ವಿಜಯ ದರ್ಪಣ ನ್ಯೂಸ್….
ಸಾಹಿತ್ಯರತ್ನ, ಪುಸ್ತಕರತ್ನ, ಯುವ ಸಾಹಿತ್ಯರತ್ನ, ಮುದ್ರಣರತ್ನ ಪ್ರಶಸ್ತಿ ಪ್ರಧಾನ: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ
ಜ್ಞಾನ ದಾಸೋಹ, ಶೇಷ್ಠ ದಾಸೋಹ, ಪುಸ್ತಕದಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯ:ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ

ಗಾಂಧಿ ಭವನ: ಬಾಪು ಸಭಾಂಗಣದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಸಾಹಿತ್ಯರತ್ನ, ಪುಸ್ತಕ ರತ್ನ, ಯುವ ಸಾಹಿತ್ಯ ರತ್ನ, ಮುದ್ರಣ ರತ್ನ ಪ್ರಶಸ್ತಿ 2025ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭ.
ವಿಶ್ರಾಂತ ನ್ಯಾಯಮೂರ್ತಿ ನಾಡೋಜ ಶಿವರಾಜ ವಿ.ಪಾಟೀಲ್ , ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ , ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್.ದೊಡ್ಡೆಗೌಡರವರು, ದೀಪ ಬೆಳಗಿಸಿ ಉದ್ಘಾಟಿಸಿ, ಸನ್ಮಾನ ಕಾರ್ಯಕ್ರಮ ಜರುಗಿತು.
ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ ವಿ.ಪಾಟೀಲ್ ರವರು ಮಾತನಾಡಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಬರಹಗಾರರ ಪ್ರಕಾಶಕರ ಸಂಘವು ಯುವ ಬರಹಗಾರರಿಗೆ ಪ್ರೋತ್ಸಾಹ ಮತ್ತು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ಉತ್ತಮ ಕಾರ್ಯ ಮಾಡುತ್ತಿದೆ ಸಂಘವು ನಾನು ಸಹ 500ಪುಸ್ತಕಗಳನ್ನು ನೀಡುತ್ತೇನೆ.

ಬರಹಗಾರರು, ಮುದ್ರಕರಿಗೆ ಸಹಾಯ ಮಾಡುವುದು ಉತ್ತಮ ಕಾರ್ಯ. ಜ್ಞಾನ ದಾಸೋಹ ಶೇಷ್ಠ ದಾಸೋಹವಾಗಿದೆ. ಸಮಾಜಕ್ಕೆ ಬೇಕಾದ ಪುಸ್ತಕಗಳನ್ನು ಕೊಡುತ್ತಿದ್ದಾರೆ ಸರ್ಕಾರ ಇವರ ಸಹಾಯಕ್ಕೆ ನಿಲ್ಲಬೇಕು.
ಪ್ರಶಸ್ತಿಗಳು ಯಾಕೆ, ಯಾರಿಗೆ ಕೊಡಬೇಕು ಎಂಬುದು ಚಿಂತನೆ ಮಾಡಬೇಕು. ಅರ್ಜಿ ಹಾಕದೇ, ಶಿಫಾರಸ್ಸು ಮಾಡದೇ ಪ್ರಶಸ್ತಿಗಳು ತಾನಗೇ ಹುಡುಕಿಕೊಂಡು ಬರಬೇಕು.
ಪ್ರಶಸ್ತಿ ಕೊಡುವವರು, ಪಡೆಯುವರು ಗೌರವ , ಅಭಿಮಾನ ಇರಬೇಕು ಆಗ ಪ್ರಶಸ್ತಿ ಗೌರವ ಹೆಚ್ಚುತ್ತದೆ.
ಪ್ರಶಸ್ತಿ ಯಾಕೆ ಕೊಡಬೇಕು ಎಂದರೆ ಸಮಾಜದಲ್ಲಿ ಅರ್ಹರನ್ನ ಗುರುತಿಸಿ ಸನ್ಮಾನ ಮಾಡುವುದು ನಮ್ಮ ಕರ್ತವ್ಯ. ಪ್ರಶಸ್ತಿ ನೀಡುವುದು ಉತ್ತಮ ಸಂಪ್ರಾದಯ.
