--Ads--

ರೈತರಿಗ ನೀರು ಕೊಡಿ, ರೈತರು ಎಲ್ಲವನ್ನೂ  ಸಮಾಜಕ್ಕೆ ಕೊಡಬಲ್ಲಷ್ಟು ಶಕ್ತರು : ಶ್ರೀ ಶ್ರೀ ಮಂಗಳಾನಂದನಾಥಸ್ವಾಮಿ

On: August 1, 2026 12:11 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

 ರೈತರಿಗ ನೀರು ಕೊಡಿ, ರೈತರು ಎಲ್ಲವನ್ನೂ  ಸಮಾಜಕ್ಕೆ ಕೊಡಬಲ್ಲಷ್ಟು ಶಕ್ತರು :
ಶ್ರೀ ಶ್ರೀ ಮಂಗಳಾನಂದನಾಥಸ್ವಾಮಿ

ಶಿಡ್ಲಘಟ್ಟ : ನಮ್ಮ ಮಠ, ಮಠದ ಶ್ರೀಗಳು ಅಂದಿನಿದ ಇಂದಿನವರೆಗೂ ನೀರಾವರಿ ಹೋರಾಟಗಳಿಗೆ ಬೆಂಬಲ ನೀಡುವ ಮೂಲಕ ರೈತ ಪರ ನಿಂತ ಪರಂಪರೆ ಇದೆ ,ಅಖಂಡ ಕೋಲಾರ ಜಿಲ್ಲೆಯಲ್ಲಿ ಆರಂಭವಾದ ಶಾಶ್ವತ ನೀರಾವರಿ ಹೋರಾಟ ಸೇರಿದಂತೆ ಎಲ್ಲ ರೀತಿಯ ಕೃಷಿ ಮತ್ತು ಕುಡಿಯುವ ನೀರಿನ ಹೋರಾಟಗಳಲ್ಲಿ ನಮ್ಮ ಶ್ರೀಗಳು ಭಾಗವಹಿಸಿದ್ದಾರೆ ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳಾನಂದನಾಥಸ್ವಾಮಿ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಶ್ರೀರಾಮ ಪ್ಯಾಲೇಸ್‌ನಲ್ಲಿ ನಡೆದ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ, ಮಹಿಳಾ ಸ್ವ ಸಹಾಯ ಸಂಘಗಳ ವಸ್ತು ಪ್ರದರ್ಶನ, ಮಾರಾಟ ಮೇಳ ಹಾಗೂ ವೀರಗಲ್ಲುಗಳ ಛಾಯಾ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ನಡೆದ ಕೃಷಿ ಮತ್ತು ಕುಡಿಯುವ ನೀರಿನ ಹೋರಾಟಕ್ಕೂ ನಮ್ಮ ಮಠಕ್ಕೂ ನೇರ ಸಂಬಂಧವಿದೆ ಮೂರ‍್ನಾಲ್ಕು ದಶಕಗಳ
ಹಿಂದೆಯೆ ಕೋಲಾರದಲ್ಲಿ ಆರಂಭವಾದ ನೀರಾವರಿ ಹೋರಾಟಕ್ಕೆ ನಮ್ಮ ಪೂಜ್ಯ ಬಾಲಗಂಗಾಧರ ಶ್ರೀಗಳು, ನಿರ್ಮಲಾನಂದಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ನಮ್ಮ ಮಠ, ಮಠದ ಶ್ರೀಗಳು ಅಂದಿನಿದ ಇಂದಿನವರೆಗೂ ನೀರಾವರಿ ಹೋರಾಟಗಳಿಗೆ ಬೆಂಬಲ ನೀಡುವ ಮೂಲಕ ರೈತ ಪರ ನಿಂತ ಪರಂಪರೆ ಇದೆ ,ಅಖಂಡ ಕೋಲಾರ ಜಿಲ್ಲೆಯಲ್ಲಿ ಆರಂಭವಾದ ಶಾಶ್ವತ ನೀರಾವರಿ ಹೋರಾಟ ಸೇರಿದಂತೆ ಎಲ್ಲ ರೀತಿಯ ಕೃಷಿ ಮತ್ತು ಕುಡಿಯುವ ನೀರಿನ ಹೋರಾಟಗಳಲ್ಲಿ ನಮ್ಮ ಶ್ರೀಗಳು ಭಾಗವಹಿಸಿದ್ದಾರೆ ಎಂದರು.

ಈ ಭಾಗದ ರೈತರಿಗೆ ಏನೂ ಕೊಡಬೇಡಿ, ಕೇವಲ ನೀರು ಕೊಡಿ, ಈ ಭಾಗದ ರೈತರು ಎಲ್ಲವನ್ನೂ ಈ ಸಮಾಜಕ್ಕೆ ಕೊಡಬಲ್ಲಷ್ಟು ಶಕ್ತರು, ಸ್ವಾಭಿಮಾನಿಗಳಾಗಿದ್ದಾರೆ
ಎಂದು ನುಡಿದರು.

