--Ads--

ಭದ್ರಕಾಳಿ ಶಕ್ತಿ ಪೀಠದಲ್ಲಿ ಭೀಮನ ಅಮಾವಾಸ್ಯೆ 2ನೇ ದಿನದ ವಿಶೇಷ ಪೂಜೆ

On: August 11, 2026 2:16 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಭದ್ರಕಾಳಿ ಶಕ್ತಿ ಪೀಠದಲ್ಲಿ ಭೀಮನ ಅಮಾವಾಸ್ಯೆ 2ನೇ ದಿನದ ವಿಶೇಷ ಪೂಜೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಪ್ಪನಹಳ್ಳಿ ಗ್ರಾಮದಲ್ಲಿ ಇರುವಂತಹ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಮೂರು ದಿನಗಳ ಕಾಲ ವಿಶೇಷ ಪೂಜೆ ಹಮ್ಮಿಕೊಂಡಿದ್ದು ಇದರ ಸಲುವಾಗಿ ಎರಡನೇ ದಿನದಂದು ವಿಶೇಷ ಪೂಜೆ ಸಲ್ಲಿಸಲಾಯಿತು ಪೂಜಾ ಕಾರ್ಯಕ್ರಮಗಳು ಕ್ಷೇತ್ರದ ಧರ್ಮಾಧಿಕಾರಿಗಳಾದ ನಾಗರಾಜ್ ಶಾಸ್ತ್ರಿಗಳ ನೇತ್ರತ್ವದಲ್ಲಿ ನೆರವೇರಿತು.

ಚಂಡಿ ಹೋಮ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿತ್ತು ಪೂಜಾ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಮುತ್ತೈದೆಯರು ಕಳಶಾವತ್ತು ವಿಶೇಷ ಪೂಜೆ ಸಲ್ಲಿಸಿದರು ನೆರೆದಿದ್ದ ಭಕ್ತ ಸಮೂಹಕ್ಕೆ ಪ್ರಸಾದ ವಿನಿಯೋಗ ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಭಕ್ತ ಸಮೂಹ ಆದರಿದ್ದರು.

&&&&&&&&&&&&&&&&&&&&&&&&&&&&&

ಬಾನಲ್ಲಿ ಹಕ್ಕಿಯಾಗಿ ಹಾರಾಡಿ

ನೀಲಿ ಸಾಗರದಲ್ಲಿ ಮೀನಂತೆ ಈಜಾಡಿ
ಮಿಂದೆದ್ದೆ ನಾನೂ ಎಲ್ಲರನ್ನು ಕೂಡಿ
ಕಾಡಿನಲಿ ವೀರವನಿತೆಯರಂತೆ
ಜಂಭದ ಚೀಲವನು ಹೆಗಲಿಗೇರಿಸಿ ನಿಂತೇ
ಗಿಡ ಗಂಟೆಗಳ ನಡುವಿನಲಿ ನಾ ಹೋದೆ ಸಿಂಹಿಣಿಯಂತೆ
ಮೇಘರಾಜನ ಘರ್ಜನೆಗೂ ಅಂಜದೆ
ಅವ ಚುಮುಕಿಸಿದ ಪನ್ನೀ ರಿನಲಿ ನಾ ತೊಯ್ದೆ
ಹಿತವಾಗಿ ನಕ್ಕು ನಡೆದೆ ನಾ ಮುಂದೆ
ಧರಿತ್ರಿ ಗಗನವನು ಚುಂಬಿಸುತ್ತಿರುವಾಗ
ನಾ ಹೀಗೆ ನಿಲ್ಲಲಿ ‘, ಅಸೂಯೆ ಆಗದೆ ನನಗಾಗ?
ಸಾಗರದರಸನ ಅಳೆಯಲಿ ನಲಿದಾಡಿದೆ ನಾನೀಗ
ನಾಚಿ ನೀರಾಗಿ ನೋಡಿದೆ ಒರೆಗಣ್ಣಿನಲಿ,
ನನಗನಿಸಿತು ನಾ ಸಾಗರಿಯೆ? ಇಲ್ಲಾ ವಸುಂಧರೆಯ ಮಗಳೇ?
ಸಂತಸವ ಹತ್ತಿಕ್ಕಲಾರದೆ ಹೇಳಿಯೇ ಬಿಟ್ಟೆ,ನಾ ನಿನ್ನ ಪೀಳಿಗೆಯೇ.

ಕವನ ರಚನೆ: ಯಶೋಧ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ದಿನಾಂಕ: 17-07-2026 ಶುಕ್ರವಾರ *ದಕ್ಷಿಣಾಯಣ ಪುಣ್ಯಕಾಲ* : ಸೂರ್ಯನು ನಾಳೆ ಬೆಳಗ್ಗೆ 11.45ಕ್ಕೆ ಮಘಾ ನಕ್ಷತ್ರದಲ್ಲಿ ಕರ್ಕಾಟಕರಾಶಿ ಪ್ರವೇಶ

ಛಲ ಬಿಡದ ಲಕ್ಷ್ಮವ್ವ: 116ರ ಹರೆಯದಲ್ಲೂ ಅಲಿಪಿರಿ ಮಾರ್ಗದ 3,550 ಮೆಟ್ಟಿಲು ಹತ್ತಿ ತಿರುಮಲ ತಲುಪಿದ ಕರ್ನಾಟಕದ ಶತಾಯುಷಿ!

ಚೌಡಪ್ಪನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ಗಂಗಾದೇವಿ ದೇವಾಲಯದ ಅಭಿವೃದ್ಧಿಗೆ  ಧನಸಹಾಯ  ಮಾಡಿದ  ಶ್ರೀ ನಿಸರ್ಗ ನಾರಾಯಣಸ್ವಾಮಿ 

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ  ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಬಿ ಬಸವರಾಜು 

ಶ್ರೀಸೋಮೇಶ್ವರಸ್ವಾಮಿ ಜೀರ್ಣೋದ್ದಾರ ಮತ್ತು ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಶ್ರೀಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ, ಮಂಡಲಪೂಜೆ