ವಿಜಯ ದರ್ಪಣ ನ್ಯೂಸ್…..
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಆಯೋಜನೆ

ಶಿಡ್ಲಘಟ್ಟ : VB-G RAM G ಯೋಜನೆ ಅನುಷ್ಠಾನ, ಕೂಲಿ ಮೊತ್ತ 370 ರಿಂದ 382 ರೂ.ಗಳಿಗೆ ಹೆಚ್ಚಿಸಿದ್ದು ವಾರ್ಷಿಕ ಮಾನವ ದಿನಗಳು 100 ರಿಂದ 125 ಗಳಿಗೆ ಹೆಚ್ಚಿಸಿದ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಯಿತು.
ತಾಲ್ಲೂಕಿನ ಅಬ್ಲೂಡು ಹಾಗು ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಕಾರ್ಡ್ ಮೇಳವನ್ನು ಮತ್ತು VB-G RAM-G ಯೋಜನೆ ಕುರಿತು ಮಾಹಿತಿ ಮತ್ತು ಕರಪತ್ರಗಳನ್ನು ನೀಡಿ ಯೋಜನೆಯ ಮಹತ್ವ ಬಗ್ಗೆ ತಿಳಿಸಲಾಯಿತು.
NMMS ಹಾಜರಾತಿ, ನೂತನ ಯೋಜನೆಯಡಿ 318 ಕಾಮಗಾರಿಗಳು ಮಾಡಲು ಅವಕಾಶದ ಬಗ್ಗೆ ಮಾಹಿತಿ ನೀಡಿ ನೀಡಲಾಯಿತು ಕೂಲಿ ಪಾವತಿ ವಿಳಂಬ, ವಿಬಿ-ಜಿ ರಾಮ್ ಜಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು, ದಿನದ ಕೂಲಿ ಮೊತ್ತ, ಹಾಜರಾತಿ ಕ್ರಮ, ಕೆಲಸದ ಅವಧಿ, ಹೊಸ ಗ್ಯಾರಂಟಿ ಕಾರ್ಡ್, ಕೂಲಿ ಪಾವತಿ ಕ್ರಮ ಸೇರಿದಂತೆ ಇತರೆ ಮಾಹಿತಿ ನೀಡಲಾಯಿತು.
ವಿಬಿ.ಜಿ.ರಾಮ್ ಜಿ’ ಯೋಜನೆಯಡಿ ಆಯೋಜಿಸಲಾಗಿದ್ದ ವಿಶೇಷ ಉದ್ಯೋಗ ಕಾರ್ಡ್ (ಜಾಬ್ ಕಾರ್ಡ್) ಮೇಳವನ್ನು ಹಮ್ಮಿಕೊಂಡಿದ್ದು, ಅಭಿಯಾನದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಮಸ್ಥರು ಯೋಜನೆಗೆ ಸಕ್ರಿಯವಾಗಿ ಸ್ಪಂದಿಸಿದ್ದಾರೆ,
ಹೊಸ ಜಾಬ್ ಕಾರ್ಡ್ಗಳಿಗಾಗಿ ಅರ್ಜಿಗಳು ಸಲ್ಲಿಕೆಗೆ ಮನವಿ ಮಾಡಿದ್ದು, ಕೂಲಿ ಕೆಲಸಕ್ಕೆ ಬೇಡಿಕೆ, ಕೂಲಿಕಾರರು ತಕ್ಷಣವೇ ಕೆಲಸ ಒದಗಿಸುವಂತೆ ನಿಯಮಾನುಸಾರ ಬೇಡಿಕೆ ಸಲ್ಲಿಸುವಂತೆ ತಿಳಿಸಲಾಯಿತು.
ಮೇಳದಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ಭದ್ರತೆ ಒದಗಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದ್ದು, ಗ್ರಾಮದ ಅರ್ಹ ಸಾರ್ವಜನಿಕರು ಹಾಗೂ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರ್ಕಾರದ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು
ನೆರೆದಿದ್ದವರಲ್ಲಿ ಮನವಿ ಮಾಡಲಾಯಿತು.
ಜಾಬ್ ಕಾರ್ಡ್ ಮೇಳದಲ್ಲಿ ಈಗಾಗಲೇ ಪಂಚಾಯಿತಿಯಲ್ಲಿ ಸಾಕಷ್ಟು ಜನರಿಗೆ ಹೊಸ ಜಾಬ್ ಕಾರ್ಡ್ ಗೆ ನೋಂದಣಿಯಾಗಿದ್ದು, ಕೆಲವರ ಕುಟುಂಬ ವಿಂಗಡಣೆ ಸೇರಿ ವಿವಿಧ ಕುಂದು-ಕೊರತೆಗಳನ್ನು ದೂರು ವಹಿಯಲ್ಲಿ ದಾಖಲಿಸಿ, ನಿಗದಿತ ವೇಳೆಗೆ ಪರಿಹಾರ ಮಾಡುವುದಾಗಿ ತಿಳಿಸಲಾಯಿತು.
ಗ್ರಾಮದ ಮನೆ ಮನೆ ಭೇಟಿ ಮಾಡಿ, ಕುರಿ ಶೆಡ್ ಮತ್ತು ಮೇಕೆ ಶೆಡ್ ಅವಶ್ಯಕತೆ ಇರುವ ಫಲಾನುಭವಿಗಳಿಗೆ ಸ್ಥಳದಲ್ಲೇ ಜಿಪಿಎಸ್ ಮಾಡಲಾಯಿತು.
ಈ ಸಂದರ್ಭದಲ್ಲಿ ಅಬ್ಲೂಡು ಗ್ರಾಮ ಪಂಚಾಯತಿ ಪಿಡಿಒ ಮಮತ, ಕಾರ್ಯದರ್ಶಿಗಳಾದ ಮಂಜುನಾಥ, ಶ್ರೀನಿವಾಸ, ತಾಲ್ಲೂಕು ಐಇಸಿ ಸಂಯೋಜಕ ಲೋಕೇಶ, ಇಂಜಿನಿಯರ್ ಗೌತಮ್ ರಾಜ್,ಮೇಘನಾ, ಬಿ.ಎಫ್.ಟಿ ಮುನೇಶ್, ಬಾಬು, ಕಾಯಕಮಿತ್ರ ಅನಿತಾ ಹಾಗು ಗ್ರಾಮ ಪಂಚಾಯಿತಿ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.










