--Ads--

ಮಹದೇವಪ್ಪಗೆ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣವಲ್ಲ: ಸಚಿವ ಡಾ ಎಸ್ ಯತೀಂದ್ರ ಸಿದ್ದರಾಮಯ್ಯ

On: August 9, 2026 4:11 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಮಹದೇವಪ್ಪಗೆ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣವಲ್ಲ: ಸಚಿವ ಡಾ ಎಸ್ ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಆಗಸ್ಟ್ 8 ಮಾಜಿ ಸಚಿವ ಮೈಸೂರು ಜಿಲ್ಲೆ ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಸಿ ಮಹದೇವಪ್ಪನವರಿಗೆ ಈ ಬಾರಿಯ ಸಚಿವ ಸಂಪುಟ ವಿಸ್ತರಣ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಸಿದ್ದರಾಮಯ್ಯನವರು ಕಾರಣವಲ್ಲ ಎಂದು ಸಚಿವ ಡಾ ಎಸ್ ಯತೀಂದ್ರ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದರು

ಅವರು ಮೈಸೂರು ಜಿಲ್ಲೆಯಲ್ಲಿ ಮಳೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ರೈತರು ಮತ್ತು ಬರ ಪರಿಸ್ಥಿತಿಯನ್ನು ಅವಲಂಬಿಸಲು ಜಿಲ್ಲಾ ಪ್ರವಾಸ ಕೈಗೊಂಡು ಮೊದಲ ಬಾರಿಗೆ ಮೈಸೂರಿನ ಶ್ರೀ ಉರಿಲಿಂಗಿ ಪೆದ್ದಿ ಮಠಕ್ಕೆ ಭೇಟಿ ನೀಡಿಮಠಾಧಿಶರಾದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಮೈಸೂರು ಜಿಲ್ಲೆಯ ಹಿರಿಯ ದಲಿತ ನಾಯಕರು ಆದ ಹಾಗೂ ಮಾಜಿ ಸಚಿವ ಡಾ ಎಸ್ ಸಿ ಮಹದೇವಪ್ಪನವರು ಅನುಭವ ರಾಜಕಾರಣಿಯಾಗಿದ್ದು ಅವರು ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವರಾಗಿ ಉತ್ತಮ ಕಾರ್ಯ ಸೇವೆಯನ್ನು ಹೆಸರಿಸಿದ್ದಾರೆ ಈ ಬಾರಿಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಲು ಬಯಸಿದ್ದರು ಅದೇ ರೀತಿ ಮಾಜಿ ಮುಖ್ಯಮಂತ್ರಿಗಳು ಸಿದ್ರಾಮಯ್ಯನವರು ಈ ಬಾರಿಯ ಸಚಿವ ಸಂಪುಟ ವಿಸ್ತರಣಾ ಸಮಯದಲ್ಲಿ ಪಕ್ಷದ ಹೈಕಮಾಂಡ್ಗೆ ಸಿದ್ದರಾಮಯ್ಯನವರು 14 ಶಾಸಕರುಗಳ ಹೆಸರುಗಳನ್ನು ಪಟ್ಟಿ ಮಾಡಿ ಕಳಿಸಿದ್ದರು ಎಂದು ನಾನು ಕೂಡ ಸಿದ್ದರಾಮಯ್ಯನವರ ಮಾತನಾಡುವಾಗ ತಿಳಿದುಕೊಂಡಿದ್ದ ಆದರೂ ಸಹ ಮಹದೇವಪ್ಪನವರಿಗೆ ಸಚಿವ ಸಂಪುಟ ದಲ್ಲಿ ಏಕೆ ಕೈತಪ್ಪಿತು ಎಂಬುದು ನಮಗೆ ಗೊತ್ತಿಲ್ಲ ಇದರಲ್ಲಿ ಸಿದ್ದರಾಮಯ್ಯನವರ ಪಾತ್ರ ಏನು ಇಲ್ಲ ಎಂದು ಸ್ಪಷ್ಟಪಡಿಸಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಬಾರಿ ಹೊಸಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡಬೇಕು ಎಂದು ಹೊಸ ಮುಖಗಳನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ ಅವರು ಯಾರು ಸಚಿವ ರಾಗಲು ಆಕಾಂಕ್ಷಿಗಳಾಗಿದ್ದರು ಯಾರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅವರು ಅಸಮಾಧಾನಗೊಂಡಿದ್ದಾರೆ ಎಂದು ಸುದ್ದಿಗಾರರು ಕಳೆದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಚಿವ ಸ್ಥಾನ ಸಿಕ್ಕದೆ ಇರುವ ಹಿನ್ನಲೆಯಲ್ಲಿ ಅಸಮಾಧಾನ ಗೊಳ್ಳುವುದು ಸಹಜ ಹಿರಿಯ ನಾಯಕರು ಹಾಗೂ ಪಕ್ಷದ ಹೈಕಮಾಂಡ್ ಅಸಾವಧಾನಗೊಂಡಿರುವ ಶಾಸಕರುಗಳನ್ನು ಸಮಾಧಾನಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಭರವಸೆ ಇದೆಯೆಂದು ತಿಳಿಸಿದರು

ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಮೈಸೂರು ಜಿಲ್ಲಾ ಹಿರಿಯ ಕಾಂಗ್ರೆಸ್ ಕಾರ್ಯದರ್ಶಿ ಸಕಳ್ಳಿ ಬಸವರಾಜು ದಲಿತ ಮುಖಂಡ ಬುಗುತಗಳ್ಳಿ ಮಣಿ ಕಿರಾಳು ಸಂತೋಷ್ ಮೆಲ್ಲಹಳ್ಳಿ ಅಭಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now