ಪತ್ರಕರ್ತರು ಈ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ತೀಡವಲ್ಲವರಾಗಿದ್ದು ತಾವು ತಮ್ಮ ಕರ್ತವ್ಯವವನ್ನು ಜಾತಿ, ಧರ್ಮ, ಪಕ್ಷ ಮೀರಿ ಪ್ರಾಮಾಣಿಕತೆಯಿಂದ ವರದಿಗಳನ್ನು ಮಾಡಿ ವೃತ್ತಿ ಪಾವಿತ್ರತೆಯನ್ನು
ಕಾಪಾಡಿಕೊಂಡು ಹೋಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಬಿ.ಎನ್.ರವಿಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಡಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿವೆ ಸಮಾಜದ ಈ ಮೂರೂ ಆಧಾರ ಸ್ತಂಭಗಳೊಂದಿಗೆ ಮಾದ್ಯಮ ಕ್ಷೇತ್ರವು ನಾಲ್ಕನೇ ಆಧಾರಸ್ತಂಭದಂತೆ ಕಾರ್ಯನಿರ್ವಹಿಸುತ್ತಿದ್ದು ರಾಜಕಾರಣಿಗಳು, ಅಧಿಕಾರಿಗಳು ತಪ್ಪು ಮಾಡಲು ಭಯ
ಪಡುವುದಾದರೆ ಅದು ಮಾಧ್ಯಮದಿಂದ ಮಾತ್ರ ಎಂದರು.

ನಮ್ಮ ಸುತ್ತ ಮುತ್ತ ಅಥವಾ ಜಗತ್ತಿನ ಯಾವುದೆ ಭಾಗದಲ್ಲಿ ನಡೆಯುವ ಎಲ್ಲ ಘಟನೆಗಳನ್ನು ಪ್ರಾಮಾಣಿಕತೆಯಿಂದ ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ದೇಶದ ಇತಿಹಾಸವನ್ನು ಗಮನಿಸಿದಾಗ ಅಭಿವೃದ್ದಿ, ಬದಲಾವಣೆ, ಕ್ರಾಂತಿಯ ಹಿಂದೆ ಮಾಧ್ಯಮದ
ಪಾತ್ರ ಇರುವುದನ್ನು ಗಮನಿಸಬಹುದು ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿ
ಪ್ರೋ.ಬಿ.ಕೆ.ರವಿ ಪ್ರಾಸ್ತವಿಕವಾಗಿ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನ ಮರೆತು ಬದುಕಿದರೆ ಮುಂದಿನ ದಿನಗಳಲ್ಲಿ
ಸಮಾಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.

ಸಣ್ಣ ಮತ್ತು ಮಧ್ಯಮ ವರ್ಗದ ಪತ್ರಿಕೆಗಳು ದೊಡ್ಡ
ಪ್ರಮಾಣದಲ್ಲಿ ಮಾಧ್ಯಮಗಳ ಭರಾಟೆಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಹಳ ಕಷ್ಟವಿದೆ ಕನ್ನಡ ಪತ್ರಿಕೆಗಳನ್ನ ಹಾಗೂ ಕನ್ನಡ ಪತ್ರಿಕೋದ್ಯಮವನ್ನು ಬಲಿಷ್ಠ ಗೊಳಿಸುವಂತಹ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಕನ್ನಡ ನಾಡಿನ ಅಭ್ಯುದಯಕ್ಕೆ ಕನ್ನಡ ಪತ್ರಿಕೋದ್ಯಮ ತನ್ನದೇ ಆದಂತಹ ಕೊಡುಗೆಯನ್ನ ನೀಡಿದೆ, ಡಿ.ವಿ.ಗುಂಡಪ್ಪ ಅವರು ಕನ್ನಡ ಪತ್ರಿಕೋದ್ಯಮಕ್ಕೆ ಸಾಹಿತ್ಯಕ್ಕೆ ಅವರದೇ ಆದಂತಹ ಕೊಡುಗೆಯನ್ನ ನೀಡಿದ್ದಾರೆ ಎಂದರು.

ಸಮಾಜವು ವಾಣಿಜ್ಯೀಕರಣದ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿರುವ ಈ ಹೊತ್ತಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಮಾಧ್ಯಮ ಕ್ಷೇತ್ರದ್ದಾಗಿರುತ್ತದೆ ,ಪತ್ರಕರ್ತರು ತಮ್ಮ ಹಾಗೂ ತಮ್ಮ ಕುಟುಂಬದ ಸಮಸ್ಯೆಗಳ ನಡುವೆ ಸಾಮಾಜಿಕ ಹೊಣೆಗಾರಿಕೆ ಯಾವುದೇ ಸಂದರ್ಭದಲ್ಲೂ ಸಹಮರೆಯಬಾರದು.

