--Ads--

ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಗಣೇಶೋತ್ಸವ ಆಚರಣೆಗೆ ತೀವ್ರ ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ

On: September 13, 2026 5:22 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಗಣೇಶೋತ್ಸವ ಆಚರಣೆಗೆ ತೀವ್ರ ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ

 

ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಗಣೇಶೋತ್ಸವ ಆಚರಣೆಗೆ ತೀವ್ರ ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಟಿ ನರಸೀಪುರ ದಲ್ಲಿ ಬಿಜೆಪಿ ಪಕ್ಷದ ಮುಖಂಡರು ಭಾರಿ ಪ್ರತಿಭಟನೆ ಮಾಡಿದರು.

ಮೈಸೂರು ಜಿಲ್ಲೆ ಟಿ ನರಸೀಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಧನಂಜಯ ರವರು ನಿನ್ನೆ ಗಣೇಶೋತ್ಸವ ಆಚರಿಸುವ ಕುರಿತು ಮುಖಂಡರುಗಳ ಸಭೆಯಲ್ಲಿ ಮಾತನಾಡುವಾಗ ಮಸೀದಿ ಬಳಿ ಗಣೇಶ ಮೆರವಣಿಗೆ ಪಟಾಕಿ ಹಚ್ಚುವುದು ಬೇಡ ಇದರಿಂದ ತೊಂದರೆಯಾಗುತ್ತದೆ ಶಾಂತಿಯುತವಾಗಿ ಮೆರವಣಿಗೆ ಮಾಡಿ ಗಣೇಶೋತ್ಸವವನ್ನು ಆಚರಿಸಿ ಒಂದು ವೇಳೆ ಅಲ್ಲೇ ಮೆರವಣಿಗೆ ಹೋಗುತ್ತೇವೆ ಎಂದರೆ ಇದರಿಂದ ಸಾರ್ವಜನಿಕ ತೊಂದ್ರೆ ಆಗುತ್ತದೆ ಎಂದು ಆ ರೀತಿ ಆಗುವುದು ಬೇಡ ಎಂದು ಸಭೆಯಲ್ಲಿ ತಿಳಿಸಿದರು.

ಇದರಿಂದ ಬಿಜೆಪಿ ಪಕ್ಷದವರು ಎಂದು ಕಾರ್ಯಕರ್ತರು ಸರ್ಕಲ್ ಇನ್ಸ್ಪೆಕ್ಟರ್ ಇಂದು ಕಾರ್ಯಕರ್ತರು ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿಸಿದ್ದಾರೆ ಎಂದು ಆರೋಪಿಸಿ ಇವರ ವಿರುದ್ಧ ಪೊಲೀಸ್ ಠಾಣೆಯ ಮುಂಭಾಗದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಂಸದ ಯದುವೀರ್ ಒಡೆಯರ್ ಪ್ರತಾಪ್ ಸಿಂಹ ರವರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿರುವ ಮುಖಂಡರುಗಳು ಸರ್ಕಾರ ಕೂಡಲೇ ಇವರನ್ನು ಅಮಾನತುಗೊಳಿಸುವಂತೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ , ಶಾಸಕ ಶ್ರೀವತ್ಸ , ಮೈಸೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸುಬ್ಬಣ್ಣ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ಅವರು ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು ಮತ್ತೊಂದೆಡೆ
ದಲಿತ ಸಂಘಟನೆಯ ಕೆಲವು ಮುಖಂಡರುಗಳು ಸರ್ಕಲ್ ಇನ್ಸ್ಪೆಕ್ಟರ್ ಪರವಾಗಿ ದುನಿಯೆತ್ತಿ ಧನಂಜಯ್ ಅವರು ಕಾನೂನುಸುವ ವ್ಯವಸ್ಥೆಯನ್ನು ಕಾಪಾಡ್ತಿದ್ದಾರೆ ಟಿ ನರಸೀಪುರ ಪಟ್ಟಣದಲ್ಲಿ ಯಾವುದೇ ಗಲಾಟೆ ಕೋಮು ಗಲಭೆ ನಡೆದಂತೆ ಮುಂಜಾಗ್ರತ ಕ್ರಮ ಕೈಗೊಳಿದ್ದಾರೆ ಸುಮ್ಮನೆ ಬಿಜೆಪಿಯವರು ರಾಜಕೀಯ ಲಾಭ ಪಡೆಯಲು ಹಾಗೂ ಟಿ ನರಸೀಪುರದಲ್ಲಿ ಕೋಮುಗಲಭೆ ಸೃಷ್ಟಿ ಮಾಡಲು ಪ್ರಚೋದನೆ ಮಾಡುತ್ತಿದ್ದಾರೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಇದೆ ವೇಳೆ ಮುಖಂಡರು ಬಿಜೆಪಿ ಪಕ್ಷದ ನಾಯಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮೈಸೂರಿನ ಪೌರಕಾರ್ಮಿಕ ಬೇಡಿಕೆಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದೆ. ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್

ಪಕ್ಷ ಸಂಘಟನೆಗೆ ಸಹಕಾರ ನೀಡಿ: ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಬಿ ಬಸವಣ್ಣ

ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಬಿ ಜೆ ವಿಜಯ್ ಕುಮಾರ್ ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ 

GFF 2026ರಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು DFS ಕಾರ್ಯದರ್ಶಿಯವರು ನವೀನ ಉಪಕ್ರಮಗಳನ್ನು ಅನಾವರಣ

ಕಾಲೇಜಿನ ಅಭಿವೃದ್ಧಿ ಕಾರ್ಯಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಗ್ರ ಸಮಾಲೋಚನೆ ಸಭೆ ನಡೆಸಿದ ಶಾಸಕ ದರ್ಶನ್ ಧ್ರುವನಾರಾಯಣ್ 

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ  ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಆನಂದ್ ಸಿ. ತಿರುಮಲ  ಆಯ್ಕೆ