ವಿಜಯ ದರ್ಪಣ ನ್ಯೂಸ್….
ಅಭಿಮಾನಿಗಳಿಂದ ಶಾಸಕ ಬಿ.ಎನ್.ರವಿಕುಮಾರ್ ಅವರ ಹುಟ್ಟು ಹಬ್ಬ ಆಚರಣೆ

ಶಿಡ್ಲಘಟ್ಟ : ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯ ಆವರಣದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರ 58ನೇ ವರ್ಷದ ಹುಟ್ಟುಹಬ್ಬವನ್ನು ನಗರದಲ್ಲಿ ಸರಳವಾಗಿ ಆಚರಿಸಲಾಯಿತು.
ವಿಶೇಷಚೆತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು ವಿದ್ಯಾರ್ಥಿಗಳಿಗೆ ಹೊದಿಕೆ ಹಾಗೂ ಶೂಗಳನ್ನು ವಿತರಿಸಿ, ಅವರೊಂದಿಗೆ ಸಂತಸ ಹಂಚಿಕೊಂಡರು.
ಆನಂತರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಒಳರೋಗಿಗಳ ಆರೋಗ್ಯ ವಿಚಾರಿಸಿ, ಹಣ್ಣು-ಹಂಪಲುಗಳನ್ನು ವಿತರಿಸಿದರು.
ಕಳೆದೆರಡು ದಿನಗಳ ಹಿಂದೆ ಶಾಸಕ ಬಿ.ಎನ್. ರವಿಕುಮಾರ್ ಅವರು ವಿಕಲಚೇತನ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ಹಾಗೂ ಎಲೆಕ್ನಿಕ್ ವೀಲ್‌ಚೇರ್ ವಿತರಿಸಿದ್ದರು,ಪ್ರಸ್ತುತ ನಗರದಲ್ಲಿ ಶಾಸಕರ ಹೆಸರಿನ ಬಿಎನ್‌ಆರ್ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸಹ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ,ಹುಜುಗೂರು ರಾಮಣ್ಣ, ಮುಖಂಡರಾದ ತಾದೂರು ರಘು ,ಮುಗಿಲಡಿಪಿ ನಂಜಪ್ಪ, ಎಸ್.ಎಂ.ರಮೇಶ್, ನಾಗಮಂಗಲ ಶ್ರೀನಿವಾಸಗೌಡ, ಲಕ್ಷ್ಮೀನಾರಾಯಣ (ಲಚ್ಚಿ), ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಶಾಸಕರ ಅಭಿಮಾನಿಗಳು ಉಪಸ್ಥಿತರಿದ್ದರು.









