ವಿಜಯ ದರ್ಪಣ ನ್ಯೂಸ್…..
ಗ್ರಾಮೀಣ ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

ತಾಂಡವಪುರ ಅಕ್ಟೋಬರ್ 7 ದಕ್ಷಿಣ ಕಾಶಿ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ದಿನಾಂಕ 9 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನೆರೆವೇರಿಸಲಿದ್ದು,
ಮುಖ್ಯ ಅತಿಥಿಗಳಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ಐತಿ ಚಂಡ ರಮೇಶ್ ಉತ್ತಪ್ಪ ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಕೆ ದೀಪಕ್ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ್ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯ ಹುಲ್ಲಹಳ್ಳಿ ಮೋಹನ್ ಹಾಗೂ ಪ್ರಶಸ್ತಿ ಪ್ರದಾನ ಮಾಡುವ ಸುತ್ತೂರು ಮಠದ ಜೆಎಸ್ಎಸ್ ವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್ ಮಹೇಶ್ ರವರು ಪ್ರಶಸ್ತಿ ಪುರಸ್ಕೃತ ಟಿ ಕೆ ಬಸವರಾಜ್ ಅವರಿಗೆ ಪ್ರಧಾನ ಮಾಡಲಿದ್ದು ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್ ಡಿ ರಂಗಸ್ವಾಮಿಯವರು ಅಧ್ಯಕ್ಷತೆ ವಹಿಸಲಿದ್ದು ಈ ಸಮಾರಂಭಕ್ಕೆ ತಾಲೂಕು ಪತ್ರಕರ್ತ ಸಂಘದ ಕಾರ್ಯಕಾರಿಣಿ ಸಮಿತಿಯ ಎಲ್ಲಾ ಸದಸ್ಯರು ಸಂಘದ ಸದಸ್ಯರುಗಳು ಪಾಲ್ಗೊಳ್ಳಲಿದ್ದು ಅಂದು
ಗ್ರಾಮೀಣ ಪತ್ರಕರ್ತ ಟಿ ಕೆ ಬಸವರಾಜ್ ರವರು ಈ ಪ್ರಶಸ್ತಿಗೆ ಭಾಜನರಾಗಿದ್ದು ಅವರಿಗೆ ಪ್ರಶಸ್ತಿ ಪ್ರದಾನ ನೆರವೇರಲಿದೆ.
ಟಿ ಕೆ ಬಸವರಾಜು ನಡೆದು ಬಂದ ಆದಿ ಸಾಗಿದ ಬದುಕು ಪ್ರಶಸ್ತಿ ಪಡೆಯಬೇಕೆಂಬ ಛಲ ಸುತ್ತೂರು ಶ್ರೀಗಳ ಮಾಧ್ಯಮ ಪ್ರಶಸ್ತಿಯನ್ನು ಪಡೆದುಕೊಳ್ಳಬೇಕು ಎಂಬ ನನ್ನ ಕನಸನ್ನು ನನಸು ಮಾಡಿದ ನಂಜನಗೂಡು ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ನಾನು ತುಂಬು ಹೃದಯದ ಧನ್ಯವಾದಗಳು ಅರ್ಪಿಸುವ ಮೂಲಕ ಸಂಘದ ಸದಸ್ಯರುಗಳಿಗೆ ಆಭಾರಿಯಾಗಿದ್ದೇನೆ
ನಾನು ಸುಮಾರು 18 ನೇ ವಯಸ್ಸಿಗೆ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡಿದ್ದೇನೆ ಇದಕ್ಕೆ ಪ್ರೇರಣೆಯಾದವರು ರೈತ ಸಂಘದ ಪ್ರೊಫೆಸರ್ ನಂಜುಂಡಸ್ವಾಮಿ ತಾಂಡವಪುರದ ರಾಮೇಗೌಡರು ಹಳ್ಳಿ ದಿಡ್ಡಿರಘುಪತಿ ನಾಯಕರು ಬುಕ್ಕ ಹಳ್ಳಿ ಬಸವರಾಜು ಅವರು ಮೈಸೂರಿನ ಅರಸುರವರು ನನಗೆ ಪ್ರೇರಣೆಯಾದರು ಅಂದು ರೈತರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ನ್ಯಾಯ ದೊರಕಿಸಿಕೊಡುವುದು ಸೇರಿದಂತೆ ಇನ್ನೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹೋರಾಟದ ಮೂಲಕ ಹಮ್ಮಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮಕಾಯಕವಾಗಿತ್ತು ನಂತರ ಹೋರಾಟವನ್ನು ಪತ್ರಿಕ ಮಾಧ್ಯಮಗಳ ಮೂಲಕ ಸಾರ್ವಜನಿಕ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಣೆ ಮಾಡಿ ಸರ್ಕಾರಿ ಅಧಿಕಾರಿಗಳ ಗಮನ ಸೆಳೆಯುವುದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಪತ್ರಿಕೆ ಮೂಲಕ ನ್ಯಾಯವನ್ನು ಸಿಗುವಂತೆ ಮಾಡುವುದು ನಂತರ ಸುಮಾರು 20 ವರ್ಷಗಳ ಹಿಂದೆ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದಾಗ ಅದನ್ನು ಖಂಡಿಸಿ ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾಗಿದ್ದ ರಾಜಶೇಖರ್ ಕೋಟಿ ಹಾಗೂ ಹಿರಿಯ ಪತ್ರಕರ್ತರಾದ ಚಂದ್ರಶೇಖರ್ ಕುಕ್ಕಿಕಟ್ಟೆ ಕೆಬಿ ಗಣಪತಿ ಅಂಶಿ ಪ್ರಸನ್ನ ಕುಮಾರ್ ರವರು ಈಗಿನ ಜಿಲ್ಲಾಧ್ಯಕ್ಷರಾದ ಕೆ ದೀಪಕ್ ರವರು ಕೆ ಶಿವಕುಮಾರ್ ರವರು ಬಾಲಕೃಷ್ಣರವರು ಈ ಪ್ರತಿಭಟನ ಮೆರವಣಿಗೆಯಲ್ಲಿ ಭಾಗವಹಿಸಿದರು ನಾನು ಕೂಡ ಚಳುವಳಿಯಲ್ಲಿ ಪಾಲ್ಗೊಂಡು ಕೆಬಿ ಗಣಪತಿಯವರ ಮಾತುಗಳನ್ನು ಕೇಳಿದ ಮೇಲೆ ನಾನು ಕೂಡ ಪತ್ರಿಕೆಯಲ್ಲಿ ಕೆಲಸ ಮಾಡುವ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಬಹುದೆಂದು ಪತ್ರಿಕ ರಂಗಕ್ಕೆ ಬಂದೆ ರೈತ ಚಳುವಳಿಯ ಜೊತೆಗೆ ಪತ್ರಿಕೆಯನ್ನು ನಡೆಸುತ್ತಿರುವ ರೈತ ಹೋರಾಟಗಾರ ಕಡಿದಾಳ್ ಶಾಮಣ್ಣನವರು ಸಹ ನನಗೆ ಸ್ಪೂರ್ತಿಯಾದರೂ ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಾಪುರ ಗ್ರಾಮದ ಕರಿಗೌಡ ಮಾಕಮ್ಮ ಎಂಬವರಿಗೆ ಜನಿಸಿದ ನಾನು ನನ್ನ ಹುಟ್ಟಿದ ದಿನಾಂಕ 1974 ನಾನು ಸಮಾಜದ ಅಂಕು ಡೊಂಕುಗಳನ್ನು ತಿಳಿದುಕೊಳ್ಳುವಷ್ಟು ಶಿಕ್ಷಣವನ್ನು ಪಡೆದುಕೊಂಡು ಈಗ ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಲು ನನಗೆ ಸಹಕಾರ ನೀಡಿದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳಿಗೆ ನಾನು ಚಿರುಣೆಯಾಗಿರುತ್ತೇನೆ ನನ್ನ ಆಸೆ ಒಂದೇ ಆಗಿತ್ತು, ನಾನು ಕೂಡ ಒಂದು ದಿನ ಸುತ್ತೂರು ಶ್ರೀಗಳ ಮಾಧ್ಯಮ ಪ್ರಶಸ್ತಿಯನ್ನು ಗ್ರಾಮೀಣ ಪತ್ರಕರ್ತನಾಗಿ ಪಡೆಯಬೇಕೆಂಬ ಆಸೆ ಇತ್ತು ಆ ಆಸೆಯನ್ನು ನಮ್ಮ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ನೆರವೇರಿಸಿದ್ದಾರೆ ಅದಕ್ಕೂ ಸಹ ನಾನು ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ.
ಗ್ರಾಮೀಣ ಪತ್ರಕರ್ತ ಟಿ ಕೆ ಬಸವರಾಜು ತಾಂಡವಪುರ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ











