ವಿಜಯ ದರ್ಪಣ ನ್ಯೂಸ್….
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ : ಶ್ರೀ ಶ್ರೀ ಮಂಗಳಾನಂದನಾಥ ಸ್ವಾಮೀಜಿ

ಶಿಡ್ಲಘಟ್ಟ : ಮಗುವಿನ ಮೊದಲ ಪಾಠ ಶಾಲೆ ಮನೆಯೆ ಆಗಿದ್ದು ಹೆತ್ತವರು ಮಕ್ಕಳಿಗೆ ಮಾದರಿಯಾದ ಬದುಕನ್ನು ನಡೆಸಬೇಕು ಮಕ್ಕಳು ಕೇಳಿಸಿಕೊಂಡಿದ್ದನ್ನು, ಹೇಳಿಕೊಟ್ಟಿದ್ದನ್ನು ಕಲಿಯುವುದಕ್ಕಿಂತಲೂ ನೋಡಿದ್ದು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಆದಿಚುಂಚನಗಿರಿ ಮಹಾಪೀಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀ ಶ್ರೀ ಮಂಗಳನಾಥಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ನಡೆದ ಬಿಜಿಎಸ್ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ “ಜ್ಞಾನಾಂಕುರ ಅಕ್ಷರಾಭ್ಯಾಸ” ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಮಕ್ಕಳು ಶಾಲೆ ಕಾಲೇಜುಗಳಲ್ಲಿ ಕಲಿಯುವುದಕ್ಕಿಂತಲೂ ಮನೆಯಲ್ಲಿ, ಸುತ್ತ ಮುತ್ತಲ ಪರಿಸರದಲ್ಲಿ ಕಲಿಯುವುದೇ ಹೆಚ್ಚು ತಾಯಿ ಜತೆ ಕಳೆಯುವಷ್ಟು ಸಮಯ ಮತ್ತಾರ ಬಳಿಯೂ ಕಳೆಯುವುದಿಲ್ಲ,ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿಯರು ಮಕ್ಕಳ ಮದರೇ ಉತ್ತಮ ನಡೆ ನುಡಿ ಉತ್ತಮವಾಗಿರುವಂತೆ ನಡೆದುಕೊಳ್ಳಿ ಎಂದು ಹೇಳಿದರು.
ನಾವು ಪಡೆಯುವ ಶಿಕ್ಷಣ, ಜ್ಞಾನ, ಸಂಸ್ಕಾರವು
ನಮ್ಮ ಬದುಕನ್ನು ಸಮಾಜಮುಖಿಯಾಗಿ ಬೆಳೆಸುತ್ತದೆ ಸಮಾಜ ನಮ್ಮನ್ನು ಗೌರವಿಸುವ, ಪ್ರೀತಿ ಅಕ್ಕರೆಯಿಂದ ಕಾಣುವ ಸ್ಥಾನ ಮಾನವನ್ನು ನೀಡುತ್ತದೆ ಎಂದರು.
ತಹಶೀಲ್ದಾರ್ ಎನ್.ಗನಸಿಂಧು ಮಾತನಾಡಿ, ಮಗುವಿಗೆ ಉತ್ತಮ ಶಿಕ್ಷಣ ನೀಡಿ ಅವರ ಪ್ರತಿಭೆಗೆ ಅನುಗುಣವಾಗಿ ಅವಕಾಶಗಳನ್ನು ಒದಗಿಸಿಕೊಡುವ ಕೆಲಸ ಸರ್ಕಾರ, ಸಂಘ ಸಂಸ್ಥೆ ಮತ್ತು ಸಮುದಾಯದಿಂದ ಆಗಬೇಕಿದೆ ಎಂದರು.










