--Ads--

ತಾವರೆಕೆರೆ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ 48ನೇ ದಿನದ ಮಂಡಲ ಪೂಜೆ

On: October 6, 2026 3:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ತಾವರೆಕೆರೆ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ 48ನೇ ದಿನದ ಮಂಡಲ ಪೂಜೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದ ಪುರಾಣ ಪ್ರಸಿದ್ಧ, ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಚೋಳರ ಕಾಲದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.

ಸುಮಾರು 48 ದಿನಗಳ ಹಿಂದೆ ದೇವಾಲಯದ ಪುನರ್‌ಪ್ರತಿಷ್ಠಾಪನೆ ನೆರವೇರಿದ್ದು, ಅಂದಿನಿಂದ ಪ್ರತಿನಿತ್ಯವೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮಸ್ಥರು ಹಾಗೂ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗಿತ್ತು.

ಮಂಡಲ ಪೂಜೆಯ ಕೊನೆಯ ದಿನವಾದ ಇಂದು ಶ್ರೀ ಚನ್ನಕೇಶವ ಸ್ವಾಮಿಗೆ ವಿಶೇಷ ಅಲಂಕಾರ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತರಿಗೆ ವಿಶೇಷವಾಗಿ ಹೋಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪೂಜಾ ಕಾರ್ಯಕ್ರಮದ ಸೇವಕರ್ತರಾದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಎಸ್. ರಾಜಶೇಖರ್ ಅವರು ಅನ್ನದಾಸೋಹದ ವ್ಯವಸ್ಥೆ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಂತರ ಮಾತನಾಡಿದ ಟಿ.ಎಸ್. ರಾಜಶೇಖರ್ ದೇವಾಲಯದ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ದೇವಾಲಯದ ಧಾರ್ಮಿಕ ಚಟುವಟಿಕೆಗಳನ್ನು ಮತ್ತಷ್ಟು ಮುಂದುವರಿಸುವ ಅಗತ್ಯವಿದೆ ಎಂದು ಹೇಳಿದರು.

ಮಂಡಲ ಪೂಜಾ ಕಾರ್ಯಕ್ರಮವು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಗ್ರಾಮಸ್ಥರು, ಭಕ್ತರು, ಪೂಜಾ ಕಾರ್ಯದಲ್ಲಿ ಭಾಗವಹಿಸಿದವರು ಹಾಗೂ ಅನ್ನದಾಸೋಹದ ಸೇವೆಯಲ್ಲಿ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷ ವಿ.ಎನ್ ನಾಗರಾಜ್, ಉಪಾಧ್ಯಕ್ಷ ಎಸ್ ನಾಗರಾಜ್, ಕಾರ್ಯದರ್ಶಿ ವಿಜಯಕುಮಾರ್, ಸದಸ್ಯರುಗಳಾದ ಬಸವ ಪ್ರಕಾಶ್, ಮುನಿಯಮ್ಮ ಮೇಲೂರಪ್ಪ, ಟಿ.ಕೆ ಶಂಕರ್, ಚಂದ್ರಶೇಖರ್ ಹಾಗೂ ದೇವಾಲಯದ ಪ್ರಧಾನ ಅರ್ಚಕರಾದ ಬಸವರಾಜ್ ಆರಾಧ್ಯ, ಸುನಿಲ್ ಶಾಸ್ತ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ, ಗುರುಬಸಪ್ಪ, ಮಾಜಿ ಅಧ್ಯಕ್ಷರಾದ ರವಿಕುಮಾರ್, ಸುಧಾಕರ್, ಗಂಗಾಪುರ ಮಂಜುನಾಥ್, ಜಗದೀಶ್ ಹಾಗೂ ಗ್ರಾಮಸ್ಥರು ಸ್ಥಳೀಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now