ವಿಜಯ ದರ್ಪಣ ನ್ಯೂಸ್…..
ಟೇಕ್ವಾಂಡೊ ಕ್ರೀಡೆಯಲ್ಲಿ ಚಿನ್ನದ ಪದಕ ಗಲಿಸಿದ ಕ್ರೀಡಾಪಟುಗಳಿಗೆ ಸನ್ಮಾನಿಸಿದ ಸಚಿವ ಕೆಹೆಚ್.ಮುನಿಯಪ್ಪ

ಬೆಂಗಳೂರು: ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪ ರವರು ಇಂದು ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆಲೂರು ದುದ್ದನಹಳ್ಳಿಯ ಎಂವಿಎಂ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಹರಿಯಾಣದ ಪಾನಿಪತ್ ನಲ್ಲಿ ನಡೆದ ಅಂತರಾಷ್ಟ್ರೀಯ ಶಾಲಾ ಮಕ್ಕಳ ಕ್ರೀಡಾಕೂಡದಲ್ಲಿ ಭಾಗವಹಿಸಿದ ವರ್ಷನ್, ಶಾನ್ವಿ, ಜಶನ್, ದೀಕ್ಷಾ ಎಂಬ ವಿದ್ಯಾರ್ಥಿಗಳು ಟೇಕ್ವಾಂಡೊ ಎಂಬ ಕ್ರೀಡೆಯಲ್ಲಿ ಸ್ಪರ್ಧೆಮಾಡುವ ಮೂಲಕ ಚಿನ್ನದ ಪದಕ ಗಳಿಸಿದ್ದು ಉಳಿದ ಹೃತಿಕ್, ಮನ್ವಿತ್ ಗೌಡ, ಹರ್ಷಿತ, ತುಷಾರ್ ಸಾಯಿ ಯಾದವ್, ಚಿನ್ಮಯಿ ಇವರು ಟೇಕ್ವಾಂಡೊ ಎಂಬ ಕ್ರೀಡೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಕರ್ನಾಟಕಕ್ಕೆ ಮೊದಲಿಗೆ ಪದಕ ಗಲಿಸಿರುವ ಇವರು 90 ವರ್ಷಗಳಲ್ಲಿ ಐತಿಹಾಸಿಕ ಸಾಧನೆ ಮಾಡುವುದರೊಂದಿಗೆ ರಾಜ್ಯಕ್ಕೆ ಮೊದಲಿಗೆ ಪದಕ ಪಡೆಯುವಲ್ಲಿ ನಮ್ಮ ಕರ್ನಾಟಕದ ಪ್ರತಿಭೆಗಳು ಯಶಸ್ವಿಯಾಗಿದ್ದಾರೆ.
ಇವರು ಮುಂದೆ ನಡೆಯುವ ಖೇಲೋ ಇಂಡಿಯ ಯುವ ಕ್ರೀಡಾ ಕೂಟ ಹಾಗೂ 70 ನೇ ರಾಷ್ಟ್ರೀಯ ಕ್ರೀಡಾಕೂಟ 2026 ರಲ್ಲಿ ಭಾಗವಹಿಸಲಿದ್ದಾರೆ (SGFI)
ಈ ಸಂದರ್ಭದಲ್ಲಿ ಟೇಕ್ವಾಂಡೋ ತರಬೇತಿ ದಾರರಾದ ಶಂಕರ್ ಹಾಗೂ ಎಂವಿಎಂ ಶಾಲೆಯ ಅಧ್ಯಕ್ಷರಾದ ಗೌರವ್ ಉಪಸ್ಥಿತರಿದ್ದರು.











