತ್ಸಾಹ ನೀಡಬೇಕು .
ಶಶಿಧರ್ ಹಾಲಾಡಿರವರು ಮಾತನಾಡಿ ಉತ್ತಮ ಪುಸ್ತಕಗಳಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.
ಇಂದಿನ ವರ್ಷ ಪ್ರಕಟನೆಯಾದ ಪುಸ್ತಕಗಳನ್ನು ಸರ್ಕಾರ ಖರೀದಿ ಮಾಡಿ ಪ್ರತಿ ಹಳ್ಳಿ, ನಗರ ಪ್ರದೇಶದ ಗ್ರಂಥಾಲಯಗಳಿಗೆ ತಲುಪಿಸಬೇಕು ಎಂದು ಹೇಳಿದರು.

ನಿತಿನ್ ಷಾರವರು ಮಾತನಾಡಿ ನಾವೆಲ್ಲರು ಒಂದು ಭಾರತೀಯರು. ಸಪ್ನ ಬುಕ್ ಹೌಸ್ ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವ ಸೇವೆ ಸಲ್ಲಿಸುತ್ತಿದೆ. 6 ಪುಸ್ತಕಗಳು ಇಂದು ಲೋಕರ್ಪಣೆಯಾಗುತ್ತಿದೆ.
ಕನ್ನಡ ಪುಸ್ತಕಗಳು ಅಮೂಲ್ಯರತ್ನಗಳು. ಓದಿದಷ್ಟು ಜ್ಞಾನ ವಿಕಾಸವಾಗುತ್ತದೆ ಎಂದು ಹೇಳಿದರು.
ಲೇಖಕರುಗಳಾದ ಸಿ.ಆರ್.ಚಂದ್ರಶೇಖರ್, ಸಿ.ಚಂದ್ರಪ್ಪ, ಎಂ.ಎಸ್.ಪ್ರಕಾಶ್, ಎಸ್.ಆರ್.ಆರಾಧ್ಯ, ಜೈಕುಮಾರ್, ಡಾ.ವಸಂತ್ ಕುಮಾರ್ ಪೆರ್ಲರವರು, ಹಾಸ್ಯಕವಿ ಎಂ.ಎಸ್.ನರಸಿಂಹಮೂರ್ತಿ, ಕರ್ನಾಟಕ ವಿಕಾಸರಂಗದ ವ.ಚ.ಚನ್ನೇಗೌಡರು ಕನ್ನಡಭಿಮಾನಿಗಳು ಪಾಲ್ಗೊಂಡಿದ್ದರು.