ಸಮಾಜದ ಒಳಿತಿಗಾಗಿ ದುಡಿಯುವಂತಹ ಜೀವ ಇದ್ದರೆ ಅದು ಶಿಕ್ಷಕರು ಮತ್ತು ಪತ್ರಕರ್ತರು ,ಸಮಾಜವನ್ನು ತಿದ್ದಿ ನೀಡುವಂತಹ ಕೆಲಸ ಸಮಾಜದಲ್ಲಿ ಆಗುತ್ತಿರುವಂತಹ ಅಂಕುಡೊಂಕುಗಳನ್ನು ತಿದ್ದುವಂತಹ ಶಕ್ತಿ ಹಾಗೂ ಸಾಮಾಜಿಕ ಅಭಿಪ್ರಾಯಗಳನ್ನು ಕೂಡಿಸುವಂತಹ ಶಕ್ತಿ ಇರುವುದು ಪತ್ರಕರ್ತರಿಗೆ ಮಾತ್ರ. ದೇಶವನ್ನ ಭದ್ರಗೊಳಿಸುವಂತಹ ನೈತಿಕ ಜವಾಬ್ದಾರಿ ನಮ್ಮ ಪತ್ರಕರ್ತರ ಮೇಲಿದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ೬೭ ಯೂನಿಟ್ ರಕ್ತ ಸಂಗ್ರಹವಾಯಿತು,ಕರ್ನಾಟಕ ಇತಿಹಾಸ
ಅಕಾಡೆಮಿಯ ಡಾ.ಕೆ.ಧನಪಾಲ್ ಅವರ ತಂಡದಿಂದ ಶಾಸನ, ವೀರಗಲ್ಲುಗಳ ಛಾಯಾಚಿತ್ರ ಪ್ರದರ್ಶನ, ಮಹಿಳಾ ಸಂಘಗಳಿಂದ ವಸ್ತು ಪ್ರದರ್ಶನ, ಮಾರಾಟ ಮೇಳ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ
ಸಂಘದ ಅಧ್ಯಕ್ಷ ಎ.ಶಶಿಕುಮಾರ್ ವಹಿಸಿದ್ದರು,
ಈ ಸಂದರ್ಭದಲ್ಲಿ ಕೆಪಿಸಿಸಿ ಕೋ ಆರ್ಡಿನೇಟರ್
ರಾಜೀವ್‌ಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ,ಹುಜುಗೂರು ರಾಮಣ್ಣ, ತಹಸೀಲ್ದಾರ್ ಗ್ರೇಡ್-೨ ಕೆ.ಎನ್.ಎಂ.ಮಂಜುನಾಥ್, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೆಡ್ ಕ್ರಾಸ್ ಸಂಸ್ಥೆಯ ಎಂ.ಜಯರಾಂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಕಣಿತಹಳ್ಳಿ ಚಂದ್ರೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅದ್ಯಕ್ಷರುಗಳಾದ ಬಾಗೇಪಲ್ಲಿ ಕೃಷ್ಣಾರೆಡ್ಡಿ,ಚಿಂತಾಮಣಿ ಅರ್ಜನ್,ರೈತ ಸಂಘದ ಮುನಿಕೆಂಪಣ್ಣ‌ , ಪೂಲಕುಂಟಹಳ್ಳಿ ರಘುನಾಥ್ ರೆಡ್ಡಿ, ಟಿ.ಕೆ.ಅರುಣ್ ಕುಮಾರ್,ಮತ್ತಿತರರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮನೆಗಳ್ಳತನ ಆಂಧ್ರದ ಕುಖ್ಯಾತ ಕಳ್ಳ ಖೆಡ್ಡಾಕ್ಕೆ ,2 ಲಕ್ಷ 80 ಸಾವಿರ ರೂ.ಗಳ ಮೌಲ್ಯದ ಚಿನ್ನ-ಬೆಳ್ಳಿ ಜಪ್ತಿ!

ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮೊದಲ ಸ್ಥಾನಕ್ಕೇರಿಸುವ ಗುರಿಯನ್ನು ಶಿಕ್ಷಕರು ಸಾಕಾರಗೊಳಿಸಿ : ಶಾಸಕ ಬಿ.ಎನ್.ರವಿಕುಮಾ‌ರ್

ಮಳ್ಳೂರಿನ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರಕ್ಕೆ ಅಮೇರಿಕಾ ವಿಜ್ಞಾನಿಗಳು ಹಾಗು ಸಚಿವ ಕೆ.ಎಚ್.ಮುನಿಯಪ್ಪ ಭೇಟಿ

ಈಶ ಔಟ್‌ರೀಚ್‌ನ ‘ಹಸಿರು ಶಾಲೆ’ ಅಭಿಯಾನದ ವತಿಯಿಂದ ಜಿ.ಹೆಚ್.ಪಿ.ಎಸ್. ನಾಯನಹಳ್ಳಿಯಲ್ಲಿ ಹಸಿರು ಕ್ರಾಂತಿ

ಗಂಗನಹಳ್ಳಿ ಎಂ.ಪಿ.ಸಿ.ಎಸ್. ನೂತನ ಅಧ್ಯಕ್ಷರಾಗಿ ಜಿ.ಎಂ.ಶಿವಾನಂದ ಅವಿರೋಧ ಆಯ್ಕೆ

ಶಾಲಾ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳಬೇಡಿ : ಶಾಸಕ ಬಿ.ಎನ್‌.ರವಿಕುಮಾ‌ರ್