ವಿಜಯ ದರ್ಪಣ ನ್ಯೂಸ್…..
ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಪೌಷ್ಟಿಕ ಆಹಾರ ವಿತರಣೆಗೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ

ಬೆಂ.ಗ್ರಾ ಜಿಲ್ಲೆ ಸೆ.09(ಕ.ವಾ):-
ದೇವನಹಳ್ಳಿ ತಾಲೂಕಿನ ವಿಜಯಪುರದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಬಾಲಕರ ಶಾಲೆಯಲ್ಲಿ ವೋಲ್ವೋ ಗ್ರೂಪ್ CSR ಟ್ರಸ್ಟ್ ಇಂಡಿಯಾ ಸಹಭಾಗಿತ್ವದಲ್ಲಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ನ ‘ಅನ್ನಪೂರ್ಣ ಬೆಳಗಿನ ಪೌಷ್ಟಿಕ ಆಹಾರ ಕಾರ್ಯಕ್ರಮ’ಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ ನೀಡಿದರು.
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ, ಅಪೌಷ್ಟಿಕತೆ ನಿವಾರಣೆಗೆ ರಾಗಿ ಮಾಲ್ಟ್ ಉತ್ತಮ ಆಹಾರ, ವಿದ್ಯಾರ್ಥಿಗಳು ಸಹಕಾರಿಯಾಗಲಿದೆ.
ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರ ತಾಲೂಕು ಈ ಸಂಸ್ಥೆ ವತಿಯಿಂದ 22.02.2024 ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೆನೆ ಬರಿತಾ ಬಿಸಿ ಹಾಲಿನೊಂದಿಗೆ ಐದು ಗ್ರಾಂ ನಷ್ಟು ರಾಗಿ ಹೆಲ್ತ್ ಮಿಕ್ಸ್ ಅನ್ನು ಬೆರೆಸಿ ಪ್ರತಿ ವಿದ್ಯಾರ್ಥಿಗೆ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದಿನಿಂದ ವೋಲ್ವೋ ಸಂಸ್ಥೆ ಸಹಯೋಗದಲ್ಲಿ ವಿತರಿಸಲಾಗುವುದು ಎಂದರು.
ರಾಗಿ ಮಾಲ್ಟ್ ಪಡೆಯುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಸಂಖ್ಯೆ
ದೇವನಹಳ್ಳಿ-12333
ಹೊಸಕೋಟೆ-15410
ನೆಲಮಂಗಲ-15184
ದೊಡ್ಡಬಳ್ಳಾಪುರ-16966
ಒಟ್ಟು-59794 ಮಕ್ಕಳು.
ಸ್ವಚ್ಛ ಭಾರತ ಅಭಿಯಾನದ ನಿಧಿಯಡಿ ಕಸ ಸಂಗ್ರಹಿಸುವ ಟಿಪ್ಪರ್ ವಾಹನಕ್ಕೆ ಚಾಲನೆ
ವಿಜಯಪುರ ಪಟ್ಟಣದ ಪುರಸಭೆ ಆವರಣದಲ್ಲಿ ಸ್ವಚ್ಛ ಭಾರತ ಅಭಿಯಾನದ ನಿಧಿಯಡಿ ಕಸ ಸಂಗ್ರಹಿಸುವ ಟಿಪ್ಪರ್ ವಾಹನಕ್ಕೆ ಚಾಲನೆ ನೀಡಿದರು. ವಿಜಯಪುರ ಪುರಸಭೆಯ ವ್ಯಾಪ್ತಿಯ ವಾರ್ಡ್ ನಂ. 20ರಲ್ಲಿ Volvo Group ಸಂಸ್ಥೆಯ CSR ಅನುದಾನದಡಿ ನಿರ್ಮಿಸಲಾಗಿರುವ ಸ್ವಚ್ಛ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ, ಸಿಇಒ ಡಾ ವಾಸಂತಿ ಅಮರ್, ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್, ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ, ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್, ಪುರಸಭಾ ಸದಸ್ಯ ವಿ ನಂದಕುಮಾರ್ , ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.











