--Ads--

ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸಮಿತಿ ರಚನೆ:  ಅಧ್ಯಕ್ಷರಾಗಿ ಜಹೀರುದ್ದೀನ್ ಆಯ್ಕೆ

On: August 1, 2026 3:22 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸಮಿತಿ ರಚನೆ:  ಅಧ್ಯಕ್ಷರಾಗಿ ಜಹೀರುದ್ದೀನ್ ಆಯ್ಕೆ

ದೇವನಹಳ್ಳಿ : ವಿಜಯಪುರದ ಕುಬ ಮಸೀದಿ ಮುಂಭಾಗದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ರಚಿಸಲಾಯಿತು.

ಇಂದು ನಡೆದ ಸಭೆಯಲ್ಲಿ ಜಹೀರುದ್ದೀನ್ ಅವರನ್ನು ಸರ್ವಾನುಮತದಿಂದ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಮಿತಿಯ ಇತರ ಸದಸ್ಯರಾಗಿ ನಿಜಾಮುದ್ದೀನ್, ಎಸ್.ಕೆ. ಆರಿಫ್, ಅಸ್ಲಂ ಪಾಷಾ, ಮಹಬೂಬ್ ಪಾಷಾ, ಶಬೀರ್, ರಕೀಬಾ ಫಿರ್ದೌಸ್, ಆಯಿಷಾ, ಜಬಿನ ಹಾಗೂ ರುಖ್ಸಾರ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಪೋಷಕರು ಮತ್ತು ಶಿಕ್ಷಕರ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಿತು.

ನೂತನ ಅಧ್ಯಕ್ಷ ಜಹೀರುದ್ದೀನ್ ಅವರು ಮಾತನಾಡಿ, ಸಮಿತಿಯ ಎಲ್ಲ ಸದಸ್ಯರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಲಾಗುವುದು ಎಂದು ಹೇಳಿದರು.

ಸಮಿತಿಯ ಎಲ್ಲಾ ಸದಸ್ಯರು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣದ ಉತ್ತೇಜನಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶಾಂತಕುಮಾರಿ, ಶಿಕ್ಷಕಿಯರಾದ ಫೈರೋಜಾ ಫಾತಿಮಾ, ತಹ್ಸೀನಾ, ಮಸೀಹಾ ನಜ್ಮ್ ಸಹರ್ ಸಬಾ, ಇತರ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now