--Ads--

ಶ್ರೀಆದಿಚುಂಚನಗಿರಿ ಮಹಿಳಾ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ

On: July 7, 2026 8:53 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರೀಆದಿಚುಂಚನಗಿರಿ ಮಹಿಳಾ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ

ಬೆಂಗಳೂರು: ವಿಜಯನಗರದ ಆದಿಚುಂಚನಗಿರಿ ಮಹಿಳಾ ಸಂಘ ರಜತ ಮಹೋತ್ಸವ ಆಚರಿಸಿರುವ ಸಂಸ್ಥೆಯಾಗಿದ್ದು 25 ವರ್ಷಗಳಿಂದ ಆನೇಕ ಸಾಮಾಜಿಕ ” -ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ ಬರುತಿದೆ.

ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, “ನಾಡಿನ ಅಭಿವೃದ್ಧಿಯಲ್ಲಿ, ದೂರದೃಷ್ಟಿಯ ಫಲವಾಗಿ ಕೆಂಪೇಗೌಡ ಅವರ ಆಶಯಗಳು ನೆರವೇರಿ ಅವರು ಹಾಕಿದ ಅಡಿಗಲ್ಲು ಇಂದು ವಿಶ್ವದ ಭೂಪಟದಲ್ಲಿ ಬೆಂಗಳೂರುಮೈಲುಗಲ್ಲಾಗಿದೆ.

ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ಕೃಷಿ, ಮಾರುಕಟ್ಟೆ ವ್ಯವಸಾಯ, ವ್ಯಾಪಾರ, ಉದ್ಯಮ.ಹೀಗೆ ಎಲ್ಲಾ ಕ್ಷೇತ್ರಗಳನ್ನು ತನ್ನ ದೂರ ದೃಷ್ಟಿಯಿಂದ ಅಭಿವೃದ್ಧಿಪಡಿಸಿ ಅದಕ್ಕೊಂದು ಸುಂದರವಾದ ಕಾಯಕಲ್ಪವನ್ನು ಮೂಡಿಸಿದ ಮಹಾಪ್ರಭು ನಾಡಪ್ರಭು ಕೆಂಪೇಗೌಡ ಎಂದು ಅಭಿಪ್ರಾಯಪಟ್ಟರು.

ದುಬೈನ ಖ್ಯಾತ ಸೌಂದರ್ಯ ತಜ್ಞೆ ಹಾಗೂ ವೈದ್ಯರಾದ ಡಾ. ರಶ್ಮಿ ರವರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ, ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಂಡು ಕೃಷ್ಣದೇವರಾಯರ ಆಡಳಿತದ ವೈಖರಿಯಂತೆ ತಾನೂ ಕನಸು ಕಂಡು ಅದನ್ನು ಸಾಕಾರಗೊಳಿಸಿದ ಪುಣ್ಯ ಪುರುಷ ನಮ್ಮ ನಾಡಿನ ಕೀರ್ತಿ ಕೆಂಪೇಗೌಡರು ಎಂದು ಬಣ್ಣಿಸಿದರು

`ಸಂಸ್ಥೆಯ ಅಧ್ಯಕ್ಷೆ ಡಾ. ಕರುಣ ರತ್ನ ವೀರ ಕೆಂಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆ ನಾಡಿನ ಎಲ್ಲಾ ಗಣ್ಯರ, ಸಾಹಿತಿಗಳ, ಸಭೆ , ಪಕ್ಷಿ ಪುರುಷರ ದಿನಾಚರಣೆಗಳನ್ನು ಮಾಡುವ ಮೂಲಕ ಮುಂದಿನ ಪೀಳಿಗೆಗೆ ಅವರ ಕೊಡುಗೆಗಳನ್ನು ಸ್ಮರಿಸುವಂತೆ ಮಾಡುವುದು ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಶ್ರೀಮತಿ ಚೂಡಾಮಣಿ, ಶ್ರೀಮತಿ ಹೇಮಾ ನಾಗೇಶ್, ಶ್ರೀಮತಿ ಇಂದಿರಾ ರಮೇಶ್ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.

 

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ  ಸಚಿವರಿಂದ  ನಮನಗಳು 

ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ KEO AI PC – 2026 ಲೋಕಾರ್ಪಣೆ

ವಿಕಾಸ ಸೌಧದಲ್ಲಿ  ನಡೆದ ಕೆ ಆರ್ ಎಸ್ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆ 

ಅಪೋಲೋ ಹಾಸ್ಪಿಟಲ್ಸ್‌ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಭಾರತದಿಂದ ಜಾಗತಿಕ ಆರೋಗ್ಯಸೇವೆಯಲ್ಲಿ ಪ್ರಥಮ ಉಪಕ್ರಮ ಅಪೋಲೋ ಹಾಸ್ಪಿಟಲ್ಸ್‌ ಗಳಾದ್ಯಂತ ಭಾನುವಾರದಂದೂ ವೈದ್ಯಕೀಯ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು ಮತ್ತು ನಿಗದಿತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವ ತನ್ನ ಮೊದಲ ಉಪಕ್ರಮ ಪ್ರಾರಂಭಿಸಿದೆ

ನಂಜನಗೂಡು ವಿಧಾನಸಭಾ ಕ್ಷೇತ್ರದ  ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ

ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ವಿಜೃಂಭಣೆಯ ನಾಗರ ಪಂಚಮಿಯ ಆಚರಣೆ