ಜುಲೈ 9ರಂದು ನಯನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಶ್ರೀ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ.
ಬೆಂಗಳೂರು : ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೆ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,ಪತ್ರಕರ್ತ ಸಹೋದರರಿಗೆ ಅವರ ಪ್ರತಿಭಾವಂತಿಕೆಗೆ ಸಾಧನೆಗಾಗಿ ಅವರನ್ನ ಗುರುತಿಸಿ ಗೌರವಿಸುವ ಸಲುವಾಗಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಶ್ರೀ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
2005 – 2025 ರ ವರೆಗೆ ನಿರಂತರವಾಗಿ ಪ್ರತಿವರ್ಷ ಪತ್ರಕರ್ತರ ವೇದಿಕೆ ಬೆಂಗಳೂರು ಜುಲೈ 1 ರಂದೇ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಮಾಧ್ಯಮ ಮಿತ್ರರಿಗೆ ಮಾಧ್ಯಮ ಪ್ರಶಸ್ತಿಯನ್ನು ನಿರಂತರವಾಗಿ ಪ್ರಧಾನ ಮಾಡುತ್ತಾ ಬಂದಿದೆ.
ಈ ಬಾರಿ ಜುಲೈ 9 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಂಜೆ 05:30ಕ್ಕೆ ಪತ್ರಿಕಾ ದಿನಾಚರಣೆಯನ್ನು ನಡೆಯಲಿದೆ
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ನೆಡಸಲಿದೆ. ಮಾಧ್ಯಮ ಮಿತ್ರರಾದ ತಾವುಗಳು ಬನ್ನಿ, ನಿಮ್ಮವರನ್ನು ಕರೆತನ್ನಿ ಜೊತೆಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪತ್ರಕರ್ತರ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಬಾಬು ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9845338160