ವಿಜಯ ದರ್ಪಣ ನ್ಯೂಸ್…..
ಬಂಡಿಕೊಡಿಗೇಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶನೈಶ್ಚರ ಲಕ್ಷದೀಪೋತ್ಸವ

ದೇವನಹಳ್ಳಿ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಬಂಡಿಕೊಡಿಗೇಹಳ್ಳಿಯಲ್ಲಿ ಶ್ರೀ ಶನೈಶ್ಚರ ಸ್ವಾಮಿಗೆ 2ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು. ಅನ್ನಸಂತರ್ಪಣೆ ನಡೆಯಿತು
ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರಮಹಾಸ್ವಾಮಿಗಳು ಮಾತನಾಡಿ, ಮನುಷ್ಯನಿಗೆ ನೆಮ್ಮದಿಯ ತಾಣವಾಗಿ ದೇವಾಲಯಗಳು ಇದೆ ಇಲ್ಲಿ ಬಂದು ದೇವರಿಗೆ ಭಕ್ತಿಯಿಂದ ನೆನೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ, ಶ್ರೀ ಶನೈಶ್ಚರ ಎಂದರೆ ಮನುಷ್ಯನಿಗೆ ಕಷ್ಟಕೊಡುವವನಲ್ಲಾ, ದುಷ್ಪರಿಗೆ ಶಿಕ್ಷಿಸಿ ಶಿಷ್ಟರಿಗೆ ರಕ್ಷಿಸುತ್ತಾನೆ.
ಮನುಷ್ಯ ಭೂಮಂಡಲವನ್ನು ಅಗೆದು ಬಗೆದು ತನಗೆ ಬೇಕಾದ್ದನ್ನು ಪಡೆಯುತ್ತಿದ್ದಾನೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ ಅದಕ್ಕೆ ಭೂಮಂಡಲ ಸಡಿಲವಾಗಿ ಭೂಕಂಪನ ಇನ್ನಿತರೆ ತೊಂದರೆಗಳಾಗುತ್ತಿವೆ ಮುಂದೆಯೂ ಇದೇ ರೀತಿ ಯಾದರೆ ಆಪತ್ತು ಕಾದಿದೆ ಎಂದು ಭವಿಷ್ಯ ನುಡಿದರು.
ಶಶೈಶ್ಚರ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯ ರಾಜಣ್ಣ ಮಾತನಾಡಿ ದೇವಾಲಯ ಪ್ರಾರಂಭವಾದಾಗಿನಿಂದ ಅನೇಕ ಭಕ್ತರು ಹೊರರಾಜ್ಯಗಳಿಂದ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಲಕ್ಷ ದಿಪೋತ್ಸವಕ್ಕೆ ಬೆಳಿಗ್ಗೆಯಿಂದಲೇ ಸಾವಿರಾರು ಜನ ಬಂದು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತರಲ್ಲಿ ಪ್ರಾರ್ಥಿಸುತ್ತಾರೆ.
ಬಂದಂತಹ ಎಲ್ಲಾ ಭಕ್ತರಿಗೆ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದರು.
ಇದೆ ವೇಳೆ ದೇವಾಲಯ ಅಭಿವೃದ್ಧಿ ಸಮಿತಿಯ ನಾಗರಾಜ್, ನಾರಾಯಣಸ್ವಾಮಿ, ರಾಜಣ್ಣ, ಕೃಷ್ಣಪ್ಪ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ದೇವರ ಆಶೀರ್ವಾದ ಪಡೆದರು.









