ವಿಜಯ ದರ್ಪಣ ನ್ಯೂಸ್…..
ವಿಶ್ವ ಹೃದಯ ಆರೋಗ್ಯ ದಿನದ ಹಿನ್ನೆಲೆಯಲ್ಲಿ…
ಬೆಂಗಳೂರಿನ ಅಪೋಲೊ ಆಸ್ಪತ್ರೆಯಿಂದ ಆಟೊ ಚಾಲಕರ ಹೃದಯದ ಆರೋಗ್ಯ ಉಚಿತವಾಗಿ ಹೃದ್ರೋಗ ಪರೀಕ್ಷೆ

ಬೆಂಗಳೂರು, 28 ಸೆಪ್ಟೆಂಬರ್ 2026: ಯಾವುದೇ ಸ್ಪಷ್ಟ ರೋಗಲಕ್ಷಣಗಳನ್ನು ಹೊಂದಿಲ್ಲದೇ ಇದ್ದರೂ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಗುರುತಿಸಲು ನಿಯಮಿತ ಹೃದಯದ ಆರೋಗ್ಯ ತಪಾಸಣೆಗಳು ನೆರವಾಗುತ್ತವೆ. ಆದಾಗ್ಯೂ, ದೀರ್ಘ ಕೆಲಸದ ಅವಧಿ ಮತ್ತು ಪ್ರತಿನಿತ್ಯ ದುಡಿಯಬೇಕಾದ ಅನಿವಾರ್ಯತೆ ಹೊಂದಿರುವ ಆಟೋ ಚಾಲಕರಿಗೆ, ರೋಗತಡೆಯ ಆರೈಕೆ ಸಮಯ ದೊರೆಯುವುದಿಲ್ಲ. ಈ ಅಗತ್ಯವನ್ನು ಪೂರೈಸಲು, ‘ವಿಶ್ವ ಹೃದಯ ದಿನ’ದ ಅಂಗವಾಗಿ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯು ಆಟೋ ರಿಕ್ಷಾ ಚಾಲಕರ ಒಕ್ಕೂಟ (ಎ.ಆರ್.ಡಿ.ಯು.) ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು.
ಸಮುದಾಯ ಕೃತಜ್ಞತಾ ಯೋಜನೆಯಡಿ 100 ಆಟೋ ಚಾಲಕರಿಗೆ ರಕ್ತದೊತ್ತಡ, ರಕ್ತದ ಸಕ್ಕರೆ ಪ್ರಮಾಣ ತಪಾಸಣೆ, ಲಿಪಿಡ್ ಪ್ರೊಫೈಲ್, ಇಸಿಜಿ ಹಾಗೂ ಹೃದಯ ರೋಗ ತಜ್ಞರ ಸಮಾಲೋಚನಾ ಸೇವೆಯನ್ನು ಒದಗಿಸಲಾಯಿತು.
ಆರೋಗ್ಯವಾಗಿದ್ದೇವೆ ಎಂದರೆ ಎಂದರೆ ಹೃದಯ ಸಂಬಂಧಿ ಅಪಾಯಗಳಿಂದ ಸಂಪೂರ್ಣವಾಗಿ ಮುಕ್ತರಾಗಿದ್ದೇವೆ ಎಂದರ್ಥವಲ್ಲ ಎಂದು ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯ ಹೃದಯ ರೋಗ ತಜ್ಞರು ಪ್ರತಿಪಾದಿಸಿದರು. ಸುದೀರ್ಘ ಕೆಲಸದ ಅವಧಿಯಿಂದಾಗಿ ಆರೋಗ್ಯ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗದ ಆಟೋ ಚಾಲಕರಿಗೆ, ಈ ರೀತಿಯ ತಪಾಸಣೆಗಳು ಅಧಿಕ ರಕ್ತದೊತ್ತಡ ಮತ್ತು ಅಸಹಜ ಕೊಲೆಸ್ಟರಾಲ್ ನಂತಹ ಗುಪ್ತ ಅಪಾಯದ ಅಂಶಗಳನ್ನು ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವ ಮೊದಲೇ ಪತ್ತೆ ಹಚ್ಚಲು ನೆರವಾಗುತ್ತವೆ.
ಅಪೋಲೊ ಆಸ್ಪತ್ರೆಯ ಕರ್ನಾಟಕ ವಲಯದ ಸಿಇಒ ಅಕ್ಷಯ್ ಒಲೇಟಿ, “ಅಪೋಲೊ ಆಸ್ಪತ್ರೆಯಲ್ಲಿ, ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ರೋಗತಡೆಯ ಆರೋಗ್ಯಸೇವೆಯನ್ನು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಬದ್ಧರಾಗಿದ್ದೇವೆ. ಬೆಂಗಳೂರಿನ ದೈನಂದಿನ ಜೀವನದಲ್ಲಿ ಆಟೋ ಚಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ, ಮತ್ತು ಅವರ ಆರೋಗ್ಯವನ್ನು ರಕ್ಷಿಸುವುದು ಅವರ ಕೊಡುಗೆಯನ್ನು ಗೌರವಿಸುವ ಅರ್ಥಪೂರ್ಣ ಮಾರ್ಗವಾಗಿದೆ. ಎ.ಆರ್.ಡಿ.ಯು ಸಹಯೋಗದೊಂದಿಗೆ, ಅವರು ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಹಾಗೂ ಉತ್ತಮ ಹೃದಯ ಆರೋಗ್ಯಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ,” ಎಂದು ಹೇಳಿದರು.
ಬೆಂಗಳೂರಿನ ಆಟೋ ರಿಕ್ಷಾ ಚಾಲಕರ ಒಕ್ಕೂಟ (ನೋಂ)ದ ಅಧ್ಯಕ್ಷ ಸಿ. ಸುರೇಶ್ ಕುಮಾರ್, “ನಮ್ಮ ಅನೇಕ ಸದಸ್ಯರಿಗೆ, ಚಾಲನೆಯಿಂದ ವಿರಾಮ ತೆಗೆದುಕೊಳ್ಳುವುದೆಂದರೆ ಗಳಿಕೆಯನ್ನು ಕಳೆದುಕೊಂಡಂತೆ, ಹೀಗಾಗಿ ನಿಯಮಿತ ಆರೋಗ್ಯ ತಪಾಸಣೆಗಳು ಹೆಚ್ಚಾಗಿ ಮುಂದೂಡಲ್ಪಡುತ್ತವೆ. ಈ ಶಿಬಿರವು ಅವರಿಗೆ ತಮ್ಮ ಹೃದಯದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ವೈದ್ಯಕೀಯ ಮಾರ್ಗದರ್ಶನವನ್ನು ಪಡೆಯಲು ಅವಕಾಶವನ್ನು ನೀಡಿತು. ಅವರ ಅಗತ್ಯಗಳನ್ನು ಗುರುತಿಸಿದ್ದಕ್ಕಾಗಿ ನಾವು ಅಪೋಲೊ ಆಸ್ಪತ್ರೆಗೆ ಧನ್ಯವಾದ ಅರ್ಪಿಸುತ್ತೇವೆ” ಎಂದು ಹೇಳಿದರು.
ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಅಪೋಲೊ ಆಸ್ಪತ್ರೆಯ ಕರ್ನಾಟಕ ವಲಯದ ಸಿಇಒ ಅಕ್ಷಯ್ ಒಲೇಟಿ, ವೈದ್ಯಕೀಯ ತಜ್ಞರು ಹಾಗೂ ಬೆಂಗಳೂರಿನ ಆಟೋ ರಿಕ್ಷಾ ಚಾಲಕರ ಒಕ್ಕೂಟ (ನೋಂ)ದ ಅಧ್ಯಕ್ಷ ಸಿ. ಸುರೇಶ್ ಕುಮಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅಪೋಲೊ ಹಾಸ್ಪಿಟಲ್ಸ್ ಕುರಿತು:
ಡಾ. ಪ್ರತಾಪ್ ರೆಡ್ಡಿ ಅವರು 1983 ರಲ್ಲಿ ಚೆನ್ನೈನಲ್ಲಿ ಮೊದಲ ಆಸ್ಪತ್ರೆಯನ್ನು ಪ್ರಾರಂಭಿಸಿದಾಗ ಅಪೋಲೊ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು. ಇಂದು, ಅಪೋಲೊ 76 ಆಸ್ಪತ್ರೆಗಳಲ್ಲಿ 10,400 ಕ್ಕೂ ಹೆಚ್ಚು ಹಾಸಿಗೆಗಳು, 6,600 ಕ್ಕೂ ಹೆಚ್ಚು ಫಾರ್ಮಸಿಗಳು, 264 ಕ್ಲಿನಿಕ್‌ಗಳು, 2,182 ಡಯಾಗ್ನೊಸ್ಟಿಕ್ ಕೇಂದ್ರಗಳು ಮತ್ತು 800 ಕ್ಕೂ ಹೆಚ್ಚು ಟೆಲಿಮೆಡಿಸಿನ್ ಕೇಂದ್ರಗಳನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ಸಮಗ್ರ ಆರೋಗ್ಯ ಸೇವೆಯ ಸಂಸ್ಥೆಯಾಗಿದೆ. ಇದು 3,00,000 ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿಗಳು ಮತ್ತು 2,00,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ವಿಶ್ವದ ಮುಂಚೂಣಿಯ ಹೃದಯ ಆರೈಕೆ ಕೇಂದ್ರಗಳಲ್ಲಿ ಒಂದಾಗಿದೆ. ರೋಗಿಗಳಿಗೆ ವಿಶ್ವದ ಅತ್ಯುತ್ತಮ ಆರೈಕೆ ಸಿಗುವಂತೆ ಮಾಡಲು, ಅತ್ಯಾಧುನಿಕ ತಂತ್ರಜ್ಞಾನಗಳು, ಉಪಕರಣಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ತರಲು ಅಪೋಲೊ ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಸತತವಾಗಿ ಹೂಡಿಕೆ ಮಾಡುತ್ತಿದೆ. ಅಪೋಲೊ ಸಂಸ್ಥೆಯ 1,20,000 ಸಿಬ್ಬಂದಿ ವರ್ಗವು ಅತ್ಯುತ್ತಮ ಆರೈಕೆಯನ್ನು ಒದಗಿಸಲು ಮತ್ತು ಜಗತ್ತನ್ನು ಮತ್ತಷ್ಟು ಉತ್ತಮಗೊಳಿಸಲು ಬದ್ಧವಾಗಿದೆ.









