--Ads--

ಇವತ್ತಿನ ದಿನಮಾನಗಳಲ್ಲಿ ಪ್ರಶಸ್ತಿ, ಗೌರವಗಳು ಪಾರದರ್ಶಕವಾಗಿರಬೇಕು : ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ.

On: October 7, 2026 1:48 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಇವತ್ತಿನ ದಿನಮಾನಗಳಲ್ಲಿ ಪ್ರಶಸ್ತಿ, ಗೌರವಗಳು ಪಾರದರ್ಶಕವಾಗಿರಬೇಕು : ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ

ಬೆಂಗಳೂರು : ಯಾವುದೇ ಪ್ರಶಸ್ತಿಗಳು ಕೊಡು ಕೊಳ್ಳುವಿಕೆಯಲ್ಲಿ ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ ನೈಜ ಸಾಧಕರಿಗೆ ಸಲ್ಲಬೇಕು ಎಂದು ನಾಟಕಕಾರ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ( ರಿ), ಸಿದ್ಧನಹಳ್ಳಿ ಅವರು ನಗರದ ಶೇಷಾದ್ರಿಪುರಂ ಸನ್ಮಾನ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತಿ ರಾಂ.ಕೆ.ಹನುಮಂತಯ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

 

ರಾಜ್ಯದ ಮೂಲೆ ಮೂಲೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅರ್ಜಿ ಹಾಕಿ ಪ್ರಶಸ್ತಿ, ಗೌರವ ನೀಡುವ ಬದಲು ಸಾಧಕರನ್ನು ಗುರುತಿಸಿ ಕರೆಸಿ ಸನ್ಮಾನಿಸುತ್ತಿರುವ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದರು.
ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ, ಮತ್ತೆ ಮತ್ತೆ ಪ್ರಶಸ್ತಿಗಳಿಗೆ ತಡಕಾಡುವ, ಪ್ರಶಸ್ತಿ ಪಡೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.‌ಆದರೆ ಕೊಪ್ಪಳ ಜಿಲ್ಲೆಯ ಡಾ.ನಾಗರಾಜ್ ಹೀರಾ ಅವರ ‘ಚಿನ್ನದ ನಾಡಿನ ಶರಣರು'(ಶರಣರ ಚಿಂತನೆಗಳು), ಚಾಮರಾಜನಗರ ಜಿಲ್ಲೆಯ ದಿಲೀಪ್ ಎನ್.ಕೆ ಅವರ ‘ತಿತ್ತಿಬ್ವಾಸನ ಟೈಟಾನ್ ವಾಚು’ (ಕಥಾ ಸಂಕಲನ), ಹಾಸನ ಜಿಲ್ಲೆಯ ಶ್ರೀಮತಿ ಇಂದಿರಾ ನಾಡಿಗ್ ಅವರ ‘ಹಸಿಗನಸು’ಕಾದಂಬರಿ, ಚಿಕ್ಕಬಳ್ಳಾಪುರ ಜಿಲ್ಲೆಯ ‘ ಡಿ.ಎ.ಲಕ್ಷ್ಮೀನಾಥ್ ಅವರ’ ಹನಿ ಹನಿ ಕಾವ್ಯ’ ಸಂಕಲನ ಕೃತಿಗಳಿಗೆ ರಾಂ.ಕೆ.ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿ ಪ್ರದಾನ ಮಾಡುವ ಸಾರ್ಥಕತೆ ನನ್ನದಾಯಿಗಿರುವುದು ಬಹಳ ಸಂತೋಷವಾಯಿತು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ಅವರು ಸಮಾಜ ಸೇವಕ ಪಾನ್ಯಂ ನಟರಾಜ್ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಕವಯಿತ್ರಿ ಸುಮಾ ಸತೀಶ್, ಗಾಯಕ ಆನಂದ ಮಾದಲಗೆರೆ, ಅಭಿನವ ಪ್ರಕಾಶನದ ರವಿಕುಮಾರ್ ಅವರಿಗೆ ಪ್ರದಾನ ಮಾಡಿ ಮಾತನಾಡಿ 20 ನೇ ಶತಮಾನದ ಶಿಕ್ಷಣ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಬದುಕಿನ ಜೀವನ, ಬರವಣಿಗೆಯ ಪ್ರಾಮಾಣಿಕತೆ ಸದಾ ಸಮತೋಲನ ಇದ್ದಾಗ ಮಾತ್ರ ಬರೆದಂತೆ ಬದುಕುವುದು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ದತ್ತಿ ದಾನಿ ಹನುಮಂತಯ್ಯ ಅವರು ಸಿಸಿರಾ ಅವರಂತೆ ಎಲ್ಲರೂ ಕೆಲಸ ಮಾಡಲು ಸಾಧ್ಯವಿಲ್ಲ, ಗುಡಿ, ಜಾತಿ, ಮತ, ಪಂಥ ದಾಟಿ ಸಂಸ್ಥೆಯ ಧ್ಯೇಯದಂತೆ ಸಾಧಕರನ್ನು ಗುರುತಿಸಿ ಹಣ, ಫಲ,ಪಲಕ, ಶಾಲು, ನೀಡುವುದು ಈ ದತ್ತಿಯ ಉದ್ದೇಶ ನೆರವೇರಿದೆ ನನಗೆ ಬಹಳ ಸಂತೋಷವಾಗಿದೆ ಎಂದರು.

ಇದೇ ಸಂದರ್ಭದಲ್ಲಿ 78 ವರ್ಷ ತುಂಬಿದ ಸಂಭ್ರಮದಲ್ಲಿರುವ ಸಮಾಜ ಸೇವಕ, ಸಾಹಿತಿ ಶ್ರೀ ಪಾನ್ಯಂ ನಟರಾಜ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. , ಸಾಮಾಜಿಕ ಸೇವೆಯ ಸಿದ್ಧನಹಳ್ಳಿ ಚಿಕ್ಕತಿಮ್ಮಯ್ಯ, ಯುವ ಮುಖಂಡ ಪವನ್ ಕುಮಾರ್, ಕಥೆಗಾರ ಜಯಶಂಕರ್ ಪ್ರಕಾಶ್ ಅವರಿಗೆ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ)ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಲೇಖಕಿ ಶಾಂತಿ ವಾಸು, ಗಾಯಕಿ ಅಂಬುಜಾ ಬೀರೇಶ್, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನ ಇಂದಿರಾ ಕೃಷ್ಣಪ್ಪ, ಸಾಹಿತಿ ಕೆ.ಎಂ.ರೇವಣ್ಣ, ಬಸವಲಿಂಗ, ವಿಜಯ್ ಶಾಸ್ತ್ರಿ ಮಠ್, ಮುಂತಾದವರಿದ್ದರು.

WhatsApp

Join Now

Telegram

Join Now

Instagram

Join Now