ಪ್ರಶಸ್ತಿ ಪಡೆದವರು ಜೀವನದಲ್ಲಿ ಸಾಧನೆ ಮಾಡಿರುತ್ತಾರೆ ಅವರನ್ನ ಪ್ರೋತ್ಸಾಹಿಸುವ ಕೆಲಸವಾಗಿದೆ.
ಪ್ರಶಸ್ತಿಯ ಸಂದೇಶವೆಂದರೆ ಇನ್ನು ಹೆಚ್ಚಿನ ಕೆಲಸ ಮಾಡಬೇಕು ಎಂಬುದು ಪ್ರೇರಣೆ ನೀಡುತ್ತದೆ.
ಪರಿಶ್ರಮ, ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡಬೇಕು. ಕೆಲವು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತದೆ, ಇನ್ನ ಕೆಲವು ಪ್ರಶಸ್ತಿ ಪಡೆದುಕೊಳ್ಳುವ ಪರಿಸ್ಥಿತಿ ಇದೆ.
ದೇಶದ ಯುವಕರು ಶಕ್ತಿ ಮೇಲೆ ನನಗೆ ನಂಬಿಕೆ ಇದೆ.
ಬರಹಗಾರ ಮನಸ್ಸು ಸಂಕಲ್ಪ, ಶೋಧನೆ, ಚಿಂತನೆ ಮಾಡಿ ಪುಸ್ತಕ ಬರೆಯುತ್ತಾನೆ ಎರಡನೇಯದು ಪ್ರಕಾಶಕ ಅದರ ಗುಣಮಟ್ಟ ನೋಡಿ ಪ್ರಕಾಶಕ ನಿರ್ಧಾರ ಮಾಡುತ್ತಾರೆ ನಂತರ ಮುದ್ರಣಕ್ಕೆ ಹೋಗುತ್ತಾದೆ ಅಲ್ಲಿ ಅಕ್ಷರ ದೋಷವಾಗದಂತೆ, ಪುಟವಿನ್ಯಾಸ ಮಾಡಿ ಅಂತಿ ಮುದ್ರಣಕ್ಕೆ ಹೋಗುತ್ತದೆ. ಬರಹಗಾರರ, ಪ್ರಕಾಶಕ, ಮುದ್ರಕ ಮೂವರು ಸಹಕಾರದಿಂದ ಒಂದು ಪುಸ್ತಕ ಹೊರ ಬರುತ್ತದೆ.
ವಚನಗಳು ಉಳಿಸಿ, ಪುಸ್ತಕ ರೂಪದಲ್ಲಿ ಬಂದ ನಂತರ ನಾವೆಲ್ಲರು ಓದುವಂತಾಯಿತು. ಭಾರತದಲ್ಲಿ ದೇಶದಲ್ಲಿ ಅಪೂರ್ವ ಜ್ಞಾನ ಬಂಡಾರವಿದೆ. ಪುಸ್ತಕದಲ್ಲಿ ಕ್ರಾಂತಿ ಮತ್ತು ಸಮಾಜ ಬದಲಾವಣೆ ಮಾಡುವ ಶಕ್ತಿಯಿದೆ.
ಪುಸ್ತಕಗಳಿಂದ ಸಮಾಜಕ್ಕೆ ಒಳ್ಳೆಯ ಕೆಲಸವಾಗುತ್ತಿದೆ. ಪುಸ್ತಕ ಓದುಗರ ಸಂಖ್ಯೆ ಹೆಚ್ಚಳವಾಗಬೇಕು ಎಂದು ಹೇಳಿದರು.
ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯರವರು ಮಾತನಾಡಿ ಮುದ್ರಕರು ಮತ್ತು ಪ್ರಕಾಶಕರು ಸಂಕಷ್ಟಗಳ ಎದುರಿಸುತ್ತಿದ್ದಾರೆ. ಗ್ರಂಥಾಲಯ ಕರ ಶೇಕಡ 6ರಷ್ಟು ಸಂಗ್ರಹವಾಗುತ್ತದೆ. ಪಾಲಿಕೆಯಲ್ಲಿ 1000ಸಾವಿರ ಕೋಟಿ ಸಂಗ್ರಹವಾಗುತ್ತದೆ ಅದರು ಸರ್ಕಾರ ಪಸ್ತಕಗಳನ್ನು ಖರೀದಿ ಮಾಡುತ್ತಿಲ್ಲ. ಕಳೆದ ಮೂರು ನಾಲ್ಕು ವರ್ಷಗಳಿಂದ ಪುಸ್ತಕ ಖರೀದಿಸಿಲ್ಲ. ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಸರ್ಕಾರಕ್ಕೆ ಬದ್ದತೆ ಇರಬೇಕು.
ಕ್ರಿಯ ಯೋಜನೆ ಅನುಮೋದನೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಪುರಸ್ಕಾರ ನೀಡುತ್ತಿಲ್ಲ. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಬಜೆಟ್ ಮುಂದುವರೆಸಲಾಯಿತು.
ಲೇಖಕರು, ಪ್ರಕಾಶಕರಿಗೆ ಅನುಕೂಲವಾಗಬೇಕು, ಓದುಗರು ಉತ್ತಮ ಪುಸ್ತಕಗಳು ಓದಬೇಕು ಎಂಬದು ನಮ್ಮ ಉದ್ದೇಶ ಪುಸ್ತಕ ನೀತಿ ಜಾರಿಗೆ ತರಬೇಕು.
ಸರ್ಕಾರ ವಿರುದ್ದ ಮಾತನಾಡುತ್ತೇನೆ ಎಂದು ಪ್ರಶಸ್ತಿಗಳು ನನಗೆ ಕೊಡುತ್ತಿಲ್ಲ ಪರವಾಗಿಲ್ಲ ನನಗೆ ಬೇಸರವಿಲ್ಲ ಎಂದು ಹೇಳಿದರು.
ಮಲ್ಲೇಪುರಂ ಜಿ.ವೆಂಕಟೇಶ್ ರವರು ಮಾತನಾಡಿ ಈ ಹಿಂದೆ 10ಕೋಟಿ ರೂಪಾಯಿ ಮೌಲ್ಯ ಪುಸ್ತಕ ಖರೀದಿಸಲಾಗಿತ್ತು ಅದರೆ ಇಂದು ಗ್ರಂಥಾಲಯ ಇಲಾಖೆಗೆ ರಾಹು ಬಡೆದಿದೆ.
ಮುದ್ರಣವಾಗುತ್ತಿಲ್ಲ ಪುಸ್ತಕಗಳು ಇದರಿಂದ ಓದುಗನಿಗೆ ಹೊಸ ಪುಸ್ತಕ ಸಿಗುತ್ತಿಲ್ಲ. ಮುದ್ರಣ ಉದ್ಯಮದಲ್ಲಿ ಇರುವವರು ಸಂಕಷ್ಟದಲ್ಲಿ ಇದ್ದಾರೆ. ರಾಜ್ಯ ಸರ್ಕಾರ ಕಣ್ಣು ತೆರದು ನೋಡಬೇಕು.
ಆರ್.ದೊಡ್ಡೆಗೌಡರವರು ಮಾತನಾಡಿ ಕನ್ನಡ ಪುಸ್ತಕ ಓದುಗರ ಸಂಖ್ಯೆ ಬಹಳ ವಿರಳವಾಗಿದೆ ಜೊತೆಯಲ್ಲಿ ಗ್ರಂಥಾಲಯ ಇಲಾಖೆ ಪುಸ್ತಕ ಖರೀದಿ ಮಾಡುತ್ತಿಲ್ಲ ಇದರಿಂದ ಲೇಖಕ, ಪ್ರಕಾಶಕ, ಮುದ್ರಕರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಕೊಡಲೇ ಗಮನಹರಿಸಿ ಪುಸ್ತಕ ಖರೀದಿ ಮಾಡಬೇಕು ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರು
1) ಎಂ.ಎಸ್.ಆಶಾದೇವಿ : ಸಾಹಿತ್ಯರತ್ನ
2) ಅನಂತ ಕುಣಿಗಲ್ಯು: ವ ಸಾಹಿತ್ಯ ರತ್ನ.
3) ಹೆಚ್.ಕೆ.ಲಕ್ಷ್ಮೀನಾರಾಯಣ ಅಡಿಗ : ಪುಸ್ತಕ ರತ್ನ
4) ಡಾ.ಕೆ.ಪಿ.ರಾವ್: ಮುದ್ರಣರತ್ನ
5)ಸಿ.ಆರ್.ಜನಾರ್ಧನ್ :ಮುದ್ರಣರತ್ನ
.









