--Ads--

ಯಾವ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ,ಲೇಖನಿ ಸಾಮಗ್ರಿಗಳ ವಿತರಣೆ : ಶಾಸಕ ಬಿ‌.ಎನ್.ರವಿಕುಮಾ‌ರ್

On: July 11, 2026 4:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಯಾವ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದು
ಎಂಬ ಸದುದ್ದೇಶದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ,ಲೇಖನಿ ಸಾಮಗ್ರಿಗಳ ವಿತರಣೆ : ಶಾಸಕ ಬಿ‌.ಎನ್.ರವಿಕುಮಾ‌ರ್

ಶಿಡ್ಲಘಟ್ಟ : ಗ್ರಾಮೀಣ ಭಾಗದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರು ಸಹ ಹಣದ ಸಮಸ್ಯೆಯಿಂದ ಓದನ್ನು ಅರ್ಧದಲ್ಲೆ ನಿಲ್ಲಿಸುತ್ತಾರೆ ಇನ್ನಿತರೆ ಕಾರಣಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗುವುದಿಲ್ಲ ಅಂತಹ ಪರಿಸ್ಥಿತಿ ಕ್ಷೇತ್ರದ ಯಾವೊಬ್ಬ ವಿದ್ಯಾರ್ಥಿಗೂ ಬರಬಾರದು ಎನ್ನುವುದು ನನ್ನ ಆಶಯ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಾಸಕ ಬಿ.ಎನ್.ರವಿಕುಮಾರ್ ಅವರಿಂದ ನೋಟ್ ಬುಕ್ಸ್ ಲೇಖನಿ ಸಾಮಗ್ರಿಗಳು ಮತ್ತು ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಅವರು ನೀಡಿದ ಬ್ಯಾಗ್, ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದುವಂತ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದವರೆ ಹೆಚ್ಚಿರುತ್ತಾರೆ ಅವರು ಆರ್ಥಿಕ ಸಮಸ್ಯೆ ಕಾರಣಕ್ಕಾಗಿಯೆ ಅರ್ಧದಲ್ಲಿಯೆ ಓದುವುದನ್ನು ಬಿಡುವುದಾಗಲಿ, ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು.
ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಶಾಸಕರಿಗೆ ಬರುವ ವಾರ್ಷಿಕ ವೇತನದಲ್ಲಿ 32 ಲಕ್ಷ ರೂ.ಗಳನ್ನು ಖರ್ಚು ಮಾಡಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ನೋಟ್ ಬುಕ್ಸ್, ಲೇಖನಿ ಸಾಮಗ್ರಿಗಳನ್ನು ಕೊಡುತ್ತಿದ್ದೇನೆ ಎಂದರು.

ನಾನಷ್ಟೆ ಅಲ್ಲ ಸಾಕಷ್ಟು ಮಂದಿ ಉದ್ದಿಮೆದಾರರು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ಸಮಾಜ ಸೇವಕರನ್ನು ಸಂಪರ್ಕಿಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲು ಮನವಿ ಮಾಡಿದ್ದು ಸ್ಪಂಧಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಶಾಸಕ ಬಿ.ಎನ್.ರವಿಕುಮಾರ್ ಅವರಿಂದ ನೋಟ್ ಬುಕ್ಸ್ ,ಲೇಖನಿ ಸಾಮಗ್ರಿಗಳು ಹಾಗು ಸಮಾಜಸೇವಕ ರಘುನಾಥರೆಡ್ಡಿ ಅವರು ಬ್ಯಾಗ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಇಒ ಪಿ.ಸ್ವಾಮಿ, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ,ಸಮಾಜ ಸೇವಕ ಪೂಲಕುಂಟಹಳ್ಳಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ,ನರಸಿಂಹಮೂರ್ತಿ, ನಂದನವನಂ ಶ್ರೀರಾಮರೆಡ್ಡಿ, ಕುಂದಲಗುರ್ಕಿ ಚಂದ್ರು, ರಾಮದಾಸು ,ಎಸ್‌ಡಿಎಂಸಿ ಅಧ್ಯಕ್ಷೆ ಸಮ್ರೀಮ್ ತಾಜ್, ಎಲ್.ವಿ.ವೆಂಕಟರೆಡ್ಡಿ, ಮುಖ್ಯ ಶಿಕ್ಷಕ ಓಬಯ್ಯ, ಶ್ರೀರಾಮ್,ಮಂಜುನಾಥ್ ರೆಡ್ಡಿ ನಾರಾಯಣಸ್ವಾಮಿ, ಚಂದ್ರಶೇಖರ್ ರೆಡ್ಡಿ, ಅಶೋಕ್ ಬಾಬು ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now