--Ads--

ಧಾರ್ಮಿಕ ಭಾವನೆಗಳಿಗೆ ಗೌರವ ನೀಡೋಣ

On: August 18, 2026 6:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಧಾರ್ಮಿಕ ಭಾವನೆಗಳಿಗೆ ಗೌರವ ನೀಡೋಣ

ಕೊಡಗು ಜನ ಅಭಿವೃದ್ಧಿ ಸಮಿತಿಯಿಂದ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಒಂದು ಸಣ್ಣ ಮನವಿ ಮಾಡಿದೆ.

ವ್ಯಾಪಾರದ ಜಾಹೀರಾತು ಪತ್ರಿಕೆಗಳು ಕರಪತ್ರಗಳು ಹಾಗೂ ಆಹ್ವಾನ ಪತ್ರಿಕೆಗಳಲ್ಲಿ ದೇವರುಗಳ ಚಿತ್ರಗಳನ್ನು ಮುದ್ರಿಸುವುದು ಸಾಮಾನ್ಯವಾಗಿದೆ. ಆದರೆ ಅಂತಹ ಪತ್ರಿಕೆಗಳನ್ನು ವಿತರಿಸಿದ ನಂತರ ಅವು ರಸ್ತೆಯಲ್ಲಿbಚರಂಡಿಯಲ್ಲಿ ಕಸದ ರಾಶಿಯಲ್ಲಿ ಅಥವಾ ಮನೆಗಳ ಕಾಂಪೌಂಡ್‌ಗಳಲ್ಲಿ ಬಿದ್ದಿರುವುದು ಕಂಡುಬರುತ್ತದೆ

ದೇವರು ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ ಪ್ರತಿಯೊಬ್ಬರ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಆದ್ದರಿಂದ ದೇವರುಗಳ ಚಿತ್ರಗಳನ್ನು ಒಳಗೊಂಡಿರುವ ಜಾಹೀರಾತು ಪತ್ರಿಕೆಗಳು ಹಾಗೂ ಆಹ್ವಾನ ಪತ್ರಿಕೆಗಳನ್ನು ವಿತರಿಸುವಾಗ ಅವುಗಳಿಗೆ ಸೂಕ್ತ ಗೌರವ ಸಿಗುವಂತೆ ನೋಡಿಕೊಳ್ಳಬೇಕೆಂದು ವ್ಯಾಪಾರಸ್ಥರಲ್ಲಿ ವಿನಮ್ರ ಮನವಿ ಮಾಡಿಕೊಳ್ಳುತ್ತೇವೆ .ಸಾಧ್ಯವಾದಷ್ಟು ಪತ್ರಿಕೆಗಳನ್ನು ಮನೆ ಯಜಮಾನರ ಕೈಗೆ ಗೌರವಪೂರ್ವಕವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು ನಂತರ ಅವು ಬಳಕೆಗೆ ಬಾರದ ಸಂದರ್ಭದಲ್ಲಿ ರಸ್ತೆಯಲ್ಲಿ ಅಥವಾ ಕಸದೊಂದಿಗೆ ಸೇರದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಸಾರ್ವಜನಿಕರಲ್ಲಿಯೂ ಅರಿವು ಮೂಡಿಸಬೇಕು.

ಮೇಲಿನ ಚಿತ್ರದಲ್ಲಿ ಕಾಣುತ್ತಿರುವುದು ಕುಶಾಲನಗರದ ಪೃಥ್ವಿ ಜ್ಯುವೆಲ್ಲರಿಯ ವತಿಯಿಂದ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಸ್ವರ್ಣ ಖರೀದಿಗೆ ಸಂಬಂಧಿಸಿದ ಆಹ್ವಾನ ಪತ್ರಿಕೆ. ಇದನ್ನು ಯಾರನ್ನೂ ದೂಷಿಸುವ ಅಥವಾ ಯಾವುದೇ ವ್ಯಾಪಾರ ಸಂಸ್ಥೆಯನ್ನು ಗುರಿಯಾಗಿಸುವ ಉದ್ದೇಶದಿಂದ ಹೇಳುತ್ತಿಲ್ಲ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂಬ ಸಾಮಾಜಿಕ ಕಾಳಜಿಯಿಂದ  ಮನವಿ ಮಾಡುತ್ತಿದ್ದೇವೆ

*ಒಂದು ಧರ್ಮ, ಒಂದು ದೇವರು, ಒಂದು ನಂಬಿಕೆ ಎಂದು ಹೇಳುವುದಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬರ ಧರ್ಮ ದೇವರು ಮತ್ತು ನಂಬಿಕೆಯನ್ನು ಗೌರವಿಸುವ ಮಾನವೀಯತೆ ನಮ್ಮಲ್ಲಿರಲಿ.ಧಾರ್ಮಿಕ ಭಾವನೆಗಳಿಗೆ ಗೌರವ ನೀಡೋಣ.,ಸ್ವಚ್ಛತೆ ಮತ್ತು ಸಂಸ್ಕೃತಿಯನ್ನು ಕಾಪಾಡೋಣ.,ನಮ್ಮ ನಂಬಿಕೆಗಳ ಗೌರವವನ್ನು ನಾವೇ ಉಳಿಸೋಣ

✍️ ಎಂಎಂ ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ

WhatsApp

Join Now

Telegram

Join Now

Instagram

Join Now