--Ads--

ವಿಶ್ವವಿಖ್ಯಾತ ಮೈಸೂರು ದಸರಾ-2026 ಉದ್ಘಾಟಿಸಲು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಆಹ್ವಾನ

On: October 6, 2026 4:05 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವಿಶ್ವವಿಖ್ಯಾತ ಮೈಸೂರು ದಸರಾ-2026 ಉದ್ಘಾಟಿಸಲು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಆಹ್ವಾನ

ಕೊಪ್ಪಳ ಅಕ್ಟೋಬರ್ ೦೪ : ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ದಸರಾ ಮಹೋತ್ಸವದ ವಿಶೇಷಾಧಿಕಾರಿಗಳಾದ ಲಕ್ಷ್ಮೀಕಾಂತ ರೆಡ್ಡಿ ಜಿ ಅವರು ಉತ್ಸವದ ಸ್ವಾಗತ ಸಮಿತಿಯೊಂದಿಗೆ ಅಕ್ಟೋಬರ್ ೪ ರಂದು ಕೊಪ್ಪಳದ ಗವಿಮಠಕ್ಕೆ ತೆರಳಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭೇಟಿ ಮಾಡಿ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಯಶಸ್ವಿಗೊಳಿಸುವಂತೆ ಗೌರವ ಪೂರ್ವಕವಾಗಿ ಆಹ್ವಾನ ಪತ್ರಿಕೆಯನ್ನು ನೀಡಿದರು.

ಮೈಸೂರಿನಿಂದ ಆಗಮಿಸಿದ ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವರ್ಣಿತ್ ನೇಗಿ ಅವರೊಂದಿಗೆ ಮಧ್ಯಾಹ್ನ ೨ ಗಂಟೆ ವೇಳೆಗೆ ಗವಿಮಠಕ್ಕೆ ಆಗಮಿಸಿದರು. ವಿಶ್ವವಿಖ್ಯಾತ ಮೈಸೂರು ದಸರಾ ೨೦೨೬ರ ಕಾರ್ಯಕ್ರಮದ ಉದ್ಘಾಟನೆ ಅಕ್ಟೋಬರ್ ೧೧ ರಂದು ನಡೆಯಲಿದೆ. ತಾವು ಕಾರ್ಯ ಕ್ರಮಕ್ಕೆ ಆಗಮಿಸಿ ದಸರಾ ಉತ್ಸವವನ್ನು ಉದ್ಘಾಟಿಸಬೇಕು ಎಂದು ದಸರಾ ಮಹೋ ತ್ಸವದ ಸ್ವಾಗತ ಸಮಿತಿಯಿಂದ ಆಹ್ವಾನ ಪತ್ರಿಕೆಯನ್ನು ನೀಡುತ್ತಿದ್ದೇವೆ ಎಂದು ಇದೆ ವೇಳೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಸದಸ್ಯ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಯುಕೇಶ ಕುಮಾರ, ಶ್ರೀ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಉಪ ಕಾರ್ಯದರ್ಶಿ ಎಂ ಬಸವರಾಜ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಫಲ ಪುಷ್ಪ ನೀಡಿ ಸನ್ಮಾನಿಸಿದರು.

ಪ್ರಸಾದ ವ್ಯವಸ್ಥೆ: ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಸಾದವನ್ನು ಸ್ವೀಕರಿಸಬೇಕು ಎಂದು ಶ್ರೀ ಗವಿಸಿದ್ದೇಶ್ವರ ಶ್ರೀಗಳು ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಸದಸ್ಯರಿಗೆ ಆಹ್ವಾನ ನೀಡಿದರು. ಜಿಲ್ಲಾಧಿಕಾರಿಗಳಾದ ಲಕ್ತಿಕಾಂತ ರೆಡ್ಡಿ ಜಿ. ಮೈಸೂರು ಜಿಪಂ ಸಿಇಓ ಯುಕೇಶ ಕುಮಾರ ಅವರು ಗವಿಮಠದ ಪ್ರಸಾದ ನಿಲಯಕ್ಕೆ ತೆರಳಿ ಕೊಪ್ಪಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಅವರೊಂದಿಗೆ ಗವಿಮಠದಲ್ಲಿ ಪ್ರಸಾದ ಸ್ವೀಕರಿಸಿದರು. ಪ್ರಸಾದ ಸೇವನೆ ಬಳಿಕ ಲಕ್ಷಿಕಾಂತ ರೆಡ್ಡಿ ಜಿ ಹಾಗೂ ಸಿಇಓ ಯುಕೇಶ ಕುಮಾರ ಅವರು ಗವಿಮಠದ ಬೆಟ್ಟ ಏರಿ ಕರ್ತೃ ಗದ್ದುಗೆಯ ದರ್ಶನ ಪಡೆದುಕೊಂಡರು.

ಜಿಲ್ಲಾಧಿಕಾರಿಗಳಿಂದ ಹರ್ಷ: ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಹಾಗೂ ಸ್ವಾಗತ ಸಮಿತಿಯ ಸದಸ್ಯರು ಗವಿಮಠದ ಹಸಿರು ಆವರಣ ಹಾಗೂ ಸ್ವಚ್ಛಂದ ಪರಿಸರವನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಗವಿಸಿದ್ದೇಶ್ವರ ಜಾತ್ರೆಯ ಜನಸಾಗರ ಮತ್ತು ಧಾರ್ಮಿಕ ಮಹತ್ವದಿಂದಾಗಿ ದಕ್ಷಿಣ ಭಾರತದ ಕುಂಬ ಮೇಳ ಎಂದೇ ಕರೆಯುವ ಗವಿಮಠದ ಜಾತ್ರೋತ್ಸವದ ಚಿತ್ರಾವಳಿಗಳನ್ನು ವೀಕ್ಷಿಸಿ ಸಂತಷ ವ್ಯಕ್ತಪಡಿಸಿದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ದವಸ-ಧಾನ್ಯ ಗಳೊಂದಿಗೆ ಜಾತ್ರೆಗೆ ಆಗಮಿಸಿ ವಿಶೇಷವಾಗಿ ನಡೆಯುವ ಗವಿಮಠದ ಜಾತ್ರೆಯ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿ  ಡಾ.ಸುರೇಶ ಇಟ್ನಾಳ ಅವರು ಮೈಸೂರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

WhatsApp

Join Now

Telegram

Join Now

Instagram

Join